ಸೌದಿ ವಿರುದ್ಧ ಅರ್ಜೆಂಟಿನಾ ಸೋತದ್ದಕ್ಕೆ ಸಂಭ್ರಮ; ಕೇರಳದಲ್ಲಿ 'ಮೆಸ್ಸಿ'ಯಿಂದ ಕಿರಿಕ್

argentinas surprise defeat celebrated fans clashed in malappuram
  • ಮೊದಲ ಪಂದ್ಯದಲ್ಲೇ ಅರ್ಜೆಂಟಿನಾಗೆ ಶಾಕ್ ನೀಡಿದ ಸೌದಿಗೆ ಅಚ್ಚರಿಯ ಗೆಲುವು
  • ಸೌದಿ ಗೆಲುವನ್ನು ಸಂಭ್ರಮಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ 'ಮೆಸ್ಸಿ' ಟೀ ಶರ್ಟ್‌ಧಾರಿ  

ಕತಾರ್‌ನಲ್ಲಿ ಮಂಗಳವಾರ ನಡೆದ ಫಿಫಾ ಫುಟ್‌ಬಾಲ್ ವಿಶ್ವಕಪ್‌ನ 'ಸಿ' ಗುಂಪಿನ ಮೊದಲ ಪಂದ್ಯದಲ್ಲಿ ಸೌದಿ ಅರೆಬಿಯಾವು ಬಲಿಷ್ಠ ಅರ್ಜೆಂಟಿನಾವನ್ನು ಅಚ್ಚರಿಯಾಗಿ 2-1 ಗೋಲಿನ ಮೂಲಕ ಸೋಲಿಸಿದ ನಂತರ, ಕೇರಳದಲ್ಲಿ ಕೆಲವು 'ಮೆಸ್ಸಿ' ಅಭಿಮಾನಿಗಳು ಕಿರಿಕ್ ಮಾಡತೊಡಗಿದ್ದಾರೆ.

ಅರ್ಜೆಂಟಿನಾದ ಇಂದಿನ ಅನಿರೀಕ್ಷಿತ ಸೋಲನ್ನು ಸೌದಿ ಸೇರಿದಂತೆ ಇತರೆ ತಂಡಗಳ ಅಭಿಮಾನಿಗಳು ಸಂಭ್ರಮಿಸಿದ್ದು, ಸಂಘರ್ಷಕ್ಕೆ ಕಾರಣವಾಗಿದೆ. ಸೌದಿಯ ಗೆಲುವನ್ನು ಮಲಪ್ಪುರಂ ಪಟ್ಟಣದಲ್ಲಿ ಪಂದ್ಯ ನೋಡಲು ಸಿದ್ಧಪಡಿಸಿದ್ದ ಪರದೆಯ ಮುಂದೆ ಬಂದು ಇತರೆ ತಂಡದ ಅಭಿಮಾನಿಗಳು ಸಂಭ್ರಮಿಸಿದರು. ಈ ವೇಳೆ ಅಲ್ಲಿಗೆ ಬಂದ ಅರ್ಜೆಂಟಿನಾದ 'ಮೆಸ್ಸಿ' ಟೀ ಶರ್ಟ್‌ಧಾರಿಯೊಬ್ಬ ಕೋಪಗೊಂಡಿದ್ದರಿಂದ, ಸಂಭ್ರಮಿಸಿದವರ ಮೇಲೆ ಕೈ ಮಾಡಲು ಹೊರಟಿದ್ದನು. ಇದರಿಂದ ಕೆಲಕಾಲ ಅಭಿಮಾನಿಗಳ ನಡುವೆ ವಾಗ್ವಾದ ನಡೆಯಿತು. ಕೂಡಲೇ ಅಲ್ಲಿದ್ದ ಇತರರು ಸಮಾಧಾನಿಸಿ, ಕರೆದುಕೊಂಡು ಹೋಗಿದ್ದರಿಂದ ಪರಿಸ್ಥಿತಿ ಶಾಂತವಾಯಿತು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಫುಟ್‌ಬಾಲ್ ಅಭಿಮಾನಿಯೊಬ್ಬ, "ನಾನು ಕೂಡ ಅರ್ಜೆಂಟಿನಾದ ಬಗ್ಗೆ ಗೌರವ ಹೊಂದಿರುವವನು. ಆದರೆ ನಮ್ಮ ಊರಿನಲ್ಲಿ ಕೆಲವರು ಮೆಸ್ಸಿ ಎಂದು ಹೇಳಿಕೊಂಡು ಅಹಂಕಾರ ಮೆರೆಯುತ್ತಿದ್ದಾರೆ. ಅದು ಮುರಿಯಬೇಕೆಂದರೆ ಇಂತಹ ಸೋಲು ಅವರಿಗೆ ಆಗಬೇಕು. ಅದಕ್ಕಾಗಿ ನಾನು ಸೌದಿಯ ಇಂದಿನ ಅನಿರೀಕ್ಷಿತ ಗೆಲುವನ್ನು ಸಂಭ್ರಮಿಸಿದ್ದೇವೆ. ಆಟದಲ್ಲಿ ಒಂದು ಘಳಿಗೆಯಲ್ಲಿ ಏನೂ ಆಗಬಹುದು ಎಂಬುದನ್ನು ಮೆಸ್ಸಿಯ ಅಭಿಮಾನಿಗಳು ತಿಳಿದುಕೊಳ್ಳಲಿ"ಎಂದು ತಿಳಿಸಿದರು.

"ಈ ಸೋಲನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಆದರೂ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಈ ಸೋಲು ಮುಂದಿನ ಗೆಲುವಿನ ಮೆಟ್ಟಿಲು" ಎಂದು ಅರ್ಜೆಂಟಿನಾದ ಅಭಿಮಾನಿಯೊಬ್ಬರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಫಿಫಾ ವಿಶ್ವಕಪ್ 2022 | ಮೊದಲ ಪಂದ್ಯದಲ್ಲೇ 'ಫುಟ್‌ಬಾಲ್‌ ದೈತ್ಯ'ರಿಗೆ ಶಾಕ್ ನೀಡಿದ ಸೌದಿ ಅರೇಬಿಯಾ!

ಕತಾರ್‌ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಅಚ್ಚರಿ ಎಂಬಂತೆ ಬಲಿಷ್ಠ ಅರ್ಜೆಂಟಿನಾ ತಂಡವನ್ನು ದುರ್ಬಲ ತಂಡ ಸೌದಿ ಅರೆಬಿಯಾವು 2-1 ಗೋಲುಗಳ ಅಂತರದಲ್ಲಿ ಬಗ್ಗುಬಡಿಯುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಕತಾರ್‌ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೆಸ್ಸಿ ಪಡೆಯ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದ ಸೌದಿ ಅರೆಬಿಯಾ, ಮೊದಲ ಪಂದ್ಯದಲ್ಲೇ ಫುಟ್‌ಬಾಲ್‌ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಆ ಮೂಲಕ ಲಿಯೋನೆಲ್ ಮೆಸ್ಸಿ ತಂಡಕ್ಕೆ ಆಘಾತ ನೀಡಿದೆ.

ವಿಡಿಯೋ ಕೃಪೆ: Media One Malayalam News

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180