ಕತಾರ್‌ ಫಿಫಾ ವಿಶ್ವಕಪ್‌ | ಆಟಗಾರರ ನಾಟಕಕ್ಕೆ ಬ್ರೇಕ್‌ ಹಾಕಲಿದೆ 'ಅಲ್ ರಿಹ್ಲಾʼ ಚೆಂಡು! ಏನಿದರ ವಿಶೇಷತೆ ಗೊತ್ತಾ?

  • ಕತಾರ್‌ ವಿಶ್ವಕಪ್‌ನಲ್ಲಿ ʼಅಲ್ ರಿಹ್ಲಾʼ ಚೆಂಡು ಬಳಕೆ
  • ಮೊದಲ ಬಾರಿ ಟಚ್ ಸೆನ್ಸಾರ್‌ ತಂತ್ರಜ್ಞಾನ ಅಳವಡಿಕೆ

ಕತಾರ್ ವಿಶ್ವಕಪ್ ಫುಟ್‌ಬಾಲ್ ಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ರೀಡಾಕೂಟ ಕಣ್ತುಂಬಿಕೊಳ್ಳಲು ಅಭಿಮಾನಿ ಬಳಗ ಕಾತರದಿಂದಲೇ ಕಾದು ಕುಳಿತಿದೆ.

ಈ ಬಾರಿಯ ಫಿಫಾ ಪುಟ್ಬಾಲ್ ಪಂದ್ಯಾವಳಿ ಹತ್ತು ಹಲವು ಹೊಸತನಗಳಿಗೆ ಸಾಕ್ಷಿಯಾಗುತ್ತಿದೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ಫಿಫಾ ಚೆಂಡು.

Eedina App

ಫಿಫಾ ಆಯೋಜಿಸುವ ವಿಶ್ವಕಪ್ ಟೂರ್ನಿಗಳಿಗೆ ಚೆಂಡು ಸಿದ್ಧಪಡಿಸಿಕೊಡುವ ಅಡಿಡಾಸ್ ಕಂಪನಿ, ಈ ಬಾರಿ ಕತಾರ್ ವಿಶ್ವಕಪ್ ಸಲುವಾಗಿಯೇ ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿದ ಚೆಂಡನ್ನು ಸಿದ್ಧಪಡಿಸಿದೆ. ಇದು ಈವರೆಗಿನ ಎಲ್ಲ ವಿಶ್ವಕಪ್‌ಗಳಲ್ಲಿ ಬಳಸಿದ ಚೆಂಡುಗಳಿಗಿಂತಲೂ ಭಿನ್ನ ಮತ್ತು ಅತಿ ವೇಗವಾಗಿ ಚಲಿಸುವ ಚೆಂಡು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

Adidas football

ಈ ಚೆಂಡಿಗೆ ಅಡಿಡಾಸ್ ಕಂಪನಿ ʼಅಲ್ ರಿಹ್ಲಾʼ ಎಂದು ನಾಮಕರಣ ಮಾಡಿದೆ. ಅರೆಬಿಕ್ ಭಾಷೆಯಲ್ಲಿ ಹೀಗೆಂದರೆ ʼಪ್ರಯಾಣʼ ಎಂದರ್ಥ. ಈ ಬಾರಿ ಪರಿಸರ ಸಂರಕ್ಷಣೆ ವಿಚಾರಕ್ಕೆ ಒತ್ತು ನೀಡಿರುವ ಅಡಿಡಾಸ್ ಕಂಪನಿ, ಜಲಾಧಾರಿತ ಶಾಯಿ ಮತ್ತು ಅಂಟನ್ನು ಬಳಸಿ ʼಅಲ್ ರಿಹ್ಲಾʼ ಚೆಂಡನ್ನು ತಯಾರಿಸಿದೆ. ಚೆಂಡಿನಲ್ಲಿ ಮೂಡಿ ಬಂದಿರುವ ಬಣ್ಣಗಳು ಕತಾರ್‌ನ ಕಲೆ, ಸಂಸ್ಕೃತಿ, ಹಾಗೂ ರಾಷ್ಟ್ರಧ್ವಜವನ್ನು ಪ್ರತಿಬಿಂಬಿಸುತ್ತಿವೆ.

AV Eye Hospital ad

ಈ ಎಲ್ಲ ವಿಚಾರಗಳಿಗಿಂತ ರಿಹ್ಲಾ ಚೆಂಡು ಗಮನ ಸೆಳೆದಿರುವುದು ತಾನು ಆಳವಡಿಸಿಕೊಂಡಿರುವ ತಂತ್ರಜ್ಞಾನದ ಸಲುವಾಗಿ. ರಿಹ್ಲಾ ಚೆಂಡಿನ ಒಳ ಮೇಲ್ಮೈನಲ್ಲಿ ಸೆನ್ಸಾರ್ ಅಳವಡಿಸುವ ಮೂಲಕ ಆಟದಲ್ಲಿ ಮತ್ತಷ್ಟು ನಿಖರತೆ ಕಂಡುಕೊಳ್ಳಲು ಅಡಿಡಾಸ್ ಕಂಪನಿ ಆಟಕ್ಕೆ ಹೊಸ ತಂತ್ರಜ್ಞಾನ ಪರಿಚಯಿಸಿದೆ.

foot ball

ಈ ತಂತ್ರಜ್ಞಾನ ಬಳಕೆಯಿಂದ ಆಟಗಾರರು ಅನಾವಶ್ಯಕವಾಗಿ ಮಾಡುವ ಮನವಿಗಳು, ಆಫ್ ಸೈಡ್ ಮನವಿಗಳಿಗೆ ಬ್ರೇಕ್ ಬೀಳಲಿವೆ.

ಅದು ಹೇಗೆ ಅಂತಿರಾ?

ಚೆಂಡಿನೊಳಗಿನ ಟಚ್ ಸೆನ್ಸಾರ್ ಆರ್ಟಿಫಿಷಲ್ ಇಂಟಲಿಜೆನ್ಸಿ ಸಹಾಯದಲ್ಲಿ ಕಾರ್ಯ ನಿರ್ವಹಿಸುತ್ತದೆ. ಪಂದ್ಯದ ಆರಂಭದಿಂದಲೇ ಆಟಗಾರನ ಸಂಪರ್ಕಕ್ಕೆ ಬರುವ ಚೆಂಡು, ಪಂದ್ಯ ಮುಗಿಯುವವರೆಗೆ ತಾನು ಸಂಪರ್ಕಕ್ಕೆ ಬಂದ ಆಟಗಾರರೆಲ್ಲರ ಮಾಹಿತಿ ಕಲೆ ಹಾಕಿಕೊಂಡಿರುತ್ತದೆ. ಇದರನ್ವಯ ಆಟದ ಸಮಯದಲ್ಲಿ ಬರುವ ಆಫ್ ಸೈಡ್, ಅನಾವಶ್ಯಕ ಮನವಿ ಪರಿಶೀಲಿಸಿ ಅದರ ಸತ್ಯಾಸತ್ಯತೆ ಪರಿಶೀಲಿಸಿ ತೀರ್ಪು ನೀಡಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಶಿಷ್ಟಾಚಾರ ಮೀರಿದ ಆಟಗಾರರ ಮೇಲೆ ಶಿಸ್ತುಕ್ರಮ ಜರುಗಿಸಲೂ ಇದು ಸಹಕಾರಿಯಾಗುತ್ತದೆ. ಹೀಗಾಗಿ ಈ ಬಾರಿ ಆಟ  ಹೆಚ್ಚು ನಿಖರತೆಯಿಂದ ಕೂಡಿರುವ ಸಾಧ್ಯತೆಯಿದೆ.

VR CEMAR

ಜೊತೆಗೆ ಪ್ರತಿ ಕ್ರೀಡಾಂಗಣದಲ್ಲೂ 12 ವಿಆರ್ ಟ್ರ್ಯಾಕಿಂಗ್ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ. 29 ವಿವಿಧ ಕೋನಗಳಿಂದ ಈ ಕ್ಯಾಮರಾ ಆಟಗಾರರ ಮಾಹಿತಿಯನ್ನು ಕಲೆ ಹಾಕುತ್ತದೆ. ಈ ಕ್ಯಾಮರಾ ಚೆಂಡಿನಲ್ಲಿರುವ ಸೆನ್ಸಾರ್ ಜೊತೆ ಸಂಪರ್ಕ ಹೊಂದಿದ್ದು, ಅಲ್ಲಿಂದಲೂ ಆಟಗಾರರ ಮಾಹಿತಿಯನ್ನು ವಿಆರ್‌ಗೆ (ವಿಡಿಯೋ ರೆಕಾರ್ಡಿಂಗ್) ದಾಖಲಿಸಲಿದೆ. ಈ ನಿಖರ ಮಾಹಿತಿ ಪಡೆದುಕೊಳ್ಳುವ ಮ್ಯಾಚ್ ರೆಫ್ರಿಗಳು, ಮನವಿಗಳನ್ನು ಪರಿಶೀಲಿಸಿ ತೀರ್ಪು ನೀಡಲಿದ್ದಾರೆ.

Pierluigi Collina football referee

ಈ ಹೊಸ ತಂತ್ರಜ್ಞಾನ ಬಳಕೆ ವಿಶ್ವಕಪ್‌ ಪಂದ್ಯಾವಳಿಗಳ ಬಗ್ಗೆ ಜನರಿಗೆ ಹೆಚ್ಚಿನ ವಿಶ್ವಾಸ ಮೂಡಿಸಲಿದೆ ಎನ್ನುವುದು ಫಿಫಾ ತೀರ್ಪುಗಾರರ ಸಂಘದ ಅಧ್ಯಕ್ಷ ಪಿಯರ್ಲುಗಿ ಕೋಲಿನಾ ಅವರ ಅನಿಸಿಕೆ. ಈ ಬಗ್ಗೆ ಸ್ಕೈ ಸ್ಫೋರ್ಟ್ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕೌಂಟಿ, ಪಂದ್ಯಾವಳಿಗಳಲ್ಲಿ ಪ್ರಾಯೋಗಿಕವಾಗಿ ಬಳಕೆಯಾಗಿ ಯಶ ಕಂಡಿರುವ ಈ ತಂತ್ರಜ್ಞಾನ ವಿಶ್ವ ಕ್ರೀಡಾಕೂಟದಲ್ಲಿ ಬಳಕೆಯಾಗುವುದು ನಿಜಕ್ಕೂ ಪ್ರಶಂಸನೀಯ ಎಂದವರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಕತಾರ್‌ ಫಿಫಾ ವಿಶ್ವಕಪ್‌ | ಕಾಲ್ಚೆಂಡಾಟದ ವಿಶ್ವ ಚಾಂಪಿಯನ್ನರಿಗೆ ಸಿಗುವ ನಗದು ಮೊತ್ತ ಕೇಳಿದರೆ ದಂಗಾಗುವಿರಿ!

ಇದು ಆಟದ ಗುಣಮಟ್ಟ ಹಾಗೂ ಕ್ರೀಡೆಗೆ ತಂತ್ರಜ್ಞಾನದ ಸಹಕಾರ ಎಷ್ಟು ಅವಶ್ಯಕ ಎನ್ನುವುದನ್ನು ತಿಳಿಸಿಕೊಡುವ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸತನ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದವರು ಹೇಳಿಕೊಂಡಿದ್ದಾರೆ.

fifa bal

ಒಟ್ಟಿನಲ್ಲಿ ಬಹಳ ಕುತೂಹಲ ಕೆರಳಿಸಿರುವ ʼಅಲ್ ರಿಹ್ಲಾʼ ಮೊದಲ ಪಂದ್ಯದಲ್ಲಿ ಬಳಕೆಯಾದ ಬಳಿಕ ತನ್ನ ಬಗೆಗೆ ಹುಟ್ಟಿಕೊಂಡಿರುವ ಎಲ್ಲ ಕುತೂಹಲಕಾರಿ ವಿಚಾರಗಳ ಬಗ್ಗೆ ಸ್ಪಷ್ಟ ಉತ್ತರ ಕೊಡಲಿದೆ. ಇದರ ಜೊತೆಗೆ ವಿಶ್ವಕಪ್‌ನ 92 ವರ್ಷಗಳ ಇತಿಹಾಸದಲ್ಲಿ ವಿಶ್ವಾದ್ಯಂತ ಸಂಕಷ್ಟದಲ್ಲಿರುವ ನೆರವಿಗೆ ನಿಧಿ ಸಂಗ್ರಹಿಸಲು ಫಿಫಾ ಮುಂದಾಗಿದೆ. ಇದಕ್ಕಾಗಿ ʼಅಲ್ ರಿಹ್ಲಾʼ ಚೆಂಡು ಮಾರಾಟದಿಂದ ಬರುವ ಆದಾಯದ ಒಂದು ಭಾಗವನ್ನು ಬಳಕೆ ಮಾಡಲಾಗುತ್ತದೆ.

ನಿಮಗೆ ಏನು ಅನ್ನಿಸ್ತು?
6 ವೋಟ್
eedina app