ದಕ್ಷಿಣ ಕನ್ನಡ | ಸಹೋದರರ ಜಗಳ ಕೊಲೆಯಲ್ಲಿ ಅಂತ್ಯ

Dakshina kannada
  • ಸಹೋದರರಿಬ್ಬರ ನಡುವೆ ಜಗಳ
  • ಅಣ್ಣನನ್ನು ಕೊಲೆ ಮಾಡಿದ ತಮ್ಮ

ಜಾಗದ ವಿಚಾರವಾಗಿ ಸಹೋದರರಿಬ್ಬರ ನಡುವೆ ಗಲಾಟೆ ನಡೆದಿದ್ದು, ಅಣ್ಣನನ್ನು ತಮ್ಮ ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಡಂಗೆ ಎಂಬಲ್ಲಿ ನಡೆದಿದೆ.

ಕೊಡಂಗೆಯ ಬನಾರಿ ನಿವಾಸಿ ಗಣೇಶ್ (53) ಕೊಲೆಯಾದ ದುರ್ದೈವಿ. ಪದ್ಮನಾಭ (49) ಕೊಲೆ ಮಾಡಿದ ಆರೋಪಿ. ಕೊಲೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಸುದ್ದಿ ಓದಿದ್ದೀರಾ?: ಬೀದರ್ | ಒತ್ತಡವನ್ನು ನಿಭಾಯಿಸುವ ಶಕ್ತಿ ವಿದ್ಯಾರ್ಥಿಗೆ ಇರಬೇಕು: ಬಸವರಾಜ ಎಸ್. ಚೇಗರೆಡ್ಡಿ

ಅಣ್ಣ ಗಣೇಶ ಹಾಗೂ ತಮ್ಮ ಪದ್ಮನಾಭ ನಡುವೆ ಮಂಗಳವಾರ ರಾತ್ರಿ ಜಾಗದ ವಿಚಾರವಾಗಿ ಗಲಾಟೆ ನಡೆದಿದೆ. ಗಲಾಟೆ ತರಾಕರೇರಿದ್ದು, ಗಣೇಶನನ್ನು ಪದ್ಮನಾಭ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಅಣ್ಣ ತಮ್ಮಂದಿರಿಬ್ಬರು ಕುಡಿತದ ಚಟಕ್ಕೆ ಒಳಗಾಗಿದ್ದರು. ಕಳೆದ ತಿಂಗಳು ಕುಡಿದ ಮತ್ತಿನಲ್ಲಿ ಅಣ್ಣ ತಮ್ಮಂದಿರು ಜಗಳವಾಡಿಕೊಂಡಿದ್ದಾರೆ. ಈ ವೇಳ ಅಣ್ಣನನ್ನು ತಮ್ಮ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಕೊಲೆ ನಡೆದಿರುವ ಬಗ್ಗೆ ಬುಧವಾರ ಪೊಲೀಸರಿಗೆ ಮಾಹಿತಿ ಬಂದಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್