ಮ್ಯಾನ್ಮಾರ್‌ ನರಮೇಧ | ದ್ವೇಷ ಹರಡುವ ಪೋಸ್ಟ್‌ಗಳನ್ನು ನಿಯಂತ್ರಿಸುವಲ್ಲಿ ಫೇಸ್‌ಬುಕ್ ವಿಫಲ

 2017ರಲ್ಲಿ ಮ್ಯಾನ್ಮಾರ್‌ ಮಿಲಿಟರಿ ಸೇನೆಯು ರೋಹಿಂಗ್ಯಾ ಮುಸ್ಲಿಮರ ನರಮೇಧ ನಡೆಸಿತ್ತು. ಮ್ಯಾನ್ಮಾರ್‌ನ ಭದ್ರತಾ ಪಡೆಗಳಿಂದ ಸಾಮೂಹಿಕ ಅತ್ಯಾಚಾರ ಮತ್ತು ನಾಗರಿಕರ ಹತ್ಯೆಗಳು ನಡೆದವು. ಇದರಿಂದಾಗಿ 7,00,000 ಕ್ಕೂ ಹೆಚ್ಚು ರೋಹಿಂಗ್ಯಾಗಳು ನೆರೆಯ ದೇಶ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು.

ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ದ್ವೇಷ ಭಾಷಣದ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಇಂತಹ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಪತ್ತೆ ಹಚ್ಚುವಲ್ಲಿ ಫೇಸ್‌ಬುಕ್ ವಿಫಲವಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್‌ನ ಹೊಸ ವರದಿಯು ಬಹಿರಂಗಪಡಿಸಿದೆ. 

Eedina App

ವರದಿಯ ಪ್ರಕಾರ, ರೋಹಿಂಗ್ಯಾ ನರಮೇಧಕ್ಕೆ ಕರೆನೀಡುವ ಪ್ರತ್ಯೇಕವಾದಿಗಳ ಪೊಸ್ಟ್‌ಗಳಿಗೆ ಫೇಸ್‌ಬುಕ್‌ ಅನುಮೋದನೆ ನೀಡಿದೆ. ಗ್ಲೋಬಲ್ ವಿಟ್ನೆಸ್ ಎಂಬ ಪ್ರತ್ಯೇಕವಾದಿ ಗುಂಪು ತನ್ನ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ಗಳು ರೋಹಿಂಗ್ಯಾ ಮುಸ್ಲಿಮರ ಮೇಲೆ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಿದ್ದವು. ಆದರೂ, ಈ ಪೋಸ್ಟ್‌ಗಳನ್ನು ಗುರುತಿಸಿ, ಅವುಗಳನ್ನು ನಿರ್ಬಂಧಿಸುವಲ್ಲಿ ಫೇಸ್‌ಬುಕ್‌ ವಿಫಲವಾಗಿದೆ ಎಂದು ಹೇಳಿದೆ. 

2017ರಲ್ಲಿ  ಮ್ಯಾನ್ಮಾರ್‌ ಮಿಲಿಟರಿ ಸೇನೆಯು ರೋಹಿಂಗ್ಯಾ ಮುಸ್ಲಿಮರ ನರಮೇಧ ನಡೆಸಿತ್ತು. ಮ್ಯಾನ್ಮಾರ್‌ನ ಭದ್ರತಾ ಪಡೆಗಳಿಂದ ಸಾಮೂಹಿಕ ಅತ್ಯಾಚಾರ, ನಾಗರಿಕ ಹತ್ಯೆ ಮತ್ತು ಸಾವಿರಾರು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದಾಗಿ 7,00,000 ಕ್ಕೂ ಹೆಚ್ಚು ರೋಹಿಂಗ್ಯಾಗಳು ನೆರೆಯ ದೇಶ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು.

AV Eye Hospital ad

ಈ ಸಂದರ್ಭದಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಗ್ಲೋಬಲ್ ವಿಟ್ನೆಸ್‌ ಗುಂಪು, ಈಗ ನಡೆದಿರುವ ಹತ್ಯೆಗಳು ಸಾಕಾಗುವುದಿಲ್ಲ. ನಾವು ಇನ್ನೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರನ್ನು ಕೊಲ್ಲಬೇಕಾಗಿದೆ ಎಂದು ಪೋಸ್ಟ್‌ ಮಾಡಿತ್ತು. ಇದನ್ನು ಫೇಸ್‌ಬುಕ್‌ ಗುರುತಿಸಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್‌ನ ತಜ್ಞರು ಹೇಳಿದ್ದಾರೆ.

ರೋಹಿಂಗ್ಯಾ ಮುಸ್ಲಿಮರ ನರಮೇಧದಂತಹ ಪೋಸ್ಟ್‌ಗಳನ್ನು ಫೇಸ್‌ಬುಕ್‌ ಪ್ರೋತ್ಸಾಹಿಸುವುದು ಆಘಾತಕಾರಿ ಎಂದು ಇನ್‌ಸ್ಟಿಟ್ಯೂಟ್ ಫಾರ್ ಮೀಡಿಯಾ ಮತ್ತು ಕ್ರಿಯೇಟಿವ್‌ನ ಸಂಶೋಧನಾ ಸಹೋದ್ಯೋಗಿ ರೊನಾನ್ ಲೀ ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿ 1ರಿಂದ ಮ್ಯಾನ್ಮಾರ್‌ನ ಮಿಲಿಟರಿ ಸೇನೆಯು ದೇಶದ ಮೇಲೆ ಬಲವಂತವಾಗಿ ನಿಯಂತ್ರಣ ಸಾಧಿಸಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಿ ಅಧಿಕಾರಿಗಳನ್ನು ಜೈಲಿಗೆ ತಳ್ಳಿದೆ. ರೋಹಿಂಗ್ಯಾ ನಿರಾಶ್ರಿತರು ಮ್ಯಾನ್ಮಾರ್‌ ಮಿಲಿಟರಿ ದಾಳಿಯನ್ನು  ಖಂಡಿಸಿದ್ದಾರೆ. ಅವರು ಮ್ಯಾನ್ಮಾರ್‌ಗೆ ಮರಳಲು ಭಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಮ್ಯಾನ್ಮಾರ್‌ನಲ್ಲಿ ದ್ವೇಷದ ಭಾಷಣವನ್ನು ಹರಡಲು ಮತ್ತು ಮಿಲಿಟರಿ ಪ್ರಚಾರಗಳಿಗೆ ಫೇಸ್‌ಬುಕ್ಅನ್ನು ಬಳಸಿಕೊಳ್ಳಲಾಗಿದೆ ಎನ್ನುವ ಆರೋಪಕ್ಕೆ ಉತ್ತರವಾಗಿ, "2021ರ ಮಿಲಿಟರಿ ದಂಗೆಯ ನಂತರ ಮ್ಯಾನ್ಮಾರ್‌ನ ಮಿಲಿಟರಿ ಖಾತೆಗಳನ್ನು ನಿಷೇಧಿಸಲಾಗಿದೆ" ಎಂದು ಫೇಸ್‌ಬುಕ್‌ನ ಮೂಲ ಕಂಪನಿಯಾದ ಮೆಟಾ ಪ್ರತಿಕ್ರಿಯೆ ನೀಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app