ಏಷ್ಯಾ ಕಪ್ ಬಾಸ್ಕೆಟ್‌ಬಾಲ್‌ನಲ್ಲಿ ಭಾರತಕ್ಕೆ ಸತತ 2ನೇ ಸೋಲು

  • 'ಡಿ' ಗುಂಪಿನಲ್ಲಿ 3ನೇ ಸ್ಥಾನದಲ್ಲಿರುವ ಭಾರತ
  • ಅಂತಿಮ ಪಂದ್ಯದಲ್ಲಿ ಲೆಬಾನನ್ ವಿರುದ್ಧ ಸೆಣಸಾಟ

ಫಿಬಾ ಪುರುಷರ ಏಷ್ಯಾ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಸತತ 2ನೇ ಸೋಲು ಅನುಭವಿಸಿದೆ. ಶುಕ್ರವಾರ ನಡೆದ ಫಿಲಿಪ್ಪೀನ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ 59- 101ರಲ್ಲಿ ಸೋಲುಂಡಿದೆ

ಸದ್ಯ 'ಡಿ' ಗುಂಪಿನಲ್ಲಿ 3ನೇ ಸ್ಥಾನದಲ್ಲಿರುವ ಭಾರತ, ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 47- 100ರಲ್ಲಿ ಸೋತಿದ್ದ ಭಾರತ, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಲೆಬಾನನ್ ವಿರುದ್ಧ ಸೆಣಸಲಿದೆ.

ಈ ಸುದ್ದಿ ಓದಿದ್ದೀರಾ?: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ | ಕೊಹ್ಲಿ, ಬುಮ್ರಾ, ಚಾಹಲ್‌ಗೆ ವಿಶ್ರಾಂತಿ

ಶುಕ್ರವಾರದ ಪಂದ್ಯದಲ್ಲಿ ಭಾರತ ಪರ ಹಫೀಜ್ 14 ಅಂಕ ಗಳಿಸಿದರೆ, ಪ್ರಣವ್ ಪ್ರಿನ್ಸ್ 11 ಅಂಕ ಕಲೆ ಹಾಕಿದರು. ನಾಲ್ಕು ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದ್ದು, 2 ಮತ್ತು 3ನೇ ಸ್ಥಾನ ಪಡೆಯುವ ತಂಡಗಳು ಪ್ಲೇ- ಆಫ್ ಪಂದ್ಯಗಳಲ್ಲಿ ಆಡಲಿದ್ದು, ಗೆದ್ದರೆ ಕ್ವಾರ್ಟರ್‌ಫೈನಲ್‌ಗೆ ಏರಲಿವೆ. 

ನಿಮಗೆ ಏನು ಅನ್ನಿಸ್ತು?
1 ವೋಟ್