- ಮೂರನೇ ತರಗತಿಯಲ್ಲಿ ಓದುತ್ತಿರುವ ದೀಕ್ಷಿತ್
- ಜನವರಿ 26ರಂದು ನಡೆಯಲಿರುವ ಕಾರ್ಯಕ್ರಮ
ತನ್ನ ಸಮಯ ಪ್ರಜ್ಞೆಯಿಂದ ತಾಯಿಯ ಪ್ರಾಣ ಕಾಪಾಡಿದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಗ್ರಾಮದ ಬಾಲಕ ದೀಕ್ಷಿತ್ ಈ ಬಾರಿಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಗಣರಾಜ್ಯೋತ್ಸವ ಅಂಗವಾಗಿ ಜನವರಿ 26ರಂದು ನಡೆಯಲಿರುವ ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಕ ದೀಕ್ಷಿತ್ (9) ಶೌರ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ದೀಕ್ಷಿತ್ ಅವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕನ್ನಡಿಗರ ಆಕ್ರೋಶಕ್ಕೆ ಮಣಿದ ಕೇಂದ್ರ ಸರ್ಕಾರ: ಗಣರಾಜ್ಯೋತ್ಸವದಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ
ಕಳೆದ ವರ್ಷ ನವೆಂಬರ್ 24ರಂದು ಬಾಲಕ ದೀಕ್ಷಿತ್ ತಾಯಿ ಅರ್ಪಿತಾ ಗಿರಣಿ ಅಂಗಡಿಗೆ ತೆರಳಿದ್ದರು. ಅಂಗಡಿಯಲ್ಲಿದ್ದ ಅಕ್ಕಿಯನ್ನು ಹಿಟ್ಟು ಮಾಡುವ ಯಂತ್ರದ ಬೆಲ್ಟ್‌ಗೆ ಅರ್ಪಿತಾ ತಲೆ ಆಕಸ್ಮಿಕವಾಗಿ ಸಿಲುಕಿದ್ದು, ಆಕೆ ಕಿರುಚಿಕೊಂಡಿದ್ದಾರೆ.
ತಾಯಿಯ ಕೂಗು ಕೇಳಿ ಆಟವಾಡುತ್ತಿದ್ದ ದೀಕ್ಷಿತ್ ಸ್ಥಳಕ್ಕೆ ಧಾವಿಸಿ ತಕ್ಷಣ ಗಿರಣಿಯ ಸ್ವಿಚ್‌ಅನ್ನು ಸ್ಥಗಿತಗೊಳಿಸಿದ್ದ. ಮಗನ ಸಮಯ ಪ್ರಜ್ಞೆಯಿಂದ ತಾಯಿ ಅರ್ಪಿತಾ ಪ್ರಾಣಾಪಾಯದಿಂದ ಪಾರಾಗಿದ್ದರು.