ಮಹಾರಾಷ್ಟ್ರ | ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಿ ಮನೆ ನಿರ್ಮಿಸಿದ ಯುವತಿಯರು

  • ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಿ ಮನೆ ನಿರ್ಮಿಸಿದ ಯುವತಿಯರು
  • ಅಸ್ಸಾಂನ ಅಕ್ಷರ ಶಾಲೆಯಿಂದ ಸ್ಫೂರ್ತಿ ಪಡೆದು ಪರಿಸರಸ್ನೇಹಿ ಮನೆ

ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಿ ಮನೆ ಕಟ್ಟುವುದಿದೆಯೆ? 'ಹೌದು' ಎನ್ನುತ್ತಾರೆ ಔರಂಗಬಾದ್‌ನ ಇಬ್ಬರು ಪೋರಿಯರು. ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಿ ಮನೆ ಕಟ್ಟಿ ತೋರಿಸಿದ್ದಾರೆ ಅವರು.

ನಮಿತಾ ಕಪಾಲೆ ಮತ್ತು ಕಲ್ಯಾಣಿ ಭರ್‌ಂಬೆ ಅವರು ಔರಂಗಾಬಾದ್‌ ಸಮೀಪದ ಶರ್ನಾಪುರ ಎಂಬ ಸಣ್ಣ ಪಟ್ಟಣದಲ್ಲಿ ʻಇಕೋಬ್ರಿಕ್‌ʼ ಪರಿಕಲ್ಪನೆಯ ಮೂಲಕ ಪರಿಸರ ಸ್ನೇಹಿ ಮನೆ ನಿರ್ಮಿಸಿದ್ದಾರೆ.

ಔರಂಗಾಬಾದ್‌ನ ಸರ್ಕಾರಿ ಕಾಲೇಜಿನಲ್ಲಿ ಲಲಿತಕಲೆ ವ್ಯಾಸಂಗ ಮಾಡುತ್ತಿರುವ  ನಮಿತಾ ಮತ್ತು ಕಲ್ಯಾಣಿ, ಲಾಕ್‌ಡೌನ್‌ ಸಮಯದಲ್ಲಿ ಇಂಟರ್‌ನೆಟ್‌ ವಿಡಿಯೋಗಳನ್ನು ನೋಡಿ, ಪರಿಸರ ಸ್ನೇಹಿ ಮನೆ ನಿರ್ಮಿಸುವ ಯೋಜನೆಗೆ ಅಡಿಯಿಟ್ಟರು.

ಯುವತಿಯರಿಬ್ಬರು 2021ರಲ್ಲಿ ಇಬ್ಬರು ಬೀದಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲು ಆರಂಭಿಸುವ ಮೂಲಕ ಮನೆ ನಿರ್ಮಿಸುವ ಅನ್ವೇಷಣೆ ಪ್ರಾರಂಭವಾಯಿತು. ಈ ಪ್ರಯತ್ನಕ್ಕಾಗಿ ಅವರು 16 ಸಾವಿರ ಬಾಟಲಿಗಳನ್ನು ಸಂಗ್ರಹಿಸಿದರು. ಆರಂಭದಲ್ಲಿ, ಮಣ್ಣು, ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬಿದಿರು ಬಳಸಿ ಪರಿಸರ ಇಟ್ಟಿಗೆಗಳನ್ನು ತಯಾರಿಸಿದರು. ಬಾಟಲಿಗಳ ಇಟ್ಟಿಗೆಗಳನ್ನು ಒಂದರ ಮೇಲೊಂದು ಜೋಡಿಸಿ ಮಣ್ಣು ಮತ್ತು ಸಗಣಿ ಮಿಶ್ರಣದಿಂದ ಪ್ಲಾಸ್ಟರ್ ಮಾಡಲಾಗಿತ್ತು.

ಈ ಸುದ್ದಿ ಓದಿದ್ದೀರಾ?: ಅಮೃತ ಮಹೋತ್ಸವ| ಬೆಂಗಳೂರಿನ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಬೇಕು: ತುಷಾರ್ ಗಿರಿನಾಥ್

ಛಾವಣಿಯನ್ನು ಬಿದಿರು ಮತ್ತು ಮರದ ಸಹಾಯದಿಂದ ನಿರ್ಮಿಸಲಾಗಿದೆ. ಆದರೆ ಬಾಗಿಲು ಮತ್ತು ಕಿಟಕಿಗಳನ್ನು ಮರದಿಂದ ಮಾಡಲಾಗಿತ್ತು. ಮನೆ ಸುಮಾರು 4 ಸಾವಿರ ಚದರ ಅಡಿ ಇದೆ. ಮನೆ ನಿರ್ಮಾಣಕ್ಕೆ ಸುಮಾರು ಏಳು ಲಕ್ಷ ಹಣ ವೆಚ್ಚವಾಗಿದೆ. ಈ ವಿಶಿಷ್ಟ ಪ್ರಯೋಗವು ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗ ತೋರಿಸುತ್ತದೆ.

Image

ಶಾಲಾ ಪ್ರವೇಶ ಶುಲ್ಕದ ಬದಲಿಗೆ ಪ್ಲಾಸ್ಟಿಕ್‌ ತ್ಯಾಜ್ಯ

ಪರಿಸರ ಸ್ನೇಹಿ ಶಾಲೆ ಎಂದೇ ಹೆಸರಾಗಿರುವ ಅಸ್ಸಾಂನ ʻಅಕ್ಷರʼ ಖಾಸಗಿ ಶಾಲೆಯಿಂದ ಯುವತಿಯರು ಪ್ಲಾಸ್ಟಿಕ್‌ ಮನೆ ಕಟ್ಟಲು ಸ್ಫೂರ್ತಿ ಪಡೆದಿದ್ದಾರೆ. ಕಡಿಮೆ ಆದಾಯದ ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬದಲಾಗಿ ಗುಣಮಟ್ಟದ ಶಿಕ್ಷಣ ಪಡೆಯಲು ಅನುಮತಿ ನೀಡುವ ವಿಶೇಷ ಶಾಲೆ ಇದಾಗಿದೆ.

ಪರ್ಮಿತಾ ಶರ್ಮಾ ಮತ್ತು ಮಜಿನ್‌ ಮುಖ್ತಾರ್‌ ಜೋಡಿಗಳಿಬ್ಬರು ಜೊತೆಯಾಗಿ ಈ ಶಾಲೆಯನ್ನು 2016ರಲ್ಲಿ ಸ್ಥಾಪಿಸಿದರು. ಶಾಲೆಯಲ್ಲಿ ಮಕ್ಕಳು ಕಲಿಯುವಾಗ ಸುಟ್ಟ ಪ್ಲಾಸ್ಟಿಕ್‌ ಮತ್ತು ವಿಷಕಾರಿ ತ್ಯಾಜ್ಯದ ವಾಸನೆಯಿಂದ ಬೇಸತ್ತ ಅವರು, ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಕ್ಕಳ ಶಾಲಾ ಶುಲ್ಕದ ಬದಲಿಗೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪಾವತಿಸುವಂತೆ ಕೇಳಲು ನಿರ್ಧರಿಸಿದರು.

ಬೊಕಾಸ್ ಡೆಲ್ ಟೊರೊ ದ್ವೀಪ ಸಮೂಹದಲ್ಲಿರುವ ಇಸ್ಲಾ ಕೊಲೊನ್ ವಿಶ್ವದ ಮೊದಲ ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಾಣಗೊಂಡಿರುವ ಗ್ರಾಮವಾಗಿದೆ.

ನಿಮಗೆ ಏನು ಅನ್ನಿಸ್ತು?
5 ವೋಟ್