ಕೊಡಗು | ಹಿರಿಯರ ಸ್ಮರಣೆಗಾಗಿ ದತ್ತಿನಿಧಿ ಸ್ಥಾಪಿಸಬೇಕು: ಟಿ ಪಿ ರಮೇಶ್

kodagu
  • ಕಟ್ಟೆಮನೆ ಪುಟ್ಟಸ್ವಾಮಿ ದತ್ತಿನಿಧಿ ಉದ್ಘಾಟನೆ
  • ‘ಹಿರಿಯರ ಸ್ಮರಣೆಗಾಗಿ ದತ್ತಿನಿಧಿ ಕಾರ್ಯಕ್ರಮ ಪೂರಕ’

ಕೊಡಗಿನ 289 ಸ್ವಾತಂತ್ರ್ಯ ಸೇನಾನಿಗಳಲ್ಲಿ ಶನಿವಾರಸಂತೆಯ ಕಟ್ಟೆಮನೆ ಪುಟ್ಟಸ್ವಾಮಿಯವರು ಒಬ್ಬರಾಗಿದ್ದರು. ಎತ್ತಿನ ಗಾಡಿಯಲ್ಲಿ ಮಡಿಕೇರಿಗೆ ಹೋಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಹಿರಿಯರ ಸ್ಮರಣೆಗಾಗಿ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಹೇಳಿದರು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ‘ಕಟ್ಟೆಮನೆ ಪುಟ್ಟಸ್ವಾಮಿ ದತ್ತಿ ನಿಧಿ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿ.ಪಿ ರಮೇಶ್ ಮಾತನಾಡಿದರು., “ಪುಟ್ಟಸ್ವಾಮಿ ತಮ್ಮ ಜೀವನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟಿದ್ದರು. ಗಾಂಧೀಜಿಯವರ ಕರೆ ಮೇರೆಗೆ ಶನಿವಾರಸಂತೆಯಲ್ಲಿ ಪಾದಯಾತ್ರೆ ಮಾಡಿ ಹಣ ಸಂಗ್ರಹ ಮಾಡಿದ್ದರು” ಸ್ಮರಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿ.ಕೆ ದಿನೇಶ್ ಮಾತನಾಡಿ, “ಮನುಷ್ಯನ ಮರಣದ ನಂತರ ಸ್ಮರಣೆಗಾಗಿ ದತ್ತಿನಿಧಿ ಕಾರ್ಯಕ್ರಮ ಪೂರಕವಾಗಿದೆ. ಕಸಾಪ ಸದಸ್ಯತ್ವ ಶಿಕ್ಷಕರಿಗೆ ಕಡ್ಡಾಯವಾಗಬೇಕು. ಮುಂದಿನ ಕಾರ್ಯಕ್ರಮಗಳಲ್ಲಿ 10 ದತ್ತಿನಿಧಿ ಸ್ಥಾಪನೆ ಮಾಡವ ಪ್ರಯತ್ನ ಮಾಡಲಾಗುವುದು” ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, “ಕಸಾಪ ಸದಸ್ಯತ್ವ ಆಂದೋಲನ ಹಮ್ಮಿಕೊಂಡಿದ್ದು, ರಾಜ್ಯಾಧ್ಯಕ್ಷ ಮಹೇಶ್ ಜೋಶಿಯವರ ಸೂಚನೆಯಂತೆ ಸೈನಿಕರಿಗೆ, ಅಂಗವಿಕಲರಿಗೆ ಉಚಿತ ಸದಸ್ಯತ್ವ ನೀಡಲಾಗುವುದು. ಜಿಲ್ಲೆಯಲ್ಲಿ ಸೈನಿಕ ಸಮ್ಮೇಳನ ನಡೆಸುವ ಚಿಂತನೆ ನಡೆಯುತ್ತಿದೆ” ಎಂದರು.

ಈ ಸುದ್ದಿ ಓದಿದ್ದೀರಾ?: ಕಲಬುರಗಿ-ಕೊಲ್ಹಾಪುರ ರೈಲು ಸಂಚಾರ: ಕೇಂದ್ರ ಸಚಿವರಿಂದ ಹಸಿರು ನಿಶಾನೆ

ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ ವಿಜೇತ್ ಮಾತನಾಡಿ, ”ಕಸಾಪ ದತ್ತಿನಿಧಿ ಕಾರ್ಯಕ್ರಮ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಕನ್ನಡದ ಶಾಲೆಗಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಕಂಪು ಹರಡುತ್ತಿರುವುದು ಪ್ರೇರಣದಾಯಕವಾಗಿದೆ” ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಪ್ರೇಮಕುಮಾರ್ ‘ಬಾಳೊಂದು ನಂದಾದೀಪ’ ಸ್ವರಚಿತ ಕವನ ಸಂಕಲನ ವಿತರಿಸಿದರು. ಕಸಾಪ ತಾಲೂಕು ಘಟಕದ ಪದಾಧಿಕಾರಿ ಎಚ್.ಬಿ ಜಯಮ್ಮ 50 ಸಾವಿರ ರೂಪಾಯಿ ದತ್ತಿನಿಧಿ ಸ್ಥಾಪಿಸುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಶಿಕ್ಷಕ ಬಿ.ಟಿ ವಿಶ್ವನಾಥ್, ಎಸ್ಡಿಎಂಸಿ ಅಧ್ಯಕ್ಷೆ ಶಾಲಿನಿ, ಕಸಾಪ ಜಿಲ್ಲಾ ಘಟಕದ ಸದಸ್ಯ ಮಂಜುನಾಥ್, ತಾಲೂಕು ಪದಾಧಿಕಾರಿಗಳಾದ ವೀರರಾಜು, ಕೆ.ಪಿ.ಜಯಕುಮಾರ್, ಶ.ಗ ನಯನತಾರಾ, ಶಾಂತಳ್ಳಿ ಘಟಕದ ಅಧ್ಯಕ್ಷ ಸಿ.ಎಸ್ ನಾಗರಾಜ್, ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ ನಾಗರಾಜ್, ಪದಾಧಿಕಾರಿಗಳಾದ ಎ.ಬಿ ನಂಜಪ್ಪ, ಶಿವಪ್ಪ, ಶಶಿಕಲಾ, ಸಿ.ಎಂ ಪುಟ್ಟಸ್ವಾಮಿ, ಎಸ್.ಎಂ ಮಹೇಶ್, ಪ್ರಕಾಶ್ಚಂದ್ರ, ನರೇಶ್ಚಂದ್ರ, ಮುಖ್ಯಶಿಕ್ಷಕ ಪುಟ್ಟಸ್ವಾಮಿ, ಮಂಜುನಾಥ್ ಮತ್ತಿತ್ತರು ಉಪಸ್ಥಿತರಿದ್ದರು.

ಮಾಸ್‌ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್‌ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್