ಏಷ್ಯಾಕಪ್‌ ಬಾಸ್ಕೆಟ್‌ಬಾಲ್‌ | ಭಾರತಕ್ಕೆ 3ನೇ ಸೋಲು, ಪಂದ್ಯಾವಳಿಯಿಂದ ಔಟ್

  • ಆಡಿದ ಮೂರು ಪಂದ್ಯಗಳಲ್ಲಿ ಸೋಲುಂಡ ಭಾರತ
  • ಲೆಬಾನನ್ ವಿರುದ್ಧ 63-104 ಅಂತರದಲ್ಲಿ ಸೋಲು

ಏಷ್ಯಾಕಪ್‌ ಬಾಸ್ಕೆಟ್‌ಬಾಲ್‌ ಪಂದ್ಯಾವಳಿಯಲ್ಲಿ ಭಾರತದ ಪುರುಷದ ತಂಡ ಮೂರು ಸೋಲುಗಳನ್ನು ಕಾಣುವ ಮೂಲಕ ಟೂರ್ನಿಯಿಂದ ಹೊರನಡೆದಿದೆ.

ಭಾರತದ ಪುರುಷರ ಬಾಸ್ಕೆಟ್ ಬಾಲ್ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಸತತ ಸೋಲಿನೊಂದಿಗೆ ಹೊರಬಿದ್ದಿದೆ. ಭಾನುವಾರ ನಡೆದ 'ಡಿ' ಗುಂಪಿನ 3ನೇ ಮತ್ತು ಅಂತಿಮ ಪಂದ್ಯದಲ್ಲಿ ಲೆಬಾನನ್ ವಿರುದ್ಧ 63- 104 ಅಂಕಗಳ ಅಂತರದಲ್ಲಿ ಸೋಲು ಕಂಡಿದೆ.

ಗುಂಪಿನಲ್ಲಿ 4ನೇ ಸ್ಥಾನ ಪಡೆದ ಭಾರತ, ಪ್ಲೇ-ಆಫ್ ಪಂದ್ಯಕ್ಕೂ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡ ನೇರವಾಗಿ ಕ್ವಾರ್ಟರ್ ಪ್ರವೇಶಿಸಲಿದೆ. 2 ಮತ್ತು 3ನೇ ಸ್ಥಾನ ಪಡೆದ ತಂಡಗಳು ಪ್ಲೇ- ಆಫ್ ಪಂದ್ಯದಲ್ಲಿ ಆಡಿ ಗೆದ್ದರೆ ಕ್ವಾರ್ಟರ್ ಫೈನಲ್‌ಗೇರಬಹುದು.

ಈ ಸುದ್ದಿಓದಿದ್ದೀರಾ? ಪಿ ವಿ ಸಿಂಧು ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌

ಭಾರತ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 47- 100, 2ನೇ ಪಂದ್ಯದಲ್ಲಿ ಫಿಲಿಪ್ಪೀನ್ಸ್ ವಿರುದ್ಧ 59- 101 ಅಂಕಗಳಲ್ಲಿ ಸೋಲು ಕಂಡಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್