ಎಂಬಾಪೆ ಅಣಕಿಸಿದ ಅರ್ಜೆಂಟೀನಾ ಗೋಲ್ ಕೀಪರ್; ನಿಮ್ಮದು ಅದೃಷ್ಟದ ಜಯ ಎಂದ ಅಭಿಮಾನಿಗಳು

Argentinian goalkeeper who mocked Kylian Mbappe; The fan says that Argentina's luck has won with strength
  • ಮಾರ್ಟಿನೆಜ್ ತಮ್ಮ ಸಂಭ್ರಮದಲ್ಲಿ ಕ್ರೀಡಾಸ್ಫೂರ್ತಿಯನ್ನೇ ಮರೆತಿದ್ದಾರೆ ಎಂದ ಅಭಿಮಾನಿಗಳು
  • ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಾಪೆ ಚಿತ್ರ ಅಂಟಿಸಲಾಗಿದ್ದ ಮಗುವಿನ ಬೊಂಬೆ

36 ವರ್ಷಗಳ ನಂತರ ವಿಶ್ವಕಪ್‌ ಫುಟ್ಬಾಲ್‌ ಜಯಿಸಿದ ಅರ್ಜೆಂಟೀನಾ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. ವಿಜಯೋತ್ಸವದ ಪೆರೇಡ್‌ನಲ್ಲಿ ಭಾಗವಹಿಸಿದ್ದ ಅರ್ಜೆಂಟೀನಾ ತಂಡದ ಸದಸ್ಯರನ್ನು ದೇಶದ ಅಭಿಮಾನಿಗಳು ಅಭಿನಂದಿಸಿ, ಗೆಲುವಿನ ಸಂಭ್ರಮಾಚರಣೆ ಮಾಡಿದರು.

ನಿರೀಕ್ಷೆಗೂ ಮೀರಿದ ಜನಸಾಗರ ಸೇರಿದ್ದರಿಂದ ವಿಜಯೋತ್ಸವ ಪೆರೇಡ್ಅ‌ನ್ನು ಅರ್ಧಕ್ಕೆ ಮೊಟಕುಗೊಳಿಸಿ, ವಿಜೇತ ತಂಡದ ಸದಸ್ಯರನ್ನು ಹೆಲಿಕಾಪ್ಟರ್ ಮೂಲಕ ಪ್ರವಾಸ ಮಾಡಿಸಲಾಯಿತು. ಆದರೆ, ಇದೆಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಅರ್ಜೆಂಟೀನಾ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ತಮ್ಮ ಸಂಭ್ರಮದಲ್ಲಿ ಕ್ರೀಡಾಸ್ಫೂರ್ತಿಯನ್ನೇ ಮರೆತಿದ್ದಾರೆ.

Eedina App

ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಾಪೆ ಚಿತ್ರ ಅಂಟಿಸಲಾಗಿದ್ದ ಮಗುವಿನ ಬೊಂಬೆಯನ್ನು ಹಿಡಿದು ಎಂಬಾಪೆಯನ್ನು ಅಣಕಿಸುವಂತೆ ವರ್ತಿಸಿರುವ ವಿಡಿಯೋ ವಿಶ್ವಾದ್ಯಂತ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಎಮಿಲಿಯಾನೊ ಮಾರ್ಟಿನೆಜ್ ವರ್ತನೆ ತೀವ್ರ ಟೀಕೆಗೆ ಗುರಿಯಾಗಿದೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ಮೊರೆಕ್ಕೊ ತಂಡಕ್ಕೆ ಅಭೂತಪೂರ್ವ ಸ್ವಾಗತ; ಆಟಗಾರರಿಗೆ ದೇಶದ ಅತ್ಯುನ್ನತ ಪ್ರಶಸ್ತಿ

ಈ ಕುರಿತು ಟ್ವೀಟ್ ಮಾಡಿರುವ ಅಭಿಮಾನಿಯೊಬ್ಬ, ಇದು "ಘನತೆಯಿಲ್ಲದ ನಡತೆ. ನೀವು ವಿಶ್ವ ಚಾಂಪಿಯನ್ ಎಂದು ಮರೆಯದಿರಿ. ಅದಕ್ಕೆ ತಕ್ಕಂತೆ ವರ್ತಿಸಿ. ಈ ನಡವಳಿಕೆ ಸಂಪೂರ್ಣವಾಗಿ ಅನಪೇಕ್ಷಿತ. ಅಲ್ಲದೆ, ಎಂಬಾಪೆ ನಿನ್ನನ್ನು ತಪ್ಪಿಸಿ ನಾಲ್ಕು ಗೋಲು ಹೊಡೆದ. ಹೀಗಾಗಿ ನಿನಗೆ ಆತನನ್ನು ಅಣಕಿಸುವ ಯಾವ ಹಕ್ಕೂ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

"ಆತ ಮರ್ಯಾದೆ ಇಲ್ಲದ ವ್ಯಕ್ತಿ ಮತ್ತು ಯಾವಾಗಲೂ ತನ್ನನ್ನು ಗಮನ ಸೆಳೆಯಲು ಬಯಸುತ್ತಾನೆ" ಎಂದು ಮತ್ತೊಬ್ಬ ಅಭಿಮಾನಿ ಕಿಡಿಕಾರಿದ್ದಾನೆ.

ಇನ್ನೊಬ್ಬ ಅಭಿಮಾನಿ, "ಮೈದಾನದಲ್ಲಿ ಫ್ರಾನ್ಸ್ ಬಲಿಷ್ಠ ತಂಡ ಮತ್ತು ಎಂಬಾಪೆ ಉತ್ಕೃಷ್ಟ ಆಟಗಾರ. ಅರ್ಜೆಂಟೀನಾ ಕೇವಲ ಪೆನಾಲ್ಟಿ ಶೂಟೌಟ್‌ನಲ್ಲಿ ಜಯಿಸಿತು" ಎಂದು ಟ್ವೀಟ್ ಮಾಡಿದ್ದಾನೆ.

ಎಂಬಾಪೆಯನ್ನು ಅಣಕಿಸಲು ಯಾವುದೇ ಕಾರಣವಿಲ್ಲ. ಫೈನಲ್ ಪಂದ್ಯದಲ್ಲಿ ಮೂರು ಗೋಲು ಗಳಿಸಿದ. ಫೈನಲ್ ಪಂದ್ಯದ ವೇಳೆ ಫ್ರಾನ್ಸ್ ತಂಡದ ಮೂವರು ಆಟಗಾರರು ಗಾಯಗೊಂಡಿದ್ದರು. ಫ್ರಾನ್ಸ್ ಬಲಿಷ್ಠ ತಂಡವಾಗಿದ್ದು, ಅರ್ಜೆಂಟೀನಾ ಅದೃಷ್ಟ ಬಲದಿಂದ ಜಯಿಸಿದೆ" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾನೆ .

ನಿಮಗೆ ಏನು ಅನ್ನಿಸ್ತು?
0 ವೋಟ್
eedina app