ಒಂದು ನಿಮಿಷದ ಸುದ್ದಿ | ಪ್ಯಾಡ್‌ ಧರಿಸಲು ಮರೆತ ಬ್ಯಾಟ್ಸ್‌ಮನ್‌!

Cricket

ಕ್ರಿಕೆಟ್‌ನಲ್ಲಿ ಅಪರೂಪಕ್ಕೆ ಸ್ವಾರಸ್ಯಕರ ಪ್ರಸಂಗಗಳು ನಡೆಯುವುದನ್ನು ನೋಡಿದ್ದೇವೆ. ಖಾತೆ ತೆರೆಯುವ ಮುನ್ನವೇ ನಿರ್ಗಮಿಸುವುದು, ಕ್ಯಾಚ್‌ ಹಿಡಿಯುವ ವೇಳೆ ಕ್ಷೇತ್ರ ರಕ್ಷಕರು ಡಿಕ್ಕಿ ಹೊಡೆಯುವುದು, ಸಂವಹನ ಕೊರತೆಯಿಂದ ರನೌಟ್‌ ಆಗುವುದು, ಬೌಂಡರಿ ಲೈನ್‌ನಲ್ಲಿ ಅದ್ಭುತ ಕ್ಯಾಚ್‌ಗಳನ್ನು ಪಡೆಯುವುದು ಹೀಗೆ ಸಾಗುತ್ತದೆ ಪಟ್ಟಿ.

ಆದರೆ, ಇಂಗ್ಲೆಂಡ್‌ನಲ್ಲಿ ನಡೆದ ಕ್ರಿಕೆಟ್‌ ಪಂದ್ಯವೊಂದರಲ್ಲಿ ಬ್ಯಾಟ್ಸ್‌ಮನ್‌ ಓರ್ವ ಪ್ಯಾಡ್ ಧರಿಸದೇ ಮೈದಾನಕ್ಕಿಳಿದ ಅಪರೂಪದ ಪ್ರಸಂಗ ನಡೆದಿದೆ. ಸೌತೆಂಡ್ ಸಿವಿಕ್ ಕ್ರಿಕೆಟ್ ಕ್ಲಬ್‌ನ ಆಟಗಾರ ಮಾರ್ಟಿನ್ ಹ್ಯೂಸ್ ಬ್ಯಾಟಿಂಗ್​ಗೆ ಆಗಮಿಸಿದ್ದ ವೇಳೆ ಕಾಲುಗಳಿಗೆ ಪ್ಯಾಡ್‌ ಧರಿಸುವುದನ್ನೇ ಮರೆತಿದ್ದರು.

ಈ ಸುದ್ದಿ ಓದಿದ್ದೀರಾ ? : ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಕನ್ನಡ ಕ್ರೀಡಾಪಟು ಐಶ್ವರ್ಯಾ

ಕ್ರೀಸ್‌ಗೆ ಬಂದ ಕೂಡಲೇ ಮಿಡಲ್ ಸ್ಟಂಪ್ ಲೈನ್ ತೆಗೆದುಕೊಳ್ಳಲು ಹ್ಯೂಸ್, ಅಂಪೈರ್‌ ನೆರವು ಕೋರಿದ್ದಾರೆ. ಈ ವೇಳೆ ಅಂಪೈರ್‌ ಫೋನ್‌ನಲ್ಲಿ ಮಾತನಾಡುತ್ತಿದ್ದರು. ತಕ್ಷಣವೇ ಎದುರಾಳಿ ತಂಡದ ವಿಕೆಟ್‌ ಕೀಪರ್‌, 'ನೀವು ಪ್ಯಾಡ್ ಧರಿಸದೇ ಬಂದಿದ್ದೀರಿ' ಎಂದು ಹೇಳಿದ್ದಾರೆ. ಆದರೆ, ಕೀಪರ್‌ ತಮಾಷೆ ಮಾಡುತ್ತಿರುವುದಾಗಿ ಭಾವಿಸಿದ ಮಾರ್ಟಿನ್ ಹ್ಯೂಸ್, 'ಅದೆಲ್ಲಾ ನನಗೆ ಬೇಕಾಗಿಲ್ಲ' ಎಂದು ಉತ್ತರಿಸಿದ್ದಾರೆ. ಕೀಪರ್‌ ಮತ್ತೊಮ್ಮೆ ಪ್ಯಾಡ್‌ ಕುರಿತು ನೆನಪಿಸಿದಾಗ ಹ್ಯೂಸ್‌ಗೆ ತಾವು ಪ್ಯಾಡ್‌ ಧರಿಸಲು ಮರೆತಿರುವುದು ಗೊತ್ತಾಗಿದೆ. ಕೂಡಲೇ ಪೆವಿಲಿಯನ್‌ನತ್ತ ಓಡಿದ್ದಾರೆ. ಈ ವೇಳೆ ಮತ್ತೊಂದು ತುದಿಯಲಿದ್ದ ಸಹ ಆಟಗಾರ ಸೇರಿದಂತೆ ಉಳಿದ ಫೀಲ್ಡರ್‌ಗಳು, ಅಂಪೈರ್‌ ಜೋರಾಗಿ ನಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್