ಒಂದು ನಿಮಿಷದ ಓದು | ಮಿಡ್ಲ್​​ಸೆಕ್ಸ್​ ಪರ ಕಣಕ್ಕಿಳಿದ ಅರ್ಜುನ್ ತೆಂಡುಲ್ಕರ್

Cricket

ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್ ತೆಂಡುಲ್ಕರ್ ಕೌಂಟಿ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯುವ ಮೂಲಕ ಸುದ್ದಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಭಾಗವಾಗಿದ್ದರೂ ಸಹ, ಅರ್ಜುನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್​ ತಂಡಗಳ ನಡುವೆ ನಡೆದ ಸೌಹಾರ್ದ ಪಂದ್ಯದಲ್ಲಿ ಅರ್ಜುನ್, ಮಿಡ್ಲ್​​ಸೆಕ್ಸ್​ ತಂಡದ ಪರ ಕಣಕ್ಕಿಳಿದು ಗಮನ ಸೆಳೆದಿದ್ದಾರೆ.

ಮಿಡ್ಲ್‌ಸೆಕ್ಸ್ ಸೆಕೆಂಡ್ ಇಲೆವೆನ್ ಮತ್ತು ಕ್ಲಬ್ ಕ್ರಿಕೆಟ್ ಕಾನ್ಫರೆನ್ಸ್ ಇಲೆವೆನ್ ತಂಡಗಳು  50 ಓವರ್​ಗಳ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ 4 ಓವರ್‌ ಬೌಲ್ ಮಾಡಿದ, ಎಡಗೈ ಮಧ್ಯಮ ವೇಗಿ ಅರ್ಜುನ್ ತೆಂಡುಲ್ಕರ್, 16 ರನ್ ನೀಡಿ ಒಂದು ವಿಕೆಟ್ ಪಡೆದರು.

ಈ ಸುದ್ದಿ ಓದಿದ್ದೀರಾ ? : ಗಾಲೆ ಟೆಸ್ಟ್‌ | ದಾಖಲೆಯ ಮೊತ್ತ ಬೆನ್ನತ್ತಿ ಪಂದ್ಯ ಗೆದ್ದ ಪಾಕಿಸ್ತಾನ

ಅಂತಿಮವಾಗಿ ಕ್ಲಬ್ ಕ್ರಿಕೆಟ್ ಇಲೆವೆನ್ 257 ರನ್‌ ಗಳಿಸಿತ್ತು ಚೇಸಿಂಗ್ ವೇಳೆ ಮಿಡ್ಲ್​ಸೆಕ್ಸ್​ನ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಾದ ಡೆವಿಯೆಸ್ಟ್ 94 ರನ್ ಮತ್ತು ಡಿ ಒಡ್ರಿಸ್ಕೋಲ್ 79 ರನ್ ಬಾರಿಸುವ ಮೂಲಕ ತಂಡಕ್ಕೆ 7 ವಿಕೆಟ್‌ಗಳ ಜಯ ತಂದುಕೊಟ್ಟರು.

ನಿಮಗೆ ಏನು ಅನ್ನಿಸ್ತು?
0 ವೋಟ್