ವಿದಾಯದ ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್ ನೀರಸ ಬ್ಯಾಟಿಂಗ್

Cricket
  • ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸ್ಟೋಕ್ಸ್‌ಗೆ ನಿರಾಸೆ
  • 62 ರನ್‌ ಅಂತರದಲ್ಲಿ ಆಫ್ರಿಕಾಗೆ ಶರಣಾದ ಇಂಗ್ಲೆಂಡ್‌

ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ತಮ್ಮ ಅಂತಿಮ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ರಿವರ್‌ಸೈಡ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಐದು ಓವರ್‌ ಬೌಲಿಂಗ್ ಮಾಡಿದ್ದ ಸ್ಟೋಕ್ಸ್, 44 ರನ್ ನೀಡಿದರಾದರೂ, ವಿಕೆಟ್ ಪಡಯುವಲ್ಲಿ ವಿಫಲರಾದರು. ಆ ಬಳಿಕ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸ್ಟೋಕ್ಸ್, 11 ಎಸೆತಗಳಲ್ಲಿ ಐದು ರನ್‌ಗಳಿಸಿದ್ದ ವೇಳೆ ಏಡೆನ್ ಮಾರ್ಕಮ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. 

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಅತಿಥೇಯ ಆಫ್ರಿಕಾ, 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 333 ರನ್ ಪೇರಿಸಿತ್ತು. 334 ರನ್‌ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿತ್ತು. ಜೇಸನ್‌ ರಾಯ್‌ 43 ರನ್‌ ಮತ್ತು ಜಾನಿ ಬೆಸ್ಟೊ 63 ರನ್‌ಗಳಿಸಿ ನಿರ್ಗಮಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಜೊ ರೂಟ್‌ ಬಿರುಸಿನ ಬ್ಯಾಟಿಂಗ್‌ ನಡೆಸಿ 86 ರನ್‌ಗಳಿಸಿದ್ದ ವೇಳೆ ಕ್ಲೀನ್‌ ಬೌಲ್ಡ್‌ ಆದರು. 27 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 142 ರನ್‌ಗಳಿಸಿದ್ದ ಇಂಗ್ಲೆಂಡ್‌, ಆ ಬಳಿಕ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡ ಪರಿಣಾಮ 271 ರನ್‌ಗಳಿಗೆ ಆಲೌಟ್ ಆಯಿತು.

ನಾಯಕ  ಜಾಸ್‌ ಬಟ್ಲರ್‌ 12 ರನ್‌, ಅಪಾಯಕಾರಿ ಲಿಯಾಮ್‌ ಲಿವಿಂಗ್‌ಸ್ಟನ್‌ 10 ಹಾಗೂ ಹಿರಿಯ ಆಲ್‌ರೌಂಡರ್‌ ಮೊಯೀನ್‌ ಅಲಿ ಕೇವಲ ಮೂರು ರನ್‌ಗಳಿಸಿ ನಿರ್ಗಮಿಸುವ ಮೂಲಕ, 46.5 ಓವರ್‌ಗಳಲ್ಲಿ 271 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು, 62 ರನ್‌ ಅಂತರದಲ್ಲಿ ಆಫ್ರಿಕಾಗೆ ಶರಣಾಯಿತು.

ಈ ಸುದ್ದಿ ಓದಿದ್ದೀರಾ ? : ಒಂದು ನಿಮಿಷದ ಓದು | ಮಿಡ್ಲ್​​ಸೆಕ್ಸ್​ ಪರ ಕಣಕ್ಕಿಳಿದ ಅರ್ಜುನ್ ತೆಂಡುಲ್ಕರ್

ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಮಿಂಚಿದ ವೇಗಿ ಅನ್ರಿಚ್‌ ನೋರ್ಜೆ ನಾಲ್ಕು ವಿಕೆಟ್‌ ಪಡೆದರು. ಸ್ಪಿನ್ನರ್‌ ತಬ್ರೇಝ್‌ ಶಮ್ಸಿ ಮತ್ತು ಏಡೆನ್ ಮಾರ್ಕಮ್ ತಲಾ ಎರಡು ವಿಕೆಟ್‌ ಪಡೆಯುವಲ್ಲಿ ಸಫಲರಾದರು.

ಈ ಗೆಲುವಿನೊಂದಿಗೆ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಮುನ್ನಡೆ ಸಾಧಿಸಿದೆ.

Image
Cricket
ನಿಮಗೆ ಏನು ಅನ್ನಿಸ್ತು?
0 ವೋಟ್