ಕೊಡಗು | ಎಂ.ಎ ರುಬೀನಾಗೆ ‘ಎ ಕೆ ಸುಬ್ಬಯ್ಯ ಮಹಿಳಾ ಸಾಧಕಿ' ಪ್ರಶಸ್ತಿ

 A K Subbayya Award
  • ಸಮಾಜ ಸೇವೆ ಮಾಡುವ ಮಹಿಳೆಯರಿಗೆ ಪ್ರಶಸ್ತಿ ನೀಡಲು ಸಂಸ್ಥೆ ತೀರ್ಮಾನ
  • “ಸುಬ್ಬಯ್ಯನವರ ಹೆಸರಿನ ಪ್ರಶಸ್ತಿ ಪಡೆಯುತ್ತಿರುವುದೇ ನನಗೆ ದೊಡ್ಡ ಗೌರವ”

ಎ ಕೆ ಸುಬ್ಬಯ್ಯನವರ ಸ್ಮರಣಾರ್ಥ ‘ಸೆಂಟರ್ ಫಾರ್ ಅಡ್ವಾನ್ಸ್‌ಡ್‌ ರಿಸರ್ಚ್ ಇನ್ ಎಜುಕೇಶನ್'  (ಸಿಎಆರ್‌ಇ) ನೀಡುವ ‘ಎ.ಕೆ ಸುಬ್ಬಯ್ಯ ಮಹಿಳಾ ಸಾಧಕಿ ಪ್ರಶಸ್ತಿ’ಗೆ ಕೊಡಗಿನ ಎಂ.ಎ ರುಬೀನಾ ಅವರು ಭಾಜನರಾಗಿದ್ದಾರೆ. 

ಮಂಗಳವಾರ ಮಡಿಕೇರಿ ನಗರದ ಕ್ರೆಸ್ಸೆಂಟ್ ಶಾಲೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಸೋಮವಾರಪೇಟೆ ತಾಲೂಕಿನ ಎಂ.ಎ ರುಬೀನಾ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. 

'ಶ್ರೀಕ್ಷೇತ್ರ ಧರ್ಮಸ್ಥಳ ಗಾಮಭಿವೃದ್ದಿ ಯೋಜನೆ'ಯಲ್ಲಿ ಸೇವಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿರುವ ರುಬೀನಾ ಉತ್ತಮ ಸೇವೆ ಸಲ್ಲಿಸಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳೊಂದಿಗೆ ಸೇರಿ ಸಾರ್ವಜನಿಕರಿಗೆ ನೆರವು ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯೆಯಾಗಿ ಹಲವಾರು ಕನ್ನಡ ಪರ ಹೋರಾಟಗಳಲ್ಲೂ ಭಾಗಿಯಾಗಿದ್ದರು. ಅವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. 

ಈ ಸುದ್ದಿ ಓದಿದ್ದಿರಾ?: ಶಿವಮೊಗ್ಗ | ಧಾರಾಕಾರ ಮಳೆಗೆ ಜಲಾವೃತಗೊಂಡ ಬೀಸನಗದ್ದೆ ಗ್ರಾಮ; ರಸ್ತೆ ಸಂಪರ್ಕ ಕಡಿತ 

“ಶ್ರೀಕ್ಷೇತ್ರ ಧರ್ಮಸ್ಥಳ ಗಾಮಭಿವೃದ್ದಿ ಯೋಜನೆಯಲ್ಲಿ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡುವ ಮೂಲಕ ನಾನು ಸೇವಾಕಾರ್ಯದಲ್ಲಿ ತೊಡಗಿದೆ. ಆ ಕೆಲಸವೇ ಇಂದು ನನ್ನನ್ನು ‘ಎ.ಕೆ ಸುಬ್ಬಯ್ಯ ಮಹಿಳಾ ಸಾಧಕಿ' ಪ್ರಶಸ್ತಿ ಪಡೆಯುವಲ್ಲಿಗೆ ತಂದು ನಿಲ್ಲಿಸಿದೆ. ಅವರ ಹೆಸರಿನ ಪ್ರಶಸ್ತಿ ಪಡೆಯುತ್ತಿರುವುದೇ ನನಗೆ ದೊಡ್ಡ ಗೌರವ” ಎಂದು ರುಬಿನಾ ಹೇಳಿದ್ದಾರೆ. 

ಕ್ರೆಸ್ಸೆಂಟ್ ಶಾಲೆಯ ವ್ಯವಸ್ಥಾಪಕಿ ಶ್ರೀಮತಿ ಸುಳ್ಹತ್, ಸಿಎಆರ್‌ಇ ಸಂಸ್ಥೆಯ ಸಂಯೋಜಕ ಅಬ್ದುಲ್ಲಾ ಮೇಲೆದಿಲ್ ಮತ್ತು ಶಾಹೀನ್ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ತೌಸೀಫ್ ಅಹ್ಮದ್ ಅವರು ರುಬೀನಾ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

“ದಮನಿತರ ಧ್ವನಿಯಾಗಿದ್ದಂತಹ ಎ.ಕೆ ಸುಬ್ಬಯ್ಯನವರ ಸ್ಮರಣಾರ್ಥ ನಾವು ಈ ಪ್ರಶಸ್ತಿಯನ್ನು ಸಮಾಜ ಸೇವೆ ಮಾಡುವ ಮಹಿಳೆಯರಿಗೆ ನೀಡಲು ತೀರ್ಮಾನಿಸಿದ್ದೇವೆ. ಮುಂದಿನ ವರ್ಷದ ಪ್ರಶಸ್ತಿಗಾಗಿ ಅಕ್ಟೋಬರ್ ತಿಂಗಳಿನಲ್ಲಿ ಅರ್ಜಿ ಕರೆಯಲಾಗುತ್ತದೆ. ಸಂಸ್ಥೆಯ ಮೂಲಕ ದಮನಿತ ಸಮುದಾಯದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ” ಎಂದು ಡಾ. ತೌಸೀಫ್ ಅಹ್ಮದ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್