ಕಾಮನ್‌ವೆಲ್ತ್‌ ಗೇಮ್ಸ್‌ | ಭಾರತಕ್ಕೆ ಪದಕದ ಭರವಸೆ ಮೂಡಿಸಿರುವ ಕ್ರೀಡಾಪಟುಗಳ ಪಟ್ಟಿ

  • 215 ಅಥ್ಲೀಟ್‌ಗಳನ್ನು ಒಳಗೊಂಡ ಭಾರತೀಯ ತಂಡ ಸ್ಪರ್ಧೆಗೆ ಸಜ್ಜು
  • 1,875 ಪದಕಗಳಿಗೆ 5000ಕ್ಕೂ ಹೆಚ್ಚಿನ ಕ್ರೀಡಾಪಟುಗಳ ಪೈಪೋಟಿ 

22ನೇ ಆವೃತ್ತಿಯ ಕಾಮನ್‌ವೆಲ್ತ್ ಕ್ರೀಡಾಕೂಟ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಗುರುವಾರದಿಂದ ಆರಂಭವಾಗಲಿದೆ. ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ ನಂತರದಲ್ಲಿ ಮೂರನೇ ಅತಿದೊಡ್ಡ ಕ್ರೀಡಾಕೂಟ ಎಂಬ ಹೆಗ್ಗಳಿಕೆ ಹೊಂದಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಈ ಬಾರಿ 72 ರಾಷ್ಟ್ರಗಳ 5000 ಕ್ಕೂ ಹೆಚ್ಚು ಕ್ರೀಡಾಪಟುಗಳು, 19 ವಿಭಾಗಗಳಲ್ಲಿ 1,875 ಪದಕಗಳಿಗಾಗಿ ಪೈಪೋಟಿ ನಡೆಸಲಿದ್ದಾರೆ.

111 ಪುರುಷರು ಮತ್ತು 104 ಮಹಿಳೆಯರನ್ನೊಳಗೊಂಡ 215 ಭಾರತೀಯ ಅಥ್ಲೀಟ್‌ಗಳು ಈ ಬಾರಿಯ ಗೇಮ್ಸ್‌ನಲ್ಲಿ 15 ವಿಭಾಗಗಳಲ್ಲಿ ಸ್ಪರ್ಧಾ ಕಣದಲ್ಲಿದ್ದಾರೆ. ತಂಡಗಳ ಪಥಸಂಚಲನದಲ್ಲಿ ಒಟ್ಟು 164 ಅಥ್ಲೀಟ್‌ಗಳು ಭಾಗವಹಿಸಲಿದ್ದು, ಪಿವಿ ಸಿಂಧು, ಭಾರತದ ಧ್ವಜ ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ.

ತೊಡೆಸಂಧು ಗಾಯದ ಕಾರಣದಿಂದ ಟೋಕಿಯೋ ಒಲಿಂಪಿಕ್ಸ್‌ ಪದಕ ವಿಜೇತ ನೀರಜ್‌ ಚೋಪ್ರಾ ಕಾಮನ್‌ವೆಲ್ತ್‌ ಕಣದಿಂದ ಹಿಂದೆ ಸರಿದಿರುವ ಕಾರಣದಿಂದ ಭಾರತಕ್ಕೆ ಪದಕವೊಂದು ತಪ್ಪಿದಂತಾಗಿದೆ. ಆದರೆ ಚೋಪ್ರಾ ಹೊರತಾಗಿಯೂ ಭಾರತದ ಖ್ಯಾತನಾಮ ಕ್ರೀಡಾಪಟುಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದಾರೆ.    

ಮೀರಾಭಾಯಿ ಚಾನು (ಮಹಿಳೆಯರ ವೇಟ್‌ಲಿಫ್ಟಿಂಗ್ 49 ಕೆ.ಜಿ)

Image

ವಿಶ್ವ ಶ್ರೇಯಾಂಕ 3 | 2020ರ ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ; ಗೋಲ್ಡ್‌ ಕೋಸ್ಟ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ

ಪಿ.ವಿ ಸಿಂಧು, ಬ್ಯಾಡ್ಮಿಂಟನ್

Image

ವಿಶ್ವ ಶ್ರೇಯಾಂಕ 7 | 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ, 2019ರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಚಿನ್ನ; ಗೋಲ್ಡ್‌ಕೋಸ್ಟ್‌ನಲ್ಲಿ ಬೆಳ್ಳಿ.

ರವಿ ಕುಮಾರ್‌ ದಹಿಯಾ (ಫ್ರೀಸ್ಟೈಲ್ ಕುಸ್ತಿ, ಪುರುಷರ 57 ಕೆ.ಜಿ)

Image
Ravi Kumar Dahiya

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ | 2020, 2021ರ ಏಷ್ಯನ್ ಚಾಂಪಿಯನ್‌ ಷಿಪ್‌ಗಳಲ್ಲಿ ಎರಡು ಚಿನ್ನದ ಪದಕ

ಬಜರಂಗ್ ಪೂನಿಯಾ (ಫ್ರೀಸ್ಟೈಲ್ ಕುಸ್ತಿ, ಪುರುಷರ 66 ಕೆ.ಜಿ ವಿಭಾಗ)

Image
Bajrang Punia

ವಿಶ್ವ ಶ್ರೇಯಾಂಕ 5 | ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು; 2018ರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ: 2018ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ.

ಸಾಕ್ಷಿ ಮಲಿಕ್‌ (ಫ್ರೀಸ್ಟೈಲ್‌ ಕುಸ್ತಿ, ಮಹಿಳೆಯರ 62 ಕೆ.ಜಿ ವಿಭಾಗ)

Image

ವಿಶ್ವ ಶ್ರೇಯಾಂಕ 16 | ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು; 2014ರ ಗ್ಲಾಸ್ಗೋ ಕ್ರೀಡಾಕೂಟದಲ್ಲಿ ಬೆಳ್ಳಿ: ಏಷ್ಯನ್ ಚಾಂಪಿಯನ್ ಷಿಪ್‌ನಲ್ಲಿ ಕಂಚು.

ಲವ್ಲೀನಾ ಬೊರ್ಗೊಹೈನ್ (ಬಾಕ್ಸಿಂಗ್, ಮಹಿಳೆಯರ 70 ಕೆ.ಜಿ ವಿಭಾಗ)

Image

ವಿಶ್ವ ಶ್ರೇಯಾಂಕ 3 | ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು; 2018, 2019ರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಕಂಚು; 2 ಏಷ್ಯನ್ ಚಾಂಪಿಯನ್ ಷಿಪ್‌ಗಳಲ್ಲಿ ಬೆಳ್ಳಿ.

ನಿಖತ್ ಝರೀನ್ (ಬಾಕ್ಸಿಂಗ್, ಮಹಿಳೆಯರ 50 ಕೆ.ಜಿ ವಿಭಾಗ)

Image

2022ರ ವಿಶ್ವಚಾಂಪಿಯನ್ ಷಿಪ್‌ನಲ್ಲಿ ಚಿನ್ನ: 2019ರ ಏಷ್ಯನ್ ಚಾಂಪಿಯನ್ ಷಿಪ್‌ನಲ್ಲಿ ಕಂಚು.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ಗೆ ಕ್ಷಣಗಣನೆ| ಮಹಿಳಾ ಸ್ಪರ್ಧಿಗಳ ಪಾರಮ್ಯ !

ಮುರಳಿ ಶ್ರೀಶಂಕರ್ (ಪುರುಷರ ಲಾಂಗ್‌ ಜಂಪ್ )

Image

ವಿಶ್ವ ಶ್ರೇಯಾಂಕ 13 | ವಿಶ್ವಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಗಳಿಸಿದ ಮೊದಲ ಭಾರತೀಯ; ರಾಷ್ಟ್ರೀಯ ದಾಖಲೆ 8.36.

ಇನ್ನುಳಿದಂತೆ ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್ ಮತ್ತು ಕಿದಂಬಿ ಶ್ರೀಕಾಂತ್, ಕುಸ್ತಿಯಲ್ಲಿ ವಿನೇಶ್ ಪೋಗಟ್ ಮತ್ತು ಬಜರಂಗ್ ಪುನಿಯಾ, ವೇಟ್‌ಲಿಫ್ಟಿಂಗ್‌ನಲ್ಲಿ ಪೂರ್ಣಿಮಾ ಪಾಂಡೆ, ಟ್ರಿಪಲ್‌ ಜಂಪ್‌ನಲ್ಲಿ ಎಲ್ದೋಸ್‌ ಪೌಲ್‌, ಜಾವೆಲಿನ್‌ನಲ್ಲಿ ರೋಹಿತ್‌ ಯಾದವ್‌ ಹಾಗೂ  ಹಾಕಿ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿಯೂ ಭಾರತ ಪದಕ ಗೆಲ್ಲುವ ನೆಚ್ಚಿನ ತಂಡವಾಗಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್