ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತ; ಹಾಸ್ಯ ನಟ ದೀಪೇಶ್‌ ಭಾನ್‌ ಸಾವು

Cricket

ಹಿಂದಿ ಕಿರುತೆರೆಯಲ್ಲಿ ಹಾಸ್ಯ ಪಾತ್ರಗಳಿಂದ ಜನಮನ್ನಣೆ ಗಳಿಸಿದ್ದ ದೀಪೇಶ್‌ ಭಾನ್‌ (41), ಕ್ರಿಕೆಟ್‌ ಆಟವಾಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶನಿವಾರ ಬೆಳಗ್ಗೆ ಎಂದಿನಂತೆ ಜಿಮ್‌ಗೆ ತೆರಳಿ ವ್ಯಾಯಾಮ ನಡೆಸಿದ್ದ ದೀಪೇಶ್‌, ಆ ಬಳಿಕ ಸಮೀಪದ ಮೈದಾನದಲ್ಲಿ ಕ್ರಿಕೆಟ್‌ ಆಡಲು ತೆರಳಿದ್ದರು. ಆಟದ ಮಧ್ಯೆ ಕುಸಿದು ಬಿದ್ದ ನಟನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.

ಸೂಪರ್‌ಹಿಟ್ ಹಾಸ್ಯ ಸರಣಿ ʻಭಾಭಿ ಜಿ ಘರ್ ಪೆ ಹೈʼನಲ್ಲಿ 'ಮಲ್ಖಾನ್' ಪಾತ್ರದ ಮೂಲಕ ದೀಪೇಶ್‌ ಅತ್ಯಂತ ಜನಪ್ರಿಯರಾಗಿದ್ದರು. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಪದವೀಧರರಾದ ದೀಪೇಶ್, ಕಳೆದ 17 ವರ್ಷಗಳಿಂದ ಕಿರುತರೆಯಲ್ಲಿ ಸಕ್ರಿಯರಾಗಿದ್ದರು. ಫಾಲ್ತು ಉತ್ಪಟಾಂಗ್ ಚಟ್ಪಟಿ ಕಹಾನಿ, ಮೇ ಐ ಕಮ್ ಇನ್ ಮೇಡಂ, ಹಾಗೂ ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ ಸೇರಿದಂತೆ ಅನೇಕ ಧಾರವಾಹಿ ಮತ್ತು ಟಿವಿ ಕಾರ್ಯಕ್ರಮಗಳ ಮೂಲಕ ಅವರು ಪ್ರಸಿದ್ಧರಾಗಿದ್ದರು. 2019ರಲ್ಲಿ ವಿವಾಹಿತರಾಗಿದ್ದ ದೀಪೇಶ್‌, ಪತ್ನಿ ಮತ್ತು 1 ವರ್ಷದ ಮಗನನ್ನು ಅಗಲಿದ್ದಾರೆ. ಕಳೆದ ವರ್ಷ ದೀಪೇಶ್‌ ತಾಯಿಯನ್ನು ಕಳೆದುಕೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್