ವದಂತಿ ನಂಬಬೇಡಿ, ಎಲ್ಲವನ್ನೂ ಕೊನೆಗೊಳಿಸಿ: 'ಡಿವೋರ್ಸ್‌' ಬಗ್ಗೆ ಚಾಹಲ್ ದಂಪತಿ

  • ʻಗಾಳಿ ಸುದ್ದಿಗಳನ್ನು ನಂಬಬೇಡಿʼ ಎಂದ ಯಜುವೇಂದ್ರ ಚಾಹಲ್‌
  • ಎಲ್ಲವನ್ನೂ ಇಲ್ಲಿಗೆ ಕೊನೆಗೊಳಿಸಿ; ಧನಶ್ರೀ ವರ್ಮಾ

'ತಮ್ಮ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೇವಲ ವದಂತಿಗಳು ಮಾತ್ರ' ಎಂದು ಟೀಮ್ ಇಂಡಿಯಾದ ಅನುಭವಿ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌, ಪತ್ನಿ ಧನಶ್ರೀ ವರ್ಮಾ ಸ್ಪಷ್ಟಪಡಿಸಿದ್ದಾರೆ.

ʻಗಾಳಿ ಸುದ್ದಿಗಳನ್ನು ನಂಬಬೇಡಿʼ ಎಂದು ಅನುಭವಿ ಸ್ಪಿನ್‌ ಬೌಲರ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಜಿಂಬಾಬ್ವೆ ಪ್ರವಾಸದಿಂದ ಸದ್ಯ ಟೀಮ್‌ ಇಂಡಿಯಾದಿಂದ ಹೊರಗುಳಿದಿರುವ ಚಾಹಲ್, ಆಗಸ್ಟ್‌ 27ರಿಂದ ಆರಂಭವಾಗಲಿರುವ ಏಷ್ಯಾಕಪ್‌ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಇಲ್ಲಿಗೆ ಕೊನೆಗೊಳಿಸಿ; ಧನಶ್ರೀ ವರ್ಮಾ

ವಿವಾದದ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ಚಾಹಲ್‌ ಪತ್ನಿ, ಯೂಟ್ಯೂಬರ್‌ ಧನಶ್ರೀ ವರ್ಮಾ, “ನಮ್ಮ ದಾಂಪತ್ಯಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಯಾವುದೇ ರೀತಿಯ ವದಂತಿಗಳನ್ನು ನಂಬಬೇಡಿ ಎಂದು ಎಲ್ಲರಲ್ಲೂ ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ದಯವಿಟ್ಟು, ಎಲ್ಲವನ್ನೂ ಇಲ್ಲಿಗೆ ಕೊನೆಗೊಳಿಸಿ. ಎಲ್ಲರ ಬಾಳಲ್ಲೂ ಪ್ರೀತಿ ಮತ್ತು ಬೆಳಕು ಮೂಡಲಿʼ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Image

ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯರಾಗಿರುವ ಯಜುವೇಂದ್ರ ಚಾಹಲ್‌  - ಧನಶ್ರೀ ದಂಪತಿ ತಾವು ಜೊತೆಯಾಗಿರುವ ಫೋಟೋ – ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ.  ಕೆಲ ದಿನಗಳ ಹಿಂದಷ್ಟೇ ಧನಶ್ರೀ ವರ್ಮಾ ಭಾರತ ತಂಡದ ಆಟಗಾರರಾದ ಶ್ರೇಯಸ್‌ ಅಯ್ಯರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಜೊತೆಗೆ ತೆಗೆಸಿಕೊಂಡ ಫೋಟೊ ಒಂದನ್ನು ಹಂಚಿಕೊಂಡಿದ್ದರು. 

ಇದರ ಬೆನ್ನಲ್ಲೇ ಧನಶ್ರೀ ವರ್ಮಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿನ ಹೆಸರಿನಲ್ಲಿ ಬದಲಾವಣೆ ಮಾಡಿ ಚಾಹಲ್‌ ಉಪನಾಮವನ್ನು ಕೈಬಿಟ್ಟಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಚಾಹಲ್‌ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ 'ಹೊಸ ಬದುಕಿನ ಆರಂಭ' ಎಂಬ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಇವರಿಬ್ಬರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ರೀತಿಯಲ್ಲಿ ವ್ಯಾಪಕವಾಗಿ ಸುದ್ದಿಗಳು ಹರಡಿದ್ದವು.

Image
ನಿಮಗೆ ಏನು ಅನ್ನಿಸ್ತು?
0 ವೋಟ್