ಕಬಡ್ಡಿ ಫೈನಲ್‌ ಪಂದ್ಯದ ವೇಳೆ ಘರ್ಷಣೆ: ಕಟ್ಟಿಗೆಯಿಂದ ಬಡಿದಾಡಿಕೊಂಡ ಯುವಕರು!

  • ರಾಮದುರ್ಗ ತಾಲೂಕಿನ ಚಂದರಗಿ ಕ್ರೀಡಾ ಶಾಲೆಯಲ್ಲಿ ಘಟನೆ
  • ಕ್ಷುಲ್ಲಕ ಕಾರಣಕ್ಕೆ ಎರಡು ಯುವಕರ ಗುಂಪುಗಳ ನಡುವೆ ಗಲಾಟೆ

ಕ್ರೀಡಾ ಶಾಲೆಯ ಕಬಡ್ಡಿ ಟೂರ್ನಿಯೊಂದರ ಫೈನಲ್‌ ಪಂದ್ಯದ ವೇಳೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಂದರಗಿ ಕ್ರೀಡಾ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಆಟಗಾರರು ಮತ್ತು ಆಟವನ್ನು ನೋಡಲು ಬಂದಿದ್ದ  ಯುವಕರು ಕೈಗೆ ಸಿಕ್ಕ ಕಟ್ಟಿಗೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಚಂದರಗಿ ಕ್ರೀಡಾ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಲಯಮಟ್ಟದ  ಕ್ರೀಡಾಕೂಟದ ಕಬಡ್ಡಿಯಲ್ಲಿ  ಚಂದರಗಿ ಮತ್ತು ಕಟಕೊಳ ಗ್ರಾಮದ ವಿದ್ಯಾರ್ಥಿಗಳ ತಂಡ ಫೈನಲ್‌ ಪ್ರವೇಶಿಸಿತ್ತು. ಫೈನಲ್‌ ಪಂದ್ಯ ಪ್ರಾರಂಭವಾಗಿ ಕೆಲ ಹೊತ್ತಿನಲ್ಲೇ,  ಕ್ಷುಲ್ಲಕ ಕಾರಣಕ್ಕೆ ಎರಡು ಯುವಕರ ಗುಂಪುಗಳ ನಡುವೆ ಗಲಾಟೆ ಆರಂಭವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೈಗೆ ಸಿಕ್ಕ ಬಡಿಗೆ ಹಿಡಿದು ಯುವಕರು ದಾಂಧಲೆ ನಡೆಸಿದ್ದಾರೆ.

Image
ಚಂದರಗಿ ಕ್ರೀಡಾ ಶಾಲೆ
ಚಂದರಗಿ ಕ್ರೀಡಾ ಶಾಲೆ

ಈ ಸುದ್ದಿ ಓದಿದ್ದೀರಾ ? : ಕೆಎಸ್‌ಸಿಎ ಟಿ20 | ಮತ್ತೆ ಮುಗ್ಗರಿಸಿದ ಮಂಗಳೂರು ಯುನೈಟೆಡ್‌!

ಎರಡು ಗ್ರಾಮಗಳ ಯುವಕರ ಬಡಿದಾಟ ನೋಡಿದ ಶಾಲಾ ಮಕ್ಕಳು ಭಯಭೀತರಾಗಿ ಎದ್ದು ಬಿದ್ದು ಓಡಿಹೋಗಿದ್ದಾರೆ. ಸ್ಥಳಕ್ಕೆ ಕಟಕೋಳ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್