ಪುಟ್ಟಾರಾಧ್ಯ ಸಿದ್ದರಾಜು

Puttaradhya Siddaraju

ಹುಟ್ಟಿದ್ದು ಮಧುಗಿರಿ ತಾಲೂಕಿನ ಸಿಂಗ್ರಾವುತನಹಳ್ಳಿ. ಸಾಫ್ಟ್‌ವೇರ್ ಉದ್ಯೋಗ ಮಾಡುತ್ತ, ಕೃಷಿ ಮತ್ತು ಪರಿಸರದತ್ತ ಒಲವು ತಿರುಗಿತು. ಕೃಷಿ ಮಾಡುತ್ತ, ಬಯಲುಸೀಮೆಗಳ ಹಲವು ರೈತರ ತೋಟಗಳಿಗೆ ಅಲೆಯುತ್ತ, ನಮ್ಮ ಸುತ್ತಮುತ್ತಲೇ ಅದೇನೆಲ್ಲ ಪರಿಸರ ವಿಸ್ಮಯಗಳು ನಡೆಯುತ್ತವೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವಾಗ ಕಂಡದ್ದನ್ನು ದಾಖಲಿಸುವುದು ಅಭ್ಯಾಸ. 'ಚಂದನ' ವಾಹಿನಿಗಾಗಿ ಪರಿಸರ ಕುರಿತ ಕಾರ್ಯಕ್ರಮ ಸರಣಿ ನಿರ್ಮಾಣ.