
ಫುಟ್ಬಾಲ್ ಮೂಲತಃ ವಲಸೆ ಕಾರ್ಮಿಕರ ಆಟ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಆಟ ಬಿಲಿಯಾಧಿಪತಿಗಳ ಪಾಲಾಗಿದೆ. ಇದು ಹೇಗಾಯ್ತು? ಈ ಕತೆಯನ್ನು ತಿಳಿಯುವ ಪ್ರಯತ್ನವನ್ನು ಅರ್ಜೆಂಟೀನಾ ದೇಶದಿಂದ ಆರಂಭಿಸೋಣ.
ಅರ್ಜೆಂಟೀನಾದಲ್ಲೊಂದು ಬಹಳ ಜನಜನಿತವಾದ ಮಾತೊಂದಿದೆ, "ಅರ್ಜೆಂಟೀನದಲ್ಲಿರುವವರು ವಾಸ್ತವದಲ್ಲಿ ಒಬ್ಬ ಇಟಲಿ ಮೂಲದವನಾಗಿರುತ್ತಾನೆ, ಆದರೆ ಆತ ಸ್ಪಾನಿಷ್ ಮಾತನಾಡಬಲ್ಲವನಾಗಿರುತ್ತಾನೆ. ಆದರೆ ತನ್ನನ್ನು ಫ್ರೆಂಚ್ ಎಂದು ಭಾವಿಸುತ್ತಾನೆ, ಹಾಗೆ ರಹಸ್ಯವಾಗಿ ಬ್ರಿಟಿಷ್ ಆಗಬೇಕೆಂದು ಬಯಸುತ್ತಿರುತ್ತಾನೆ''.
ಅರ್ಜೆಂಟೀನಾ ದೇಶದ ರಾಜಧಾನಿ ಬ್ಯೂನಸ್ ಐರಿಸ್ ವಿಶ್ವದ ಅತ್ಯಂತ ಸುಂದರವಾದ ನಗರಗಳಲ್ಲಿ ಒಂದು. . ಗ್ರೆನಾಡಾದಂತೆಯೇ, ಇಲ್ಲಿಯೂ ಸಹ ಇಸ್ಲಾಮಿಕ್ ಶೈಲಿಯು ನಿರ್ಮಾಣಗಳನ್ನು ಕಾಣಬಹುದು (ಅಲ್ಲಲ್ಲಿ ನೆರೆಹೊರೆಯಲ್ಲಿ ಕ್ರಿಶ್ಚಿಯನ್ನರು ಇರುವುದನ್ನು ಕಾಣಬಹುದು). ಬ್ಯೂನಸ್ ಐರಿಸ್ ಒಂದು ರೀತಿಯಲ್ಲಿ ಬಹಿಷ್ಕೃತ ನಗರ, ಪ್ಯಾರಿಸ್ನಂತೆ, ಇಲ್ಲಿನ ಬಾರ್ಗಳಲ್ಲಿ ಜನರು ಸ್ಪ್ಯಾನಿಷ್ ಮಾತನಾಡುತ್ತಾ, ಇಟಾಲಿಯನ್ ಫುಟ್ಬಾಲ್ ಲೀಗ್ ಅನ್ನು ವೀಕ್ಷಿಸುತ್ತಿರುತ್ತಾರೆ!
ಅರ್ಜೆಂಟೀನಾವನ್ನು ʻಕರಗಿಸುವ ಮಡಕೆ' ಬಳಬಳಸಿ ಸವಕಲಾದ ಪದಕ್ಕೆ ಹೋಲಿಸುವುದರಲ್ಲೇನು ತಪ್ಪಿಲ್ಲ. ಸ್ಪ್ಯಾನಿಷ್ ವಸಾಹತುಗೆ ಒಳಪಟ್ಟಿದ್ದ ಈ ದೇಶ, 1818 ರಲ್ಲಿ ಸ್ವಾತಂತ್ರ್ಯ ಗಳಿಸಿತ್ತು. ಇಲ್ಲಿನ ಜನಸಂಖ್ಯೆಯ ಶೇ.45ರಷ್ಟು ಮಂದಿ ಇಟಲಿ ಮೂಲದವರು ಮತ್ತು ಯಹೂದಿಗಳು ಅತಿದೊಡ್ಡ ಸಂಖ್ಯೆಯಲ್ಲಿ ಇಲ್ಲಿ ವಾಸಿಸುತ್ತಿದ್ದಾರೆ (ನೆನಪಿರಲಿ, ನಾಜಿ ಪಡೆಯ ಮುಖ್ಯ ಸ್ಥಾನದಲ್ಲಿ ಅಡಾಫ್ ಈಕಮ್ನನನ್ನು ಇದೇ ಬ್ಯೂನಸ್ ಐರಿಸ್ನಲ್ಲಿದ್ದ ಯಹೂದಿ ಗುರುತಿಸಿದ್ದರು, ನಂತರ ಅಡಾಲ್ಫ್ನನ್ನು ಶಿಕ್ಷೆಗೆ ಗುರಿಪಡಿಸಲಾಯಿತು)
ಇಂತಹ ಅರ್ಜೆಂಟೀನಾಕ್ಕೆ ಫುಟ್ಬಾಲ್ ಪರಿಚಯವಾಗಿದ್ದು ಬ್ರಿಟಿಷರಿಂದ. ಸ್ಕಾಟ್ಲೆಂಡ್ ಮೂಲದ ಅಲೆಕ್ಸಾಂಡರ್ ವಾಟ್ಸನ್ ಹಟನ್ ಅರ್ಜೆಂಟೀನಾ ಫುಟ್ಬಾಲ್ನ ಪಿತಾಮಹ ಎಂದು ಕರೆಯುತ್ತಾರೆ (ನೆನಪಿರಲಿ: ಬ್ರೆಜಿಲ್ಗೆ ಫುಟ್ಬಾಲ್ ಪರಿಚಯಿಸಿದ್ದು ಸ್ಕಾಟ್ಲೆಂಡ್ ಮೂಲದ ಥಾಮಸ್ ಡೊನೊಹೊ, ಹಾಗೆಯೇ ಬ್ರೆಜಿಲ್ನ ಫುಟ್ಬಾಲ್ ಪಿತಾಮಹ ಎಂದು ಕರೆಯಲಾಗುವ ಚಾರ್ಲ್ಸ್ ವಿಲಿಯಂ ಮಿಲ್ಲರ್ ಕೂಡ ಸ್ಕಾಟಿಶ್) .
ಯುರೋಪಿನಿಂದ ಅಟ್ಲಾಂಟಿಕ್ ಕಡೆಗೆ ನಡೆದ ಬಹುದೊಡ್ಡ ವಲಸೆ (ಟ್ರಾನ್ಸ್ ಅಟ್ಲಾಂಟಿಕ್ ಮೈಗ್ರೇಷನ್) ಅಂದರೆ ಇಂಟಲಿಯನ್ನರು, ಅಮೆರಿಕ, ಬ್ರೆಜಿಲ್ ಮತ್ತು ಅರ್ಜೆಂಟಿನಾ ವಲಸೆಹೋಗಿದ್ದು. ಇಂಟಲಿಯನ್ನರು ಬ್ರೆಜಿಲ್ಗೆ ಗುಳೆ ಹೋದರು. ಅಲ್ಲಿ ಆರಂಭದಲ್ಲಿ ಕೆಲವು ಸ್ಥಳೀಯ ಫುಟ್ಬಾಲ್ ಕ್ಲಬ್ಗಳು ಇದ್ದವು ( ಬ್ರೆಜಿಲ್ನ ಅತಿ ದೊಡ್ಡ ಕ್ಲಬ್ ಪಮೇರಸ್ ಮೂಲದಲ್ಲಿ ಇಟಲಿಯ ವಲಸಿಗರು ಕಟ್ಟಿದ ಫುಟ್ ಬಾಲ್ ಕ್ಲಬ್). ಆದರೂ ಅರ್ಜೆಂಟಿನಾ ಫುಟ್ಬಾಲ್ ಮೇಲೆ ಇಟಲಿಯ ವಲಸಿಗರ ಪ್ರಭಾವ ಮಹತ್ವದ್ದು ಎಂದೇ ಗುರುತಿಸಲಾಗುತ್ತದೆ. ಮೊದಲ ಕ್ಲಬ್, ರಿವರ್ ಪ್ಲೇಟ್ವನ್ನು ಗೆನೊದ ವಲಸಿಗರು ಸೇರಿ 1901ರಲ್ಲಿ ಆರಂಭಿಸಿದರು. ಗೆನೊ ವಲಸಿಗರು ಸೇರಿ 1905ರಲ್ಲಿ ಆರಂಭಿಸಿದ್ದ ಬೊಕಾ ಜೂನಿಯರ್ಸ್ ತಂಡದಲ್ಲಿ ಇಟಲಿ ವಲಸಿಗರ ಪ್ರಾತಿನಿಧ್ಯ ಹೆಚ್ಚಾಗಿತ್ತು.
ಎರಡೂ ಕ್ಲಬ್ಗಳಲ್ಲಿ ಇಟಲಿ ಮೂಲದವರಿದ್ದರು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಗೆನೊ ಮೂಲದವರಿದ್ದರು. ಆದರೆ ರಿವರ್ ಪ್ಲೇಟ್ ಅನ್ನು ಬೂರ್ಜ್ವಾದ ಕ್ಲಬ್ ಎಂತಲೂ ಮತ್ತು ಬೊಕಾ ಜೂನಿಯರ್ ಕ್ಲಬ್ ಅನ್ನು ಕಾರ್ಮಿಕರ ಕ್ಲಬ್ ಎಂತಲೂ ಬಣ್ಣಿಸಲಾಗುತ್ತಿತ್ತು. ಇದು ಸತ್ಯವೇ, ಆದರೆ ಪೂರ್ಣ ಸತ್ಯವಲ್ಲ. ರಿವರ್ ಪ್ಲೇಟ್ ಕ್ಲಬ್ಅನ್ನು ಮಿಲಿಯಾಧಿಪತಿಗಳ ಕ್ಲಬ್ ಎಂದು ಕರೆಯಲಾಗುತ್ತಿತ್ತು. ಆದರೆ ಬೊಕಾ ಜೂನಿಯರ್ಗಳ ಕ್ಲಬ್ ಅನ್ನು ಬೋಸ್ಟೆರೊಸ್ ( ಅಥವಾ ಲದ್ದಿ ಹುಡುಗರು) ಎಂದು ಕರೆಯಲಾಗುತ್ತಿತ್ತು. ಕುದುರೆಯ ಲದ್ದಿಯನ್ನು ಎತ್ತುವವರಾಗಿದ್ದರು. ಈ ಲದ್ದಿಯನ್ನು ಆಗ ಇಟ್ಟಿಗೆ ನಿರ್ಮಾಣದಲ್ಲಿ ಬಳಸಲಾಗುತ್ತಿತ್ತು. ಇದೇ ಲದ್ದಿ ಸ್ಟೇಡಿಯಂ ಕಟ್ಟುವುದಕ್ಕೂ ಮೊದಲು ಮೈದಾನಕ್ಕೆ ಬಳಸಲಾಗುತ್ತಿತ್ತು.
Newell's and @Argentina. Intrinsically linked throughout history. Without one, there cannot be the other.
— Newell's Old Boys - English (@Newells_en) November 19, 2022
At the 2022 World Cup, the bond remains unbreakable.
Both the manager & captain of Argentina started their careers at our club.
𝐕𝐚𝐦𝐨𝐬 𝐀𝐫𝐠𝐞𝐧𝐭𝐢𝐧𝐚 🇦🇷 pic.twitter.com/5FuMkyGwbS
ರಿಯಲ್ ಮ್ಯಾಡ್ರಿಡ್ನ ದಂತಕತೆಯಾದ ಆಲ್ಫ್ರೆಡ್ ಡಿ ಸ್ಟೆಫಾನೋ ರಿವರ್ ಕ್ಲಬ್ನ ಹೆಮ್ಮೆ ಎಂದು ಬೀಗುತ್ತಿದ್ದರೆ, ಬೊಕಾ ಪಾಲಿಗೆ ಡಿಯಾಗೊ ಮರಡೋನಾ. ಫುಟ್ಬಾಲ್ ತಾರೆಗಳಾದ ರಾಡಾಮೆಲ್ ಫಾಲ್ಕೊ, ಅಲೆಕ್ಸಿಸ್ ಸಾಂಚೆಜ್ ಮತ್ತು ಗೋಂಜಾಲೊ ಹಿಗಿಯನ್ ರಿವರ್ ಕ್ಲಬ್ ಜೊತೆಗಿದ್ದರೆ, ಮತ್ತೊಂದೆಡೆ ದಿಗ್ಗಜ ಆಟಗಾರರಾಗಿದ್ದ ಕಾರ್ಲೊಸ್ ಟೆವೆಜ್ ಮತ್ತು ಯುವಾನ್ ರಿಕೆಲಮ್ ಬೊಕಾ ತಂಡದ ಸದಸ್ಯರಾಗಿದ್ದರು.
ಈ ಎರಡೂ ತಂಡಗಳು ಮೈದಾನಕ್ಕೆ ಇಳಿದರೆ, ಅದನ್ನು 'ಅತ್ಯುತ್ಕೃಷ್ಟ' ಎಂದೇ ಕರೆಯಲಾಗುತ್ತದೆ. ಅದು ಅಕ್ಷರಶಃ ವೀರಾವೇಶದ ಪಂದ್ಯವೇ ಆಗಿರುತ್ತದೆ. 2018ರ ಕೋಪಾ ಲಿಬರ್ಟಡೋರ್ಸ್ ಫೈನಲ್ಸ್ ವೇಳೆ (ಚಾಂಪಿಯನ್ ಲೀಗ್ ಆಫ್ ಸೌತ್ ಅಮೇರಿಕಾ) ಬೊಕಾ ತಂಡದ ಆಟಗಾರರ ಮೇಲೆ ದಾಳಿ ನಡೆದಿದ್ದ ಕಾರಣಕ್ಕೆ ಆಟವನ್ನು ಸ್ಥಗಿತಗೊಳಿಸಲಾಯಿತು. ಬಳಿಕ ರಿಯಲ್ ಮ್ಯಾಡ್ರಿಡ್ನ ತವರು ಮೈದಾನದ ಸ್ಯಾಂಟಿಯಾಗೊ ಬರ್ನಾಬ್ಯೂನಲ್ಲಿ ಆಡಿಸಲಾಗಿತ್ತು.
ನಾನು ಅರ್ಜೆಂಟಿನಾದಲ್ಲಿದ್ದಾಗ, ನನ್ನ ಕೊಲಂಬಿಯಾ ಸ್ನೇಹಿತ ಬೊಕಾ ಜೂನಿಯರ್ಸ್ ಪಂದ್ಯ ನೋಡಲು ಹೋಗುವುದಕ್ಕೆ ಹರಸಾಸಹ ಮಾಡಿದ್ದ. ನಾನು ಪಂದ್ಯ ನೋಡಲು ಹೋಗುವ ಆಲೋಚನೆಯನ್ನೇ ಕೈಬಿಟ್ಟೆ ( ನನಗೆ ಸ್ಪ್ಯಾನಿಷ್ ಬರುತ್ತಿರಲಿಲ್ಲ ಎಂಬುದು ಬೇರೆ ಮಾತು). ಬೊಕಾ ಜೂನಿಯರ್ಗೆ ಸಮೀಪದಲ್ಲಿರುವುದು ಲಾ ಬೊಕಾ, ಇದೊಂದು ಸುಂದರವಾದ ತಾಣ. ಇಲ್ಲಿ ಕಾಣಿಸುವ ಹಲವಾರು ಸೆಕ್ಯುರಿಟಿ ಗಾರ್ಡ್ಗಳು ನಿಮಗೆ ನಗರದ ದಾರಿ ತೋರುತ್ತಾರೆ. ಅಷ್ಟಕ್ಕೂ ಮರಡೋನಾ ಕ್ರೀಡಾ ಜೀವನ ಆರಂಭವಾಗಿದ್ದೇ ಇಲ್ಲಿ.
ನೀವು ಅರ್ಜೆಂಟೀನಾ ದೇಶಕ್ಕೆ ಭೇಟಿ ನೀಡುವ ವೇಳೆ ಅಲ್ಲಿನ ಬಾರ್ಗಳಲ್ಲಿ ಯುರೋಪಿಯನ್ ಫುಟ್ಬಾಲ್ ಲೀಗ್ ಪಂದ್ಯಗಳನ್ನು ವೀಕ್ಷಿಸಬಹುದು ಯೋಚಿಸಲು ಹೋಗಬೇಡಿ. ಏಕೆಂದರೆ ಅಲ್ಲೆಲ್ಲಾ ಇಟಾಲಿಯನ್ ಲೀಗ್ ಟೂರ್ನಿಯ ಪಂದ್ಯಗಳನ್ನೇ ವೀಕ್ಷಿಸುವುದು. ಇಟಾಲಿಯನ್ ವಲಸಿಗರ ಪ್ರಭಾವ ಫುಟ್ಬಾಲ್ ಜೊತೆಗೆ, ಆಹಾರ, ಉಡುಗೆ ಮತ್ತು ಜೀವನ ಶೈಲಿ, ಸಂಸ್ಕೃತಿ ಎಲ್ಲದರಲ್ಲೂ ಕಾಣಬಹುದು. ಬ್ಯೂನಸ್ ಐರಿಸ್ನ ಸೊಹೊ ಪೊಲೆರ್ಮೊ ಸಮೀಪ ಕಾಫಿ ಚೆನ್ನಾಗಿತ್ತು ಎಂಬುದು ನನ್ನ ಪಾಲಿಗೆ ಅಚ್ಚರಿಯಾಗಿತ್ತು. ಅಲ್ಲಿ ಬಿಟ್ಟರೆ ಇನ್ನೆಲ್ಲೂ ಕಾಫಿ ಚೆನ್ನಾಗಿರಲಿಲ್ಲ.
ಬ್ರೆಜಿಲಿಯನ್ ಫುಟ್ಬಾಲ್ಯಾಕೆ ಇಟಲಿಯ ದೇಸಿ ಕ್ಲಬ್ಮತ್ತು ಇಟಲಿಯ ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ ಎಂದು ಅಚ್ಚರಿಪಡಬಹುದು. ಫುಟ್ಬಾಲ್ ಎಂಬುದು ದುಡಿಯುವ ವರ್ಗದ ಆಟವಾಗಿತ್ತು. ಆದರೀಗ ಅದು ಬದಲಾದ ಸನ್ನಿವೇಶದಲ್ಲಿ ಅತಿ ಶ್ರೀಮಂತರು ಮತ್ತು ಸಂಪನ್ನ ರಾಷ್ಟ್ರಗಳು ಈ ಕ್ರೀಡೆಯ ಮೇಲೆ ಸಾರ್ವಭೌಮತ್ವ ಹೊಂದಿವೆ. ಈಗ ವಲಸೆಯ ಕಾರ್ಮಿಕರು ಈ ಬಾರಿಯ ಕತಾರ್ ವಿಶ್ವಕಪ್ನ ವೈಭವದ ಕ್ರೀಡಾ ಹಬ್ಬಕ್ಕೆ ಸ್ಟೇಡಿಯಂ ಮತ್ತು ಇತರ ಮೂಲಸೌಲಭ್ಯಗಳನ್ನು ನಿರ್ಮಿಸುವುದರಲ್ಲಿ ಭಾಗಿಯಾಗಿದ್ದಾರೆ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಹೋದವರೇ ಹೆಚ್ಚು. ಹಾಗೇ ಫುಟ್ಬಾಲ್ನ ಕತೆಯನ್ನು ಒಂದು ವಲಸೆಯಿಂದ, ಇನ್ನೊಂದು ವಲಸೆಯಾಗಿ ಹುಡುಕಬಹುದು. ಇದೂ ಕೂಡ ದುಡಿಯುವ ಜೀವಿಗಳ ಕಥೆ ಆಗಿರುತ್ತದೆ.