ಫಿಫಾ ವಿಶ್ವಕಪ್‌ | ಎಂಬಾಪೆ ಮಿಂಚು, ಮೊದಲ ತಂಡವಾಗಿ 16ರ ಘಟ್ಟ ಪ್ರವೇಶಿಸಿದ ಹಾಲಿ ಚಾಂಪಿಯನ್‌ ಫ್ರಾನ್ಸ್‌

  • 16ರ ಘಟ್ಟ ಪ್ರವೇಶಿಸಿದ ಫ್ರಾನ್ಸ್‌
  • ಎಂಬಾಪೆ ʻಡಬಲ್‌ ಗೋಲುʼ 

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸುವ ಮೂಲಕ ಹಾಲಿ ಚಾಂಪಿಯನ್‌ ಫ್ರಾನ್ಸ್‌, ಮೊದಲ ತಂಡವಾಗಿ ಟೂರ್ನಿಯ 16ರ ಘಟ್ಟ ಪ್ರವೇಶಿಸಿದೆ.

ಸ್ಟೇಡಿಯಂ 974ನಲ್ಲಿ ಶನಿವಾರ ರಾತ್ರಿ ನಡೆದ ಗ್ರೂಪ್‌ ಡಿಯ ಪಂದ್ಯದಲ್ಲಿ ಫ್ರಾನ್ಸ್‌, ಡೆನ್ಮಾರ್ಕ್‌ ವಿರುದ್ಧ 2-1 ಅಂತರದಲ್ಲಿ ರೋಚಕ ಗೆಲುವು ಸಾಧಿಸಿತ್ತು. 61 ಮತ್ತು 86ನೇ ನಿಮಿಷದಲ್ಲಿ ಸ್ಟಾರ್‌ ಆಟಗಾರ ಕಿಲಿಯನ್‌ ಎಂಬಾಪೆ ಗಳಿಸಿದ ಎರಡು ಗೋಲುಗಳ ನೆರವಿನ ಮೂಲಕ ಫ್ರಾನ್ಸ್‌, ಮುಂದಿನ ಸುತ್ತು ಪ್ರವೇಶಿಸಿದೆ.

Eedina App

ಗೋಲು ರಹಿತ ಮೊದಲಾರ್ಧದ ಬಳಿಕ 61ನೇ ನಿಮಿಷದಲ್ಲಿ ಫ್ರಾನ್ಸ್‌ ಮುನ್ನಡೆ ಸಾಧಿಸಿತ್ತು. ಆದರೆ 68ನೇ ನಿಮಿಷದಲ್ಲಿ ಆಂಡ್ರಿಯಾಸ್ ಕ್ರಿಸ್ಟೇನ್ಸೆನ್ ಗೋಲಿನ ಮೂಲಕ ಡಚ್‌ ಪಡೆ ಸಮಬಲ ಸಾಧಿಸಿತ್ತು.

AV Eye Hospital ad

ಬುಧವಾರ ನಡೆದಿದ್ದ ಗ್ರೂಪ್‌ ಹಂತದ ಮೊದಲ ಪಂದ್ಯದಲ್ಲಿ ಆಸ್ಟೇಲಿಯ ತಂಡವನ್ನು 4-1 ಅಂತರದಲ್ಲಿ ಫ್ರಾನ್ಸ್‌ ಮಣಿಸಿತ್ತು.  

2 ಪಂದ್ಯಗಳಲ್ಲಿ ಗೆಲುವು ಕಾಣುವ ಮೂಲಕ ಫ್ರಾನ್ಸ್‌ 6 ಅಂಕಗಳೊಂದಿಗೆ ಗ್ರೂಪ್‌ ಡಿಯಲ್ಲಿ ಅಗ್ರಸ್ಥಾನಕ್ಕೇರಿದೆ. 1 ಪಂದ್ಯ ಗೆದ್ದಿರುವ ಆಸ್ಟೇಲಿಯ 3 ಅಂಕ, ಡೆನ್ಮಾರ್ಕ್‌ ಮತ್ತು ಟ್ಯುನಿಷಿಯಾ ತಲಾ 1 ಅಂಕಗಳಿಸಿದೆ.

ಎ, ಬಿ, ಸಿ ಹಾಗೂ ಡಿ ಗ್ರೂಪ್‌ಗಳಲ್ಲಿನ ಎಲ್ಲಾ ತಂಡಗಳು ಈಗಾಗಲೇ ತಲಾ 2 ಪಂದ್ಯಗಳನ್ನಾಡಿವೆ. ಆದರೂ ಸಹ ಫ್ರಾನ್ಸ್‌ ಹೊರತುಪಡಿಸಿ ಯಾವುದೇ ತಂಡಗಳು ನಾಕೌಟ್‌ ಹಂತವನ್ನು ಪ್ರವೇಶಿಸಿಲ್ಲ. ಅರ್ಜೆಂಟಿನಾ, ಇಂಗ್ಲೆಂಡ್‌ ಸೇರಿದಂತೆ ಬಹುತೇಕ ತಂಡಗಳಿಗೆ ಗ್ರೂಪ್‌ ಹಂತದ ಕೊನೆಯ ಪಂದ್ಯ ಅಳಿವು-ಉಳಿವಿನ ಪಂದ್ಯವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app