ಐಸಿಸಿ ‘ವರ್ಷದ ಏಕದಿನ ತಂಡ’ ಪ್ರಕಟ | ಪುರುಷರ ತಂಡದಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

2022ರ ಸಾಲಿನ ಪುರುಷರ ಮತ್ತು ಮಹಿಳೆಯರ ‘ವರ್ಷದ ಏಕದಿನ ತಂಡ’ವನ್ನು ಮಂಗಳವಾರ ಐಸಿಸಿ ಪ್ರಕಟಿಸಿದೆ.

ಪುರುಷರ ತಂಡದಲ್ಲಿ ಭಾರತದ ಇಬ್ಬರು ಆಟಗಾರರು ಮತ್ತು ಮಹಿಳಾ ತಂಡದಲ್ಲಿ ಮೂವರು ಆಟಗಾತಿಯರು ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ಬಾಬರ್‌ ಅಝಂ ನಾಯಕನಾಗಿರುವ ಐಸಿಸಿ ಏಕದಿನ ತಂಡದಲ್ಲಿ, ಶ್ರೇಯಸ್‌ ಅಯ್ಯರ್‌ ಮತ್ತು ಮುಹಮ್ಮದ್‌ ಸಿರಾಜ್‌ ಟೀಮ್‌ ಇಂಡಿಯಾದಿಂದ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರೆ.

ಆಸ್ಟ್ರೇಲಿಯ, ನ್ಯೂಜಿಲೆಂಡ್‌ ಹಾಗೂ ವೆಸ್ಟ್‌ಇಂಡೀಸ್ ತಂಡದಿಂದ ತಲಾ ಇಬ್ಬರು, ಪಾಕಿಸ್ತಾನ, ಝಿಂಬಾಬ್ವೆ, ಬಾಂಗ್ಲಾದೇಶದಿಂದ ತಲಾ ಒಬ್ಬರು ಐಸಿಸಿ 2022ರ ಸಾಲಿನ ಪುರುಷರ ‘ವರ್ಷದ ಏಕದಿನ ತಂಡ'ದಲ್ಲಿ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ಐಸಿಸಿ 2022ರ ಸಾಲಿನ ಏಕದಿನ ತಂಡಕ್ಕೆ ಭಾರತದ ಹರ್ಮನ್‌ ಪ್ರೀತ್‌ ಕೌರ್‌ ಅವರನ್ನು ನಾಯಕಿಯನ್ನಾಗಿ ನೇಮಿಸಲಾಗಿದೆ. ಕೌರ್‌ ಜೊತೆಗೆ ಸ್ಮೃತಿ ಮಂಧಾನ ಮತ್ತು ರೇಣುಕಾ ಸಿಂಗ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.  

ಶ್ರೇಯಸ್‌ ಅಯ್ಯರ್‌

ಟೀಮ್‌ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ನಂಬಿಕೆಯ ಬ್ಯಾಟರ್‌ ಆಗಿ ಮೂಡಿಬಂದಿರುವ ಶ್ರೇಯಸ್ ಅಯ್ಯರ್, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. 2022ರಲ್ಲಿ ಒಟ್ಟು 17 ಏಕದಿನ ಪಂದ್ಯಗಳನ್ನಾಡಿದ್ದ ಅಯ್ಯರ್‌, 55.69ರ ಸರಾಸರಿಯಲ್ಲಿ 724 ರನ್ ಗಳಿಸಿದ್ದರು. ಒಂದು ಶತಕ ಮತ್ತು ಆರು ಅರ್ಧಶತಕಗಳು ಅಯ್ಯರ್ ಇನ್ನಿಂಗ್ಸ್‌ ಒಳಗೊಂಡಿತ್ತು.

ಮುಹಮ್ಮದ್ ಸಿರಾಜ್

ಟೀಮ್‌ ಇಂಡಿಯಾದ ಏಕದಿನ ತಂಡದ ಪ್ರಮುಖ ಸದಸ್ಯನಾಗಿರುವ ಸಿರಾಜ್‌, ಇತ್ತೀಚಿನ ದಿನಗಳಲ್ಲಿ ಅಮೋಘ ಲಯದಲ್ಲಿದ್ದಾರೆ. 2022ರಲ್ಲಿ 15 ಏಕದಿನ ಪಂದ್ಯಗಳನ್ನು ಆಡಿದ್ದ ಸಿರಾಜ್‌, 24 ವಿಕೆಟ್ ಪಡೆದಿದ್ದರು. 29 ರನ್‌ ನೀಡಿ 3 ವಿಕೆಟ್‌ ಪಡೆದಿರುವುದು ಕಳೆದ ವರ್ಷದ ಅತ್ಯುತ್ತಮ ಸಾಧನೆಯಾಗಿದೆ.

ಈ ಸುದ್ದಿ ಓದಿದ್ದೀರಾ?: ಬ್ರಿಜ್‌ಭೂಷಣ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಮೇರಿಕೋಮ್ ನೇತೃತ್ವದಲ್ಲಿ ತನಿಖೆ

ಐಸಿಸಿ 2022ರ ಸಾಲಿನ ಪುರುಷರ ವರ್ಷದ ಏಕದಿನ ತಂಡ

 • ಬಾಬರ್ ಅಝಮ್‌, ನಾಯಕ- ಪಾಕಿಸ್ತಾನ
 • ಟ್ರಾವಿಸ್ ಹೆಡ್- ಆಸ್ಟ್ರೇಲಿಯ
 • ಶಾಯ್ ಹೋಪ್- ವೆಸ್ಟ್ ಇಂಡೀಸ್
 • ಶ್ರೇಯಸ್ ಅಯ್ಯರ್- ಭಾರತ
 • ಟಾಮ್ ಲ್ಯಾಥಮ್ (ವಿಕೆಟ್‌ ಕೀಪರ್)- ನ್ಯೂಜಿಲೆಂಡ್
 • ಸಿಕಂದರ್ ರಜಾ- ಝಿಂಬಾಬ್ವೆ
 • ಮೆಹ್ದಿ ಹಸನ್ ಮಿರಾಜ್- ಬಾಂಗ್ಲಾದೇಶ
 • ಅಲ್ಜಾರಿ ಜೋಸೆಫ್- ವೆಸ್ಟ್ ಇಂಡೀಸ್
 • ಮುಹಮ್ಮದ್ ಸಿರಾಜ್- ಭಾರತ
 • ಟ್ರೆಂಟ್ ಬೌಲ್ಟ್- ನ್ಯೂಜಿಲೆಂಡ್
 • ಆಡಮ್ ಝಂಪಾ– ಆಸ್ಟ್ರೇಲಿಯ

ಐಸಿಸಿ 2022ರ ಸಾಲಿನ ಮಹಿಳೆಯರ ‘ವರ್ಷದ ಏಕದಿನ ತಂಡ’

 • ಅಲಿಸ್ಸಾ ಹೀಲಿ (ವಿಕೆಟ್‌ ಕೀಪರ್) ಆಸ್ಟ್ರೇಲಿಯ
 • ಸ್ಮೃತಿ ಮಂಧಾನ (ಭಾರತ)
 • ಲಾರಾ ವೊಲ್ವಾರ್ಡ್ಟ್ (ದಕ್ಷಿಣ ಆಫ್ರಿಕಾ)
 • ನ್ಯಾಟ್ ಸ್ಕೈವರ್ (ಇಂಗ್ಲೆಂಡ್)
 • ಬೆತ್ ಮೂನಿ (ಆಸ್ಟ್ರೇಲಿಯ)
 • ಹರ್ಮನ್‌ಪ್ರೀತ್ ಕೌರ್ (ನಾಯಕಿ) (ಭಾರತ)
 • ಅಮೆಲಿಯಾ ಕೆರ್ (ನ್ಯೂಜಿಲೆಂಡ್‌)
 • ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್)
 • ಅಯಾಬೊಂಗಾ ಖಾಕಾ (ದಕ್ಷಿಣ ಆಫ್ರಿಕಾ)
 • ರೇಣುಕಾ ಸಿಂಗ್ (ಭಾರತ)
 • ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ)

ಸೋಮವಾರ ಐಸಿಸಿ ಪ್ರಕಟಿಸಿದ್ದ ಪುರುಷರ ‘ವರ್ಷದ ಟಿ20 ತಂಡ’ದಲ್ಲಿ ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸ್ಥಾನ ಪಡೆದಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app