ವಿದ್ಯಾರ್ಥಿಗೆ ಥಳಿಸಿದ್ದಕ್ಕಾಗಿ ಇಬ್ಬರು ಶಿಕ್ಷಕಿಯರಿಗೆ ಮೂರು ವರ್ಷ ಜೈಲು

  • ಶಿಕ್ಷಕಿಯರ ನ್ಯಾಯಾಂಗ ಬಂಧನಕ್ಕೆ ಕಳೆದ ವಾರ ಆದೇಶ
  •  ಶಿಕ್ಷಕಿಯರು ವಿದ್ಯಾರ್ಥಿಯ ಕಾಲುಗಳಿಗೆ ಥಳಿಸಿ, ಚಿವುಟಿದ ಆರೋಪ

ನೀರು ಕುಡಿಯಲು ಮತ್ತು ಶೌಚಾಲಯಕ್ಕೆ ಆಗಾಗ್ಗೆ ಹೋಗಲು ಅನುಮತಿ ಕೇಳುತ್ತಿದ್ದ  ಐದು ವರ್ಷದ ವಿದ್ಯಾರ್ಥಿಗೆ ಥಳಿಸಿದ್ದ ಇಬ್ಬರು ಶಿಕ್ಷಕಿಯರಿಗೆ ಗುಜರಾತ್‌ ಸ್ಥಳೀಯ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮಕರ್ಬಾದ ಅರ್ಜುನ್ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕಿಯರು ವಿದ್ಯಾರ್ಥಿಗೆ ಥಳಿಸಿದ್ದ ಪ್ರಕರಣದ ವಿಚಾರಣೆಯನ್ನು ಮಿರ್ಜಾಪುರ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಟಿ ಎ ಭಡ್ಜಾ ಅವರು ನಡೆಸಿದ್ದಾರೆ. 

Eedina App

ಶಿಕ್ಷಕಿಯರಾದ ತರುಣಾ ಪರ್ಬತಿಯಾ ಮತ್ತು ನಜ್ಮಾ ಶೇಖ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿರುವ ನ್ಯಾಯಾಧೀಶರು, ಅವರ ಜಾಮೀನು ಅರ್ಜಿ ರದ್ದುಗೊಳಿಸಿ ಇಬ್ಬರಿಗೂ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ಕಳೆದ ವಾರ, ಅವರನ್ನು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳುವಂತೆ ನ್ಯಾಯಾಧೀಶರು ಆದೇಶಿಸಿದ್ದರು. 

AV Eye Hospital ad

ಪ್ರಕರಣದ ವಿವರಗಳ ಪ್ರಕಾರ, 2017 ಜೂನ್ 22ರಂದು ಸರ್ಖೇಜ್ ಪೊಲೀಸ್ ಠಾಣೆಯಲ್ಲಿ ಶಿಕ್ಷಕರ ವಿರುದ್ಧ ದೂರು ದಾಖಲಾಗಿತ್ತು. ಶಿಶುವಿಹಾರದ ಇಬ್ಬರು ಶಿಕ್ಷಕಿಯರು ತನಗೆ ಮೂರು ದಿನಗಳಿಂದ ಹೊಡೆಯುತ್ತಿದ್ದಾರೆ ಎಂದು ವಿದ್ಯಾರ್ಥಿಯು ತಾಯಿಗೆ ತಿಳಿಸಿದ್ದ. ಬಳಿಕ ತಾಯಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. 

ಶಿಕ್ಷಕಿಯರು ತನ್ನ ಮಗನ ಕಾಲುಗಳಿಗೆ ಥಳಿಸಿ, ಚಿವುಟಿ ಹಾಕಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ವಿಎಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ತನ್ನ ಮಗ ನೀರು ಕುಡಿಯಲು, ಶೌಚಾಲಯಕ್ಕೆ ಹೋಗಲು ಅಥವಾ ಉಪಹಾರ ಸೇವಿಸಲು ಅವಕಾಶವಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ ಎಂದು ಮಗುವಿನ ತಾಯಿ ದೂರಿನಲ್ಲಿ ವಿವರಿಸಿದ್ದರು. 

ದೂರಿನ ಆಧಾರ ಮೇಲೆ, ಶಿಕ್ಷಕಿಯರ ವಿರುದ್ಧ ಐಪಿಸಿಯ ಸೆಕ್ಷನ್ 323 (ಗಾಯವನ್ನು ಉಂಟುಮಾಡಿದ ಆರೋಪ) ಮತ್ತು ಬಾಲ ನ್ಯಾಯ ಕಾಯಿದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. 

ಶಿಕ್ಷಕಿಯರು ಆರೋಪ ನಿರಾಕರಿಸಿದ್ದರು ಮತ್ತು ವಿಚಾರಣೆ  ಎದುರಿಸಿದ್ದರು. ಇದೀಗ, ಅವರನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಪರಿಗಣಿಸಿದೆ. 

ಇದನ್ನು ಓದಿದಿರಾ?: ಚಿಕ್ಕಬಳ್ಳಾಪುರ: ಅಮಾನಿ ಕೆರೆಯಲ್ಲಿ ಮೀನುಗಳ ಮಾರಣ ಹೋಮ

ಶಿಕ್ಷಕಿಯರಿಗೆ ನ್ಯಾಯಾಲಯ ಐಪಿಸಿ ನಿಬಂಧನೆಗಳ ಅಡಿಯಲ್ಲಿ ₹400 ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, ಬಾಲಾಪರಾಧಿ ಕಾಯ್ದೆಯಡಿ ಅವರಿಗೆ ಮೂರು ವರ್ಷಗಳ ಶಿಕ್ಷೆ ಮತ್ತು ₹10,000 ದಂಡ ವಿಧಿಸಿದೆ. 

ನಿಮಗೆ ಏನು ಅನ್ನಿಸ್ತು?
2 ವೋಟ್
eedina app