- ಹೆದ್ದಾರಿ ಅಗಲೀಕರಣಕ್ಕೆ ನಿಯುಕ್ತಿಗೊಂಡಿದ್ದ ಲಾರಿ
- ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕೋಟೇಲು ಸೇತುವೆಯ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಪಲ್ಟಿ ಹೊಡೆದಿದೆ. ಲಾರಿ ಚಾಲಕ ಸಹಿತ ನಾಲ್ವರಿಗೆ ತೀವ್ರ ಗಾಯಗಳಾಗಿವೆ.
ಹೆದ್ದಾರಿ ಪ್ರಾಧಿಕಾರ ಕೈಗೊಂಡಿದ್ದ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ನಿಯುಕ್ತಿಗೊಂಡ ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕ ಮಧ್ಯಪ್ರದೇಶದ ಮೂಲದ ನಾರಾಯಣ್, ಲಾರಿ ಕ್ಲೀನರ್ ಪುಷ್ಟೇಂದ್ರ ಹಾಗೂ ಇನ್ನಿಬ್ಬರಿಗೆ ಗಾಯಗಳಾಗಿವೆ.
ಈ ಸುದ್ದಿ ಓದಿದ್ದೀರಾ?: ಹಾಸನ | ಸಕಲೇಶಪುರ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿಗೆ ದಸಂಸ ಕರೆ
ಗುರುವಾರ ರಾತ್ರಿ ಸೇತುವೆಯ ಬಳಿ ಲಾರಿ ಬಂದಾಗ ಚಾಲಕ ನಿಯಂತ್ರಣ ತಪ್ಪಿ ಲಾರಿ ಹೆದ್ದಾರಿ ನಡುವೆಯೇ ಮಗುಚಿದೆ. ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಲಾರಿ ಚಾಲಕ ಸಹಿತ ನಾಲ್ಕು ಜನರನ್ನು ರಕ್ಷಿಸಿದ್ದಾರೆ. ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.