ಟಿ20 ಕ್ರಿಕೆಟ್ | ಎರಡು ಪಂದ್ಯಗಳಲ್ಲಿ ಎರಡು ವಿಶ್ವದಾಖಲೆ

  •  ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಬಿ ವಿಭಾಗದ ಪಂದ್ಯ
  • ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಆಟಗಾರ

ಫ್ರಾನ್ಸ್‌ ಕ್ರಿಕೆಟ್‌ ತಂಡದ ತಂಡದ ಯುವ ಬ್ಯಾಟ್ಸ್‌ಮನ್‌ ಗುಸ್ತಾವ್ ಮೆಕಾನ್ ಸತತ ಎರಡು ಟಿ20 ಪಂದ್ಯಗಳಲ್ಲಿ ಎರಡು ವಿಶ್ವದಾಖಲೆ ಸ್ಥಾಪಿಸಿ ಸುದ್ದಿಯಾಗಿದ್ದಾರೆ.

ಫಿನ್‌ಲ್ಯಾಂಡ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಬಿ ವಿಭಾಗದ ಪಂದ್ಯದಲ್ಲಿ ಮೆಕಾನ್‌, ಸ್ವಿಝರ್‌ಲ್ಯಾಂಡ್‌ ವಿರುದ್ಧ ಅಬ್ಬರದ ಶತಕ ಬಾರಿಸಿದ್ದಾರೆ. ಇದಕ್ಕೂ ಮೊದಲು ನಾರ್ವೆ ವಿರುದ್ಧದ ಪಂದ್ಯದಲ್ಲೂ ಮೆಕಾನ್‌ ಆಕರ್ಷಕ ಶತಕ ದಾಖಲಿಸಿದ್ದರು. ಆ ಮೂಲಕ ಸತತ ಎರಡು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಶತಕ ಸಿಡಿಸಿದ ಮೊದಲನೇ ಆಟಗಾರ ಎಂಬ ಕೀರ್ತಿಗೆ ಫ್ರಾನ್ಸ್‌ ತಂಡದ ಗುಸ್ತಾವ್ ಮೆಕಾನ್  ಪಾತ್ರರಾಗಿದ್ದಾರೆ.

ವೃತ್ತಿ ಜೀವನದ ಮೂರನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಮೆಕಾನ್‌, 61 ಎಸೆತಗಳನ್ನು ಎದುರಿಸಿ 109 ರನ್‌ ಗಳಿಸಿ ಮಿಂಚಿದರು. ಮೆಕಾನ್‌ ಇನ್ನಿಂಗ್ಸ್‌ ಎಂಟು ಸಿಕ್ಸರ್‌, ಐದು ಬೌಂಡರಿಗಳನ್ನು ಒಳಗೊಂಡಿತ್ತು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ನೆರವಾಗಲಿಲ್ಲ. ಮೆಕಾನ್‌ ಶತಕ ಹೊರತುಪಡಿಸಿ ಲಿಂಗೇಶ್ವರನ್ ಕ್ಯಾನೆಸ್ಸೇನ್ ಗಳಿಸಿದ 15 ರನ್‌ ಅತ್ಯಧಿಕ ಸ್ಕೋರ್‌ ಎನಿಸಿಕೊಂಡಿತು. ಅಂತಿಮವಾಗಿ ಫ್ರಾನ್ಸ್‌ 8 ವಿಕೆಟ್‌ ನಷ್ಟದಲ್ಲಿ 158 ರನ್‌ ಗಳಿಸಿತ್ತು.

Image

ಗುರಿ ಬೆನ್ನಟ್ಟಿದ ಸ್ವಿಝರ್‌ಲ್ಯಾಂಡ್‌, 11 ರನ್‌ ಅಂತರದಲ್ಲಿ ಗೆಲುವಿನಿಂದ ದೂರ ಉಳಿಯಿತು. ಬ್ಯಾಟಿಂಗ್‌ ಬಳಿಕ ಬೌಲಿಂಗ್‌ನಲ್ಲೂ ಮಿಂಚಿದ ಮೆಕಾನ್‌, ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ 27 ರನ್‌ ನೀಡಿ ಮೂರು ವಿಕೆಟ್‌ ಪಡೆದು ಮಿಂಚಿದರು. ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಗುಸ್ತಾವ್ ಮೆಕಾನ್ ಪಾಲಾಯಿತು.

ಈ ಸುದ್ದಿ ಓದಿದ್ದೀರಾ ? : ಏಕದಿನ ಸರಣಿ ʻಕ್ಲೀನ್‌ಸ್ವೀಪ್‌ʼ ಸಾಧನೆಯ ಬಳಿಕ ಟಿ20 ಸಮರ

ಅತಿ ಕಿರಿಯ ಆಟಗಾರ ದಾಖಲೆ!

ಇದಕ್ಕೂ ಮೊದಲು ನಾರ್ವೆ ವಿರುದ್ಧದ ಪಂದ್ಯದಲ್ಲಿ ಬಿರುಸಿನ 101 ರನ್ ರನ್‌ ಗಳಿಸಿದ್ದ ಮೆಕಾನ್‌, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನೂ ತನ್ನದಾಗಿಸಿಕೊಂಡಿದ್ದರು.

ವೃತ್ತಿ ಜೀವನದಲ್ಲಿ ಇದುವರೆಗೂ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಗುಸ್ತಾವ್ ಮೆಕಾನ್, ಕ್ರಮವಾಗಿ 76, 109 ಹಾಗೂ 101 ರನ್‌ ಗಳಿಸಿದ್ದಾರೆ. ಆ ಮೂಲಕ ಮೊದಲ ಮೂರು ಪಂದ್ಯಗಳಲ್ಲಿ ಒಟ್ಟು 286 ರನ್‌ ಕಲೆ ಹಾಕಿದ ಮೊತ್ತ ಮೊದಲ ಆಟಗಾರ ಎಂಬ ದಾಖಲೆಯನ್ನೂ ತನ್ನದಾಗಿಸಿಕೊಂಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್