ಗೋಲ್‌ ಪೋಸ್ಟ್‌ 2 | ವೇಲ್ಸ್‌ಗೊ.. ಇಂಗ್ಲೆಂಡಿಗೊ... ಯಾರನ್ನು ಬೆಂಬಲಿಸುತ್ತಾರೆ ಬ್ರಿಟನ್ನಿನ ರಾಜಕುಮಾರ ವಿಲಿಯಮ್ಸ್‌!

williams
ʼವೇಲ್ಸ್‌ನ ರಾಜಕುಮಾರʼ ಎಂಬುದು ಬ್ರಿಟಿಷ್‌ ಸಿಂಹಾಸನದ ಉತ್ತರಾಧಿಕಾರಿಗೆ ಪ್ರತ್ಯೇಕವಾಗಿ ಮೀಸಲಾದ ರಾಜಬಿರುದು. 3ನೇ ಕಿಂಗ್‌ ಚಾರ್ಲ್ಸ್ ಹಿರಿಯ ಮಗನೂ, ವೇಲ್ಸ್‌ ರಾಜಕುಮಾರಿ ಡಯಾನಾಳ ಪುತ್ರನೂ ಆದ, ವೇಲ್ಸ್‌ ನ ರಾಜಕುಮಾರ ವಿಲಿಯಮ್ಸ್‌ ವಿಚಿತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ! ಆದರೆ, "ನಾನು ಎರಡೂ ತಂಡವನ್ನು ಬೆಂಬಲಿಸುತ್ತೇನೆ. ನಾನು ಸೋಲಲು ಸಾಧ್ಯವಿಲ್ಲ" ಎಂದಿದ್ದಾರೆ!
ಇಂಗ್ಲೆಂಡಿಗೂ 'ಟು ಬಿ ಆರ್ ನಾಟ್‌ ಟು ಬಿ' ಎಂಬ ಪ್ರಸಿದ್ಧ ಮಾತಿಗೂ ಅವಿನಾಭಾವ ಸಂಬಂಧ. ಈ ಸಂದಿಗ್ಧ ಸ್ಥಿತಿ ಈಗ ರಾಜಕುಮಾರ ವಿಲಿಯಮ್ಸ್‌ಗೆ ಎದುರಾಗಿದೆ. ಯಾಕೆ ಗೊತ್ತಾ? ʼವೇಲ್ಸ್‌ನ ರಾಜಕುಮಾರʼ ಎಂಬುದು ಬ್ರಿಟಿಷ್‌ ಸಿಂಹಾಸನದ ಉತ್ತರಾಧಿಕಾರಿಗೆ ಪ್ರತ್ಯೇಕವಾಗಿ ಮೀಸಲಾದ ರಾಜಬಿರುದು. 3ನೇ ಕಿಂಗ್‌ ಚಾರ್ಲ್ಸ್ ಹಿರಿಯ ಮಗನೂ, ವೇಲ್ಸ್‌ ರಾಜಕುಮಾರಿ ಡಯಾನಾಳ ಪುತ್ರನೂ ಆದ, ವೇಲ್ಸ್‌ ನ ರಾಜಕುಮಾರ ವಿಲಿಯಮ್ಸ್‌ ಈಗ ವಿಚಿತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ!
 
ಇದೇ ಇಂಗ್ಲೆಂಡಿನಲ್ಲಿ ಫುಟ್‌ಬಾಲ್‌ ಅಸೋಸಿಯೇಷನ್‌ ಇದೆ. ಇದು ಫುಟ್‌ಬಾಲ್‌ಗಾಗಿ ಇರುವ ಸಂಸ್ಥೆ. ಈ ಅಸೋಸಿಯೇಷನ್‌, ಜೆರ್ಸಿ, ಗೆರ್ನಸಿ ಮತ್ತು ದ್ವೀಪಗಳು ಬ್ರಿಟಿಷ್‌ ಅಧಿಪತ್ಯದ ಅವಲಂಬಿಗಳು. ಫುಟ್‌ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷರು ವೇಲ್ಸ್‌ ರಾಜಕುಮಾರ ವಿಲಿಯಮ್ಸ್‌. ಇಲ್ಲೊಂದು ಪೇಚಿನ ಸಂಗತಿ ಇದೆ. ಬ್ರಿಟನ್‌ ಸಾಮ್ರಾಜ್ಯ (ವೇಲ್ಸ್‌ ಕೂಡ ಸೇರುತ್ತದೆ)ದ ʼಇಂಗ್ಲಿಷ್‌ ಫುಟ್‌ಬಾಲ್‌ʼ ಅನ್ನು ಇದೇ ಪ್ರಭುತ್ವ ನಡೆಸುತ್ತದೆ, ಆದರೆ ವೇಲ್ಸ್‌ನ ಫುಟ್‌ಬಾಲ್‌ ಅಸೋಸಿಯೇಷನ್‌ ವೇಲ್ಸ್‌ ಆಡಳಿತವನ್ನು ನೋಡಿಕೊಳ್ಳುತ್ತದೆ.
 
ಗೊಂದಲವಾಯ್ತಲ್ಲ. ಪ್ರಶ್ನೆ ಇರುವುದು ಈಗ ರಾಜಕುಮಾರ, ವೇಲ್ಸ್‌ ತಂಡವನ್ನು ಬೆಂಬಲಿಸುತ್ತಾರಾ? ಇಂಗ್ಲೆಂಡ್‌ ತಂಡವನ್ನು ಹುರಿದುಂಬಿಸುತ್ತಾರಾ? ಎಂಬುದು. ಇದಕ್ಕೆ ಉತ್ತರ ನೀಡಿದ್ದಾರೆ. "ಇಲ್ಲ, ಪರ್ವಾಗಿಲ್ಲ. ನಾನು ಎರಡೂ ತಂಡವನ್ನು ಬೆಂಬಲಿಸುತ್ತೇನೆ ಎಂದು ಎಲ್ಲರಿಗೂ ಹೇಳುತ್ತಿದ್ದೇನೆ. ನಾನು ಸೋಲಲು ಸಾಧ್ಯವಿಲ್ಲ'' ಎಂದಿದ್ದಾರೆ! "ನಾನು ಚಿಕ್ಕವನಿದ್ದಾಗಿನಿಂದಲೂ ಇಂಗ್ಲೆಂಡ್ ತಂಡವನ್ನು ಬೆಂಬಲಿಸುತ್ತಾ ಬಂದಿದ್ದೇನೆ. ಆದರೆ ನಾನು ವೇಲ್ಸ್‌ನ ರಗ್ಬಿಯನ್ನು (ಇನ್ನೊಂದು ಮಾದರಿಯ ಚೆಂಡಾಟ) ಬೆಂಬಲಿಸುತ್ತೇನೆ. ಇದು ಬೆಂಬಲ ವ್ಯಕ್ತಪಡಿಸುವ ನನ್ನ ರೀತಿ. ರಗ್ಬಿ ಆಟದಲ್ಲಿ ನಾನು ಇಂಗ್ಲೆಂಡ್‌ ಬದಲಿಗೆ ವೇಲ್ಸ್ ತಂಡವನ್ನು ಬೆಂಬಲಿಸುತ್ತೇನೆ. ಹಾಗಾಗಿ ನಾನು ಈ ರೀತಿಯ ಸಹಭಾಗಿತ್ವದ ವಿಷಯದಲ್ಲಿ ಅತ್ಯಂತ ಎಚ್ಚರದಿಂದ ನಡೆದುಕೊಳ್ಳಲು ಸಾಧ್ಯವೆಂದುಕೊಳ್ಳುತ್ತೇನೆ" ಎಂದು ತಮ್ಮ ನಿಲುವು ಸ್ಪಷ್ಟಪಡಿಸುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ.
Image
ವೇಲ್ಸ್‌ ರಾಜಕುಮಾರ ವಿಲಿಯಂ
 
ಈ ಸಂದಿಗ್ಧ, ಬ್ರಿಟನ್ನಿನ ರಾಣಿಗೂ ಎದುರಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳು ಆಷಸ್‌ ಕಪ್‌ಗಾಗಿ ಹೊಡೆದಾಡುವಾಗ ಯಾರನ್ನು ಬೆಂಬಲಿಸಬೇಕೆಂಬ ಪ್ರಶ್ನೆ ರಾಣಿಯ ಮುಂದೆ ಇರುತ್ತಿತ್ತು. ಯಾಕೆಂದರೆ ಎರಡೂ ದೇಶಗಳಿಗೂ ಆಕೆಯ ರಾಣಿಯಲ್ಲವೆ!
ಯುನೈಟೆಡ್‌ ಕಿಂಗ್‌ನಲ್ಲಿ ಇಂಗ್ಲೆಂಡ್, ಸ್ಕಾಟ್ಲೆಂಡ್‌, ವೇಲ್ಸ್‌ ಮತ್ತು ಉತ್ತರ ಐರ್ಲೆಂಡ್‌ಗಳಿವೆ. ಇವು ಕ್ರೀಡಾಕೂಟಗಳಲ್ಲಿ ಬೇರೆ ಬೇರೆ ದೇಶಗಳಾಗಿ ಪಾಲ್ಗೊಳ್ಳುತ್ತವೆ (ಉದಾಹರಣೆಗೆ: ಫುಟ್‌ಬಾಲ್‌, ಕ್ರಿಕೆಟ್‌). ಆದರೆ ಒಲಿಂಪಿಕ್ಸ್‌ ಬಂದಾಗ, ಎಲ್ಲರೂ ಕೂಡಿ ಒಂದು ತಂಡವಾಗಿ ಪಾಲ್ಗೊಳ್ಳುತ್ತಾರೆ.
ರೇನ್‌ ಗಿಗ್ಸ್‌ (ವೇಲ್ಸ್‌ನವರು) ಎಂದಿಗೂ ಫುಟ್‌ಬಾಲ್‌ ವಿಶ್ವಕಪ್‌ನಲ್ಲಿ ನಾಯಕತ್ವ ವಹಿಸಿರಲಿಲ್ಲ. ಆದರೆ ಯುನೈಟೆಡ್‌ ಕಿಂಗ್‌ಡಮ್‌ ಒಲಿಂಪಿಕ್‌ ಫುಟ್‌ಬಾಲ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು (ಅವರಿಗೆ ತಂದ ಗೌರವ).
 
ವಿಚಿತ್ರವೆಂದರೆ ಫುಟ್‌ಬಾಲ್‌ ಅಸೋಸಿಯೇಷನ್‌ ಯುನೈಟೆಡ್‌ ಕಿಂಗ್‌ಡಮ್‌ನ ಒಲಿಂಪಿಕ್ ಫುಟ್‌ಬಾಲ್‌ ತಂಡವನ್ನು ನೋಡಿಕೊಳ್ಳುತ್ತದೆ!! ಈ ಗೊಂದಲವನ್ನು ಇನ್ನಷ್ಟು ಹೆಚ್ಚಿಸುವುದಾದರೆ, ಉತ್ತರ ಐರ್ಲೆಂಡಿನ ಆಟಗಾರರು ಐರ್ಲೆಂಡಿನ ತಂಡದ ಭಾಗವಾಗಿ ಒಲಿಂಪಿಕ್ಸ್‌ನಲ್ಲಿ ಆಡಬಹುದು.
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180