ಒಂದು ನಿಮಿಷದ ಓದು | ಫುಟ್ಬಾಲ್‌ ವಿಶ್ವಕಪ್‌ಗೆ ಮಹತ್ವದ ಬದಲಾವಣೆ ಮಾಡಿದ ಫಿಫಾ

FootBall

ನವೆಂಬರ್‌ನಿಂದ ಗಲ್ಫ್‌ ರಾಷ್ಟ್ರ ಖತಾರ್‌ನಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಫುಟ್ಬಾಲ್‌ ವಿಶ್ವಕಪ್‌ ಟೂರ್ನಿಯಲ್ಲಿ ಮಹತ್ತರ ಬದಲಾವಣೆಗೆ ಅಂತಾರಾಷ್ಟ್ರೀಯ ಫುಟ್ಬಾಲ್‌ ಫೆಡರೇಶನ್‌ (ಫಿಫಾ) ಅನುಮತಿ ನೀಡಿದೆ.

32 ತಂಡಗಳು ಭಾಗವಹಿಸಲಿರುವ ಟೂರ್ನಿಯಲ್ಲಿ ತಂಡವೊಂದು ಗರಿಷ್ಠ 26 ಆಟಗಾರರನ್ನು ಆಯ್ಕೆಮಾಡಲು ಫಿಫಾ ಅವಕಾಶ ನೀಡಿದೆ. ಆಡುವ ಬಳಗದ 11 ಆಟಗಾರರನ್ನು ಹೊರತುಪಡಿಸಿ ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿ 15 ಆಟಗಾರರಿಗೆ ಫಿಫಾ ಅವಕಾಶ ನೀಡಿದೆ. ಈ ಹಿಂದೆ ಈ ಸಂಖ್ಯೆ 12 ಆಗಿತ್ತು. ಪಂದ್ಯದ ವೇಳೆ ಬದಲಾಯಿಸಬಹುದಾದ ಆಟಗಾರರ ಸಂಖ್ಯೆಯನ್ನೂ ಐದಾಗಿ ಹೆಚ್ಚಿಸಲಾಗಿದೆ. ನವೆಂಬರ್‌ 21ರಿಂದ ಆರಂಭವಾಗಲಿರುವ  ಫುಟ್ಬಾಲ್‌ ಮಹಾಸಂಗಮ ಡಿಸೆಂಬರ್‌ 18ರಂದು ಕೊನೆಗೊಳ್ಳಲಿದೆ.

Eedina App

ಈ ಸುದ್ದಿ ಓದಿದ್ದೀರಾ ? : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಾಖಲೆ ವೀರ ಇಯಾನ್‌ ಮಾರ್ಗನ್‌

ವಿಶ್ವಕಪ್‌ ಟೂರ್ನಿಯ ಅವಧಿಯಲ್ಲಿ ಆಟಗಾರರು ಕೋವಿಡ್‌ಗೆ ತುತ್ತಾಗಬಹುದಾದ ಸಾಧ್ಯತೆಯನ್ನು ಗಣನೆಗೆ ತೆಗೆದುಕೊಂಡು ಮತ್ತು ಹೆಚ್ಚಿನ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಬದಲಾವಣೆಗೆ ಮುಂದಾಗಿರುವುದಾಗಿ  ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ ತಿಳಿಸಿದೆ.

AV Eye Hospital ad
ನಿಮಗೆ ಏನು ಅನ್ನಿಸ್ತು?
0 ವೋಟ್
eedina app