ಅತಿರೇಕದ ಫುಟ್‌ಬಾಲ್ ಅಭಿಮಾನ : ಕೇರಳದಲ್ಲಿ ಅರ್ಜೆಂಟೀನಾ-ಬ್ರೆಝಿಲ್ ಅಭಿಮಾನಿಗಳ ನಡುವೆ ಮಾರಾಮಾರಿ

Argentina-Brazil fans clash during rally in Kollam  Video
  • ಕೊಲ್ಲಂನ ಶಕ್ತಿಕುಲಂಗರದಲ್ಲಿ ಭಾನುವಾರ ನಡೆದ ಘರ್ಷಣೆ; ವಿಡಿಯೋ ವೈರಲ್
  • ಮೆಸ್ಸಿ ಉತ್ತಮನೋ ಅಥವಾ ನೇಮಾರ್ ಉತ್ತಮನೋ ಎಂಬ ಚರ್ಚೆಯೇ ಕಾರಣವಂತೆ!

ಕತಾರ್‌ನ ಅಲ್ ಬೈತ್ ಸ್ಟೇಡಿಯಂನಲ್ಲಿ 2022ರ ಫುಟ್‌ಬಾಲ್ ವಿಶ್ವಕಪ್ ಪ್ರಾರಂಭವಾಗುತ್ತಿದ್ದಂತೆ ಕೇರಳದಲ್ಲಿ ಅಭಿಮಾನಿಗಳ ಅಭಿಮಾನವು ಅತಿರೇಕಕ್ಕೆ ಹೋಗಿದ್ದು, ಅರ್ಜೆಂಟೀನಾ ಹಾಗೂ ಬ್ರೆಝಿಲ್ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಭಾನುವಾರ ನಡೆದಿದೆ.

ಈ ಘಟನೆಯು ಕೊಲ್ಲಂ ಜಿಲ್ಲೆಯ ಶಕ್ತಿಕುಲಂಗರದಲ್ಲಿ ನಡೆದ ರ‌್ಯಾಲಿಯೊಂದರ ವೇಳೆ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದ್ದು, ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

Eedina App

ಭಾರತದಲ್ಲಿ ಹೆಚ್ಚು ಫುಟ್‌ಬಾಲ್ ಅಭಿಮಾನಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕೇರಳ ಕೂಡ ಒಂದು. ಮೆಸ್ಸಿ ಉತ್ತಮ ಆಟಗಾರನೋ ಅಥವಾ ನೇಮಾರ್ ಉತ್ತಮ ಆಟಗಾರನೋ ಎಂಬ ಸುದೀರ್ಘ ಚರ್ಚೆಯೇ ಅರ್ಜೆಂಟೀನಾ ಹಾಗೂ ಬ್ರೆಝಿಲ್ ಅಭಿಮಾನಿಗಳ ನಡುವಿನ ಜಗಳಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

AV Eye Hospital ad

ಎರಡು ಗುಂಪುಗಳು ತಳ್ಳಿಕೊಂಡು, ತಮ್ಮ ತಂಡದ ಧ್ವಜ ಹಾಗೂ ದೊಣ್ಣೆಗಳನ್ನು ಬಳಸಿ ಪರಸ್ಪರ ಹಲ್ಲೆ ನಡೆಸಿ, ಗುದ್ದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಮಧ್ಯೆ ಸ್ಥಳದಲ್ಲಿದ್ದ ಅನೇಕರು ಗಾಯಗೊಳ್ಳುವ ಭಯದಿಂದ ಓಡಿ ಹೋಗುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.

ಪೊಲೀಸರಿಗೆ ಮಾಹಿತಿ ಸಿಗುವ ಮೊದಲೇ ಊರಿನ ಕೆಲ ಹಿರಿಯರು ಮಧ್ಯ ಪ್ರವೇಶಿಸಿ ಘರ್ಷಣೆಯನ್ನು ನಿಲ್ಲಿಸಿದ್ದರು. ಆದರೆ ಘಟನೆಯ ವಿಡಿಯೋ ದೃಶ್ಯಾವಳಿಗಳು ವೈರಲಾಗುತ್ತಿದ್ದಂತೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

 

ನಿಮಗೆ ಏನು ಅನ್ನಿಸ್ತು?
1 ವೋಟ್
eedina app