
- ಅಡಿಲೇಡ್ನಲ್ಲಿ ದ್ವಿತೀಯ ಸೆಮಿಫೈನಲ್
- ಗ್ರೂಪ್-2ರಲ್ಲಿ ಭಾರತ ಅಗ್ರಸ್ಥಾನಿ
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಬಾಬರ್ ಬಳಗ, ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತ್ತು. ಮತ್ತೊಂದೆಡೆ ಗುರುವಾರ ಅಡಿಲೇಡ್ನಲ್ಲಿ ನಡೆಯುವ 2ನೇ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ-ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಈ ಬಾರಿಯ ಟಿ20 ವಿಶ್ವಕಪ್ಗೆ ನೇರ ಅರ್ಹತೆ ಪಡೆದಿದ್ದ ರೋಹಿತ್ ಶರ್ಮಾ ಬಳಗ, ಪ್ರಧಾನ ಹಂತದಲ್ಲಿ ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆರ್ದಲ್ಯಾಂಡ್, ಜಿಂಬಾಬ್ವೆ ತಂಡಗಳ ಜೊತೆ ಸೂಪರ್ 12ರ ಗ್ರೂಪ್ 2ರಲ್ಲಿ ಸ್ಥಾನ ಪಡೆದಿತ್ತು.
ಅಕ್ಟೋಬರ್ 23ರಂದು ಮೆಲ್ಬೋರ್ನ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸುವ ಮೂಲಕ ಭಾರತ, ಟಿ20 ವಿಶ್ವಕಪ್ನಲ್ಲಿ ಶುಭಾರಂಭ ಮಾಡಿತ್ತು. ರೋಹಿತ್ ಬಳಗದ ಸೆಮಿಫೈನಲ್ ವರೆಗಿನ ಪಂದ್ಯದ ಫಲಿತಾಂಶಗಳನ್ನು ನೋಡುವುದಾದರೆ,
ಮೊದಲ ಪಂದ್ಯ
ಪಾಕಿಸ್ತಾನ 159/8 (20 ಓವರ್)
ಭಾರತ 160/6 (20 ಓವರ್)
ಫಲಿತಾಂಶ: ಭಾರತಕ್ಕೆ 4 ವಿಕೆಟ್ ಅಂತರದ ಜಯ
2ನೇ ಪಂದ್ಯ
ಭಾರತ 179/2
ನೆದರ್ಲ್ಯಾಂಡ್ಸ್ 123/9
ಫಲಿತಾಂಶ: ಭಾರತಕ್ಕೆ 56 ರನ್ಗಳ ಜಯ
3ನೇ ಪಂದ್ಯ
ಭಾರತ 133/9
ದಕ್ಷಿಣ ಆಫ್ರಿಕಾ 137/5 (19/4 ಓವರ್)
ಫಲಿತಾಂಶ: ದಕ್ಷಿಣ ಆಫ್ರಿಕಾಗೆ 5 ವಿಕೆಟ್ ಜಯ
4ನೇ ಪಂದ್ಯ
ಭಾರತ 184/6
ಬಾಂಗ್ಲಾದೇಶ 145/6
ಫಲಿತಾಂಶ: ಭಾರತಕ್ಕೆ 5 ರನ್ಗಳ ಜಯ (D/L)
5ನೇ ಪಂದ್ಯ
ಭಾರತ 186/5
ಜಿಂಬಾಬ್ವೆ 115 (17. 2 ಓವರ್)
ಫಲಿತಾಂಶ: ಭಾರತಕ್ಕೆ 71 ರನ್ಗಳ ಜಯ
ಸೂಪರ್ 12ರ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿ 8 ಅಂಕಗಳೊಂದಿಗೆ ಟೀಮ್ ಇಂಡಿಯಾ ಗ್ರೂಪ್- 2ರಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ.