
ಕ್ರಿಕೆಟ್ ಅನ್ನು ಜಂಟಲ್ಮನ್ಗಳ ಗೇಮ್ ಎಂದು ಕರೆಯಲಾಗುತ್ತದೆ. ಮಹಿಳೆಯರೂ ಕ್ರಿಕೆಟ್ ಆಡಲಾರಂಭಿಸಿ, ಈ ತಾರತಮ್ಯಕ್ಕೆ ಸವಾಲು ಎಸೆದಿದ್ದಾರೆ. ಗಂಡಸರ ಆಟವಷ್ಟೇ ಆಗಿ ಉಳಿದ ಕ್ರಿಕೆಟ್ನಲ್ಲಿ ಭಾರತೀಯ ಮಹಿಳೆಯರ ಸಾಧನೆಯೂ ಏನು ಕಡಿಮೆ ಇಲ್ಲ. ಮೂರು ದಶಕಗಳ ಅವಧಿಯಲ್ಲಿ ನಿಧಾನವಾಗಿ ಭಾರತದ ಕ್ರಿಕೆಟ್ ತಂಡ ಬಲಿಷ್ಠ ತಂಡವಾಗಿ ಬೆಳೆದು ನಿಂತಿದೆ. ಇಂದು ವಿಶ್ವಕಪ್ ಗೆಲ್ಲಬಹುದಾದ ತಂಡವಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿ ಪುರುಷರ ಕ್ರಿಕೆಟ್ಗೆ ಸಿಗುವ ಅರ್ಧದಷ್ಟು, ಪ್ರೋತ್ಸಾಹವನ್ನು ಕಾಣದ ಮಹಿಳಾ ಇಷ್ಟು ಎತ್ತರಕ್ಕೆ ಬೆಳೆದಿರುವುದನ್ನು ಶ್ಲಾಘಿಸಲೇಬೇಕು. 1976 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದ ಭಾರತೀಯ ಮಹಿಳಾ ಕ್ರಿಕೆಟಿಗರು ಎರಡೇ ವರ್ಷದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಿದ್ದರು.
1978 ರಲ್ಲಿ ವಿಶ್ವಕಪ್ಗೆ ಪದಾರ್ಪಣೆ ಮಾಡಿದ ನಂತರ ಒಂದು ವಿಶ್ವಕಪ್ ಗೆಲ್ಲಲಿಲ್ಲ ಎನ್ನುವುದು ನಿಜ. ಆದರೆ 1997, 2000 ಮತ್ತು 2009ರಲ್ಲಿ ಸೆಮಿಫೈನಲ್ ಪ್ರವೇಶ ಮಾಡಿ ಆಟದ ಬಗೆಗಿನ ತಮ್ಮ ತೀವ್ರ ಸೆಳೆತ, ಬದ್ಧತೆಯನ್ನು ಕಾಣಬಹುದು. 2005 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 98 ರನ್ಗಳಿಂದ, 2017 ರಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್ಗಳಿಂದ, 2022 ರಲ್ಲಿ ʼಬಾಂಗ್ಲಾದೇಶದ ಮೌಂಟ್ ಮೌಂಗನುಯಿನಲ್ಲಿʼ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ107 ರನ್ಗಳ ಬೃಹತ್ ಅಂತರದಿಂದ ಗೆಲ್ಲುವ ಮೂಲಕ ಭಾರತದ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ಬರೆದಿದೆ.
ಬಿಸಿಸಿಐ ಪ್ರಕಟಿಸಿರುವ 2020 ರ ಅಕ್ಟೋಬರ್ನಿಂದ 21ರ ಸೆಪ್ಟೆಂಬರ್ವರೆಗಿನ ವಾರ್ಷಿಕ ಗುತ್ತಿಗೆಯಲ್ಲಿ ಮಹಿಳಾ ತಂಡದ 19 ಆಟಗಾರ್ತಿಯರೂ ಮೊದಲ ಬಾರಿಗೆ ಸ್ಥಾನ ಪಡೆದರು. ಬಿಸಿಸಿಐ ನೀಡುವ ವಾರ್ಷಿಕ ಗುತ್ತಿಗೆಯನ್ನು ಮೂರು ಗ್ರೇಡ್ಗಳಂತೆ ವಿಭಾಗಿಸಲಾಗಿದ್ದು, ಗ್ರೇಡ್ 'ಎ'ಯಲ್ಲಿ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ, ಪೂನಂ ಯಾದವ್ ಸ್ಥಾನಪಡೆದಿದ್ದಾರೆ. ಈ ಆಟಗಾರ್ತಿಯರು ವಾರ್ಷಿಕ 50 ಲಕ್ಷ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.
ಗ್ರೇಡ್ 'ಬಿ'ಯಲ್ಲಿ ಶಫಾಲಿ ವರ್ಮಾ, ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ದೀಪ್ತಿ ಶರ್ಮಾ, ಪೂನಂ ರಾವತ್, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ಶಿಖಾ ಪಾಂಡೆ, ತಾನಿಯಾ ಭಾಟಿಯಾ, ಜೆಮಿಯಾ ರೋಡ್ರಿಗಸ್ ಈ ಆಟಗಾರ್ತಿಯರು ವಾರ್ಷಿಕ 30 ಲಕ್ಷ ರುಪಾಯಿ ಸಂಭಾವನೆ ಪಡೆಯತ್ತಾರೆ. ಗ್ರೇಡ್ 'ಸಿಯಲ್ಲಿ ಪ್ರಿಯಾ ಪೂನಿಯಾ, ರಿಚಾ ಘೋಷ್, ಮಾನಸಿ ಜೋಶಿ, ಅರುಂದತಿ ರೆಡ್ಡಿ, ಪೂಜಾ ವಸ್ತ್ರಾಕರ್, ಹರ್ಲಿನ್ ಡಿಯೋಲ್ ಸ್ಥಾನಪಡೆದಿದ್ದಾರೆ ಇವರು ವಾರ್ಷಿಕ ರೂ. 10 ಲಕ್ಷ ಸಂಭಾವನೆ ಪಡೆಯಲಿದ್ದಾರೆ
ಮಹಿಳಾ ಕ್ರಿಕೆಟ್ ತಂಡದ ವಿವರ
1) ಸ್ಮೃತಿ ಮಂದಾನ

ಸ್ಮೃತಿ ಶ್ರೀನಿವಾಸ್ ಮಂದಾನ ಏಕದಿನ ಕ್ರಿಕೆಟ್ ಆಟದಲ್ಲಿ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಮಹಿಳೆ. ಜೂನ್ 2018ರಲ್ಲಿ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಇವರನ್ನು ಅತ್ಯುತ್ತಮ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ಎಂದು ಹೆಸರಿಸಿದೆ.
2) ಮಿಥಾಲಿ ದೊರೈ ರಾಜ್

ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿರುವ ಇವರು, ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಟೆಸ್ಟ್ ಮತ್ತು ಏಕದಿನ ಪಂದ್ಯಗಳ ನಾಯಕಿಯಾಗಿದ್ದಾರೆ.
3) ಜೂಲನ್ ಗೋಸ್ವಾಮಿ

ಭಾರತ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ, ಪ್ರಸುತ್ತ ಭಾರತ ತಂಡದ ಖಾಯಂ ಆಟಗಾರ್ತಿಯಾಗಿದ್ದಾರೆ.
4) ಹರ್ಮನ್ಪ್ರೀತ್ ಕೌರ್

ಹರ್ಮನ್ಪ್ರೀತ್ ಕೌರ್ ಭಾರತೀಯ ಟಿ20 ತಂಡದ ನಾಯಕಿ ಮತ್ತು ಆಲ್ ರೌಂಡರ್. 2017ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದಾರೆ.
5) ಸ್ನೇಹ ರಾಣಾ

ಭಾರತೀಯ ಮಹಿಳಾ ಟೆಸ್ಟ್ ಮತ್ತು ಏಕದಿನ ತಂಡದ ಅಟಗಾರ್ತಿಯಾಗಿದ್ದಾರೆ.
6) ರಾಜೇಶ್ವರಿ ಗಾಯಕ್ವಾಡ್

ರಾಜೇಶ್ವರಿ ಗಾಯಕ್ವಾಡ್ ಅವರು 19 ಜನವರಿ 2014 ರಂದು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಭಾರತ ತಂಡದ ಆಲ್ ರೌಂಡರ್ ಆಟಗಾರ್ತಿಯಾಗಿದ್ದಾರೆ.
7) ದೀಪ್ತಿ ಶರ್ಮಾ

ಭಾರತ ತಂಡದ ಆಲ್ರೌಂಡರ್ ಅಗಿರುವ ಇವರು ಐಸಿಸಿ ಕ್ರಿಕೆಟ್ ರ್ಯಾಂಕಿಂಗ್ ನಲ್ಲಿ ಅಗ್ರ ಆಲ್ರೌಂಡರ್ಗಳ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದ್ದಾರೆ.
8) ರಿಚಾ ಘೋಷ್

ತನ್ನ 16 ವಯಸ್ಸಿನಲ್ಲಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. 2019 ರಿಂದ ಭಾರತ ತಂಡದಲ್ಲಿ ಸದಸ್ಯರಾಗಿರುವ ಅವರು, 2020ರಲ್ಲಿ ಆಸ್ಟ್ರೇಲಿಯದಲ್ಲಿ ನೆಡೆದ ತ್ರಿಕೊನ ಸರಣಿಗೆ ಆಯ್ಕೆಯಾಗಿದ್ದರು.
9) ಮೇಘನಾ ಸಿಂಗ್

ಆಗಸ್ಟ್ 2021ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಮಹಿಳಾ ತಂಡಕ್ಕೆ ಅಯ್ಕೆಯಾದರು.
9) ಹರ್ಲೀನ್ ಕೌರ್ ಡಿಯೋಲ್

ಭಾರತ ತಂಡದ ಅಲ್ರೌಂಡರ್ ಅಗಿರುವ ಇವರು, ಫೆಬ್ರವರಿ 2019 ರಂದು ಮುಂಬೈನ ವಾಂಖೆಡೆಯಲ್ಲಿ ಇಂಗ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.
10) ಪೂನಂ ಯಾದವ್

5 ಏಪ್ರಿಲ್ 2013ರಲ್ಲಿ ಬಾಂಗ್ಲಾದೇಶದ ವಿರುದ್ದ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಭಾರತ ತಂಡದ ಮಹಿಳಾ ಆಲ್ ರೌಂಡರ್.
11) ಏಕ್ತಾ ಬಿಷ್ತ್

ಮಹಿಳಾ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟ್ ಆಟಗಾತಿ.
12) ರಾಧಾ ಯಾದವ್

ಬರೋಡ ಆಟಗಾತಿಯಾಗಿರುವ ಇವರು ಮಹಿಳಾ ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ್ದಾರೆ.
13) ತಾನಿಯಾ ಭಾಟಿಯಾ

2018 ರಲ್ಲಿ ಮಹಿಳಾ ಕ್ರಿಕೆಟ್ನ ಐದು ಬ್ರೇಕೌಟ್ ತಾರೆಗಳಲ್ಲಿ ಒಬ್ಬರು. ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್.
14) ಜೆಮಿಮಾ ರಾಡ್ರಿಗಸ್

ಭಾರತ ತಂಡದ ಮಹಿಳಾ ಆಲ್ ರೌಂಡರ್. ಇವರೊಂದಿಗೆ ಸಬ್ಬಿನೇನಿ ಮೇಘನಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಸಿಮ್ರಾನ್ ಬಹದ್ದೂರ್ ಮೊದಲಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಇನ್ನೂ ಅನೇಕ ಆಟಗಾತಿಯಾಗಿದ್ದಾರೆ ಮತ್ತು ತಮ್ಮ ಸಾಮರ್ಥ್ಯವನ್ನ ವಿಶ್ವದ್ಯಂತ ತೋರಿಸಿದ್ದಾರೆ.
ವೈರಲ್ ಆದ ಪಾಕ್ ಜೊತೆಗಿನ ಭಾರತೀಯ ಕ್ರಿಕೆಟ್ ತಂಡದ ಆತ್ಮೀಯ ಕ್ಷಣ

ಪಾಕಿಸ್ತಾನದ ವಿರುದ್ಧ ಜಯಗಳಿಸಿದ ನಂತರ ಭಾರತದ ಮಹಿಳಾ ಆಟಗಾರರು ಪಾಕಿಸ್ತಾನದ ನಾಯಕಿ ಬಿಸ್ಮಾ ಮರೂಫ್ ಅವರ ಮಗಳೊಂದಿಗೆ ಸಂತೋಷದಿಂದ ಕಳೆದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ವೈರಲ್ ಆಗಿದೆ.
ಭಾನುವಾರ ಮೌಂಟ್ ಮೌಂಗನುಯಿಯಲ್ಲಿ ಭಾರತವು ಪಾಕಿಸ್ತಾನವನ್ನು 107 ರನ್ಗಳಿಂದ ಸೋಲಿಸಿದೆ. ಭಾರತದ ಈ ಗೆಲುವಿನ ನಂತರ, ತಂಡದ ಆಟಗಾರರು ಪಾಕಿಸ್ತಾನದ ನಾಯಕಿ ಬಿಸ್ಮಾ ಮರೂಫ್ ಅವರ ಪುಟ್ಟ ಮಗಳೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಪಾಕಿಸ್ತಾನಿ ಪತ್ರಕರ್ತರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸಾಂಪ್ರದಾಯಿಕ ವೈರಿಗಳೆಂದೇ ಹೆಸರಾದ ಭಾರತೀಯ ಮಹಿಳಾ ಆಟಗಾರರು ಮರೂಫ್ ಮಗಳೊಂದಿಗೆ ತಮಾಷೆಯ ಸನ್ನೆಗಳನ್ನು ಮಾಡುತ್ತಿರುವುದುಕಾಣಬಹುದು. ಯುದ್ಧದ ಈ ಕಾಲದಲ್ಲಿ ತಾಯ್ತನ ಮತ್ತು ಸ್ತ್ರೀತನದ ಮೃದುತ್ವ ನಮ್ಮನ್ನು ಆಳುವ ಪ್ರಜ್ಞೆಯಾಗಬೇಕಿದೆ.