ಫುಟ್‌ಬಾಲ್ ವಿಶ್ವಕಪ್ । ಉದ್ಘಾಟನಾ ಪಂದ್ಯದ ಬಳಿಕ ಜನರ ಮನಗೆದ್ದ ಜಪಾನ್ ಅಭಿಮಾನಿಗಳ ಸೇವೆ ; ವಿಡಿಯೋ ವೈರಲ್

Japan fans help clean up garbage at 2022 World Cup opener
  • ಭಾನುವಾರ ಈಕ್ವೆಡಾರ್ - ಆತಿಥೇಯ ಕತಾರ್ ನಡುವೆ ನಡೆದಿದ್ದ ಆರಂಭಿಕ ಪಂದ್ಯ
  • ಕ್ರೀಡಾಂಗಣವನ್ನು ಸ್ವಯಂ ಸೇವಕರಂತೆ ಸ್ವಚ್ಛಗೊಳಿಸಿ ಮಾದರಿಯಾದ ಜಪಾನಿಗರು 

ಅರಬ್ ದೇಶ ಕತಾರ್ ನಲ್ಲಿ ಕಳೆದ ಭಾನುವಾರ ಆರಂಭಗೊಂಡ ವಿಶ್ವಕಪ್ ಫುಟ್‌ಬಾಲ್ ಸದ್ಯ ವಿಶ್ವದಲ್ಲೆಡೆ ಸುದ್ದಿಯಾಗುತ್ತಿದೆ. ದೋಹಾದ ಅಲ್-ಬೈತ್ ಕ್ರೀಡಾಂಗಣದಲ್ಲಿ ಈಕ್ವೆಡಾರ್ ಮತ್ತು ಆತಿಥೇಯ ಕತಾರ್ ನಡುವೆ ನಡೆದಿದ್ದ ಆರಂಭಿಕ ಪಂದ್ಯದ ಬಳಿಕ ಜಪಾನ್ ದೇಶದಿಂದ ಬಂದಿದ್ದ ಅಭಿಮಾನಿಗಳು ಸದ್ಯ ಸುದ್ದಿಯಾಗಿದ್ದಾರೆ.

ಉದ್ಘಾಟನಾ ಕಾರ್ಯಕ್ರಮ ಮತ್ತು ಮೊದಲ ಪಂದ್ಯ ಮುಗಿದ ಬಳಿಕ ಕ್ರೀಡಾಂಗಣ ಖಾಲಿಯಾದರೂ, ಜಪಾನ್ ದೇಶದಿಂದ ಬಂದಿದ್ದ ಅಭಿಮಾನಿಗಳು ಸ್ಟೇಡಿಯಂ ತೊರೆದಿರಲಿಲ್ಲ. ಕಾರಣ ಇಷ್ಟೇ. ಕ್ರೀಡಾಂಗಣದಲ್ಲಿ ತುಂಬಿಕೊಂಡಿದ್ದ ಆಹಾರದ ತ್ಯಾಜ್ಯ, ಪಾನೀಯ ಬಾಟಲಿ ಸೇರಿದಂತೆ ಇತರ ತ್ಯಾಜ್ಯವನ್ನು ಸ್ವಯಂ ಸೇವಕರಂತೆ ಸ್ವಚ್ಛಗೊಳಿಸಿ, ಎಲ್ಲರಿಗೂ ಮಾದರಿಯಾಗಿದ್ದಾರೆ. ಸದ್ಯ ಇವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Eedina App

ಜಪಾನಿಗರು ಕ್ರೀಡಾಂಗಣವನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಸೆರೆ ಹಿಡಿದಿರುವ ಮೂಲತಃ ಬಹರೈನಿನ ಒಮರ್ ಅಲ್-ಫಾರೂಕ್ ಎಂಬ ವ್ಲಾಗರ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

AV Eye Hospital ad

"ನೀವು ಇದನ್ನು ಏಕೆ ಮಾಡುತ್ತಿದ್ದೀರಿ?" ಎಂದು ಫಾರೂಕ್ ಕೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ, "ನಾವು ಜಪಾನಿಯರು. ನಾವು ಕಸವನ್ನು ಬಿಡುವುದಿಲ್ಲ. ಯಾವುದೇ ಸ್ಥಳಕ್ಕೆ ಹೋದರು, ಆ ಸ್ಥಳವನ್ನು ಗೌರವಿಸುತ್ತೇವೆ. ಇದು ನಮ್ಮ ಕರ್ತವ್ಯ" ಎಂದು ಜಪಾನಿಯರಲ್ಲಿ ಒಬ್ಬರು ಹೇಳಿದರು.

ಅಲ್ಲದೇ, ನೆಲಕ್ಕೆ ಬಿದ್ದಿದ್ದ ಕತಾರಿ ಮತ್ತು ಈಕ್ವೆಡಾರ್ ಧ್ವಜಗಳನ್ನು ಎತ್ತಿಕೊಂಡರಲ್ಲದೆ, ಧ್ವಜಗಳು "ಗೌರವಕ್ಕೆ ಅರ್ಹವಾದವು" ಎಂದು ಹೇಳಿದರು.

Japan fans help clean up garbage at 2022 World Cup opener

2018ರಲ್ಲಿ ಕೊಲಂಬಿಯಾ ವಿರುದ್ಧ ಜಪಾನ್‌ನ ಪಂದ್ಯದ ನಂತರ ಜಪಾನ್ ಅಭಿಮಾನಿಗಳು ಇದೇ ರೀತಿ ಸ್ವಚ್ಛ ಮಾಡುವ ಮೂಲಕವೂ ಸುದ್ದಿಯಾಗಿದ್ದರು. ಪಂದ್ಯದ ನಂತರ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿರುವ ಜಪಾನಿಯರ ಈ ಸೇವೆಗೆ, ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

"ಇದು ಎಲ್ಲರಿಗೂ ಮಾದರಿ. ಜಪಾನಿಯರ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು" ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
5 ವೋಟ್
eedina app