
ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ಅವರು ರ್ಯಾಂಕಿಂಗ್ನಲ್ಲಿ ಒಟ್ಟು ಐದು ಸ್ಥಾನಗಳ ಕುಸಿತ ಕಂಡಿದ್ದರು. ಈಗ ಮತ್ತೊಂದು ಸ್ಥಾನ ಕಳೆದುಕೊಂಡಿದ್ದಾರೆ
ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರು ಕಳೆದ ಎರಡು ವಾರಗಳಿಂದ ನಿರಾಸೆಗೆ ಒಳಗಾಗಿದ್ದಾರೆ. ಐಸಿಸಿ ಏಕದಿನ ಮಹಿಳಾ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಆರು ಸ್ಥಾನಗಳನ್ನು ಕಳೆದುಕೊಂಡು ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಅವರು ಐದು ಸ್ಥಾನಗಳನ್ನು ಕಳೆದುಕೊಂಡು ಏಳನೇ ಸ್ಥಾನದಲ್ಲಿದ್ದರು. ಇದೀಗ, ಮಾರ್ಚ್ 24ರಂದು ಪ್ರಕಟವಾದ ರ್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೊಂದು ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅವರು ನ್ಯೂಜಿಲೆಂಡ್ನ ಆ್ಯಮಿ ಸಟೆರ್ಥ್ವೇಟ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ.
ಭಾರತ ತಂಡದ ಸ್ಮೃತಿ ಮಂದಾನ ಮತ್ತು ಯಾಷ್ಟಿಕಾ ಭಾಟಿಯಾ ಅವರು ರ್ಯಾಂಕಿಂಗ್ನಲ್ಲಿ ಬಡ್ತಿ ಪಡೆದಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯ ಮೂರು ಪಂದ್ಯಗಳಲ್ಲಿ ಕ್ರಮವಾಗಿ 35, 10 ಮತ್ತು 30 ರನ್ ಗಳಿಸಿರುವ ಸ್ಮೃತಿ ಒಂದು ಸ್ಥಾನದ ಬಡ್ತಿ ಗಳಿಸಿದ್ದಾರೆ. ಈ ಮೂಲಕ ಟಾಪ್-10 ರಲ್ಲಿ ಸ್ಥಾನ ಗಳಿಸಿದ್ದಾರೆ.
ಆಸ್ಟ್ರೇಲಿಯಾದ ಅಲಿಸಾ ಹೀಲಿ ಅವರು ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ಸ್ಥಾನವನ್ನು ಬೇತ್ ಮೂನಿ, ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಮತ್ತು ರಚೆಲ್ ಹೇನ್ಸ್ ಅವರು ಹಂಚಿಕೊಂಡಿದ್ದಾರೆ. ಈ ಮೂವರು ಅಲಿಸಾ ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದಾರೆ.
ಪೂಜಾಗೆ 13 ಸ್ಥಾನಗಳ ಬಡ್ತಿ
ಬೌಲಿಂಗ್ ವಿಭಾಗದಲ್ಲಿ ಭಾರತದ ಪೂಜಾ ವಸ್ತ್ರಕರ್ ಅವರು 13 ಸ್ಥಾನಗಳ ಬಡ್ತಿ ಪಡೆದುಕೊಂಡಿದ್ದು, 56ನೇ ಸ್ಥಾನದಲ್ಲಿದ್ದಾರೆ. ಜೂಲನ್ ಗೋಸ್ವಾಮಿ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ.
ಆಲ್ರೌಂಡರ್ ವಿಭಾಗದಲ್ಲಿ ದೀಪ್ತಿ ಶರ್ಮಾ ಕುಸಿತ ಕಂಡಿದ್ದು, ಏಳನೇ ಸ್ಥಾನ ಪಡೆದುಕೊಂಡಿದ್ದಾರೆ.