
- ಮೂರು ಪಂದ್ಯಗಳ ಟಿ20 ಸರಣಿ
- ಭಾನುವಾರ ಎರಡನೇ ಪಂದ್ಯ
ಶುಕ್ರವಾರ ವೆಲ್ಲಿಂಗ್ಟನ್ನಲ್ಲಿ ನಡೆಯಬೇಕಾಗಿದ್ದ ಟೀಮ್ ಇಂಡಿಯಾ- ನ್ಯೂಜಿಲೆಂಡ್ ನಡುವಿನ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಮಧ್ಯಾಹ್ನ 11.30ಕ್ಕೆ ಟಾಸ್ ಮತ್ತು ಪಂದ್ಯ 12ಕ್ಕೆ ಆರಂಭವಾಗಬೇಕಿತ್ತು. ಆದರೆ ವೆಲ್ಲಿಂಗ್ಟನ್ನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ, ಮಧ್ಯಾಹ್ನ 1.27ಕ್ಕೆ ಪಂದ್ಯ ರದ್ದುಗೊಳಿಸಿರುವುದಾಗಿ ಅಧಿಕೃತವಾಗಿ ಘೋಷಿಸಲಾಯಿತು.
ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ, ಭಾನುವಾರ (ನವೆಂಬರ್ 20) ಮೌಂಟ್ ಮೌಂಗನುಯಿಯಲ್ಲಿ ನಡೆಯಲಿದೆ.
ಟಿ20ಯಲ್ಲಿ ಟೀಮ್ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರಂಭಿಕ ಕೆ ಎಲ್ ರಾಹುಲ್ ಸೇರಿದಂತೆ ಹಿರಿಯ ಆಟಗಾರರಿಗೆ ಕಿವೀಸ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಏಕದಿನ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ.
It's official. The first T20I match in Wellington has been abandoned without a ball being bowled 🌧
— ESPNcricinfo (@ESPNcricinfo) November 18, 2022
#NZvIND
ಈ ಸುದ್ದಿಯನ್ನು ಓದಿದ್ದೀರಾ ? : ಏಕದಿನ ಸರಣಿಯ ಆರಂಭದಲ್ಲೇ ಎಡವಿದ ಟಿ20 ಚಾಂಪಿಯನ್ನರು; ಆಸ್ಟ್ರೇಲಿಯಾಗೆ 6 ವಿಕೆಟ್ ಜಯ
ಆಸ್ಟ್ರೇಲಿಯದಲ್ಲಿ ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಫೈಟ್ನಲ್ಲಿ ಮುಗ್ಗರಿಸಿದ್ದವು. ಅದರಲ್ಲೂ ಭಾರತ, ಇಂಗ್ಲೆಂಡ್ ಕೈಯಲ್ಲಿ 10 ವಿಕೆಟ್ಗಳ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಇದಾದ ಬಳಿಕ ತಂಡದಲ್ಲಿ ಮಹತ್ವದ ಬದಲಾವಣೆಯಾಗುವ ಮುನ್ಸೂಚನೆಯನ್ನು ಬಿಸಿಸಿಐ ನೀಡಿದೆ.
ಏಕದಿನ ಮತ್ತು ಟಿ20 ಮಾದರಿಗಳಿಗೆ ಮುಂದಿನ ವರ್ಷದಿಂದ ಪ್ರತ್ಯೇಕ ನಾಯಕರನ್ನು ನೇಮಿಸಲು ಬಿಸಿಸಿಐ ಯೋಚಿಸುತ್ತಿದೆ. ಏಕದಿನ, ಟೆಸ್ಟ್ ಮಾದರಿಗೆ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿಯಲಿದ್ದಾರೆ. ಆದರೆ ಟಿ20 ತಂಡದ ನಾಯಕ ಸ್ಥಾನವನ್ನು ಹಾರ್ದಿಕ್ ಪಾಂಡ್ಯಗೆ ನೀಡುವುದು ಬಹುತೇಕ ಖಚಿತಗೊಂಡಿದೆ. ಇದರ ಜೊತೆಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಟಿ20 ತಂಡದ ನಿರ್ದೇಶಕ ಸ್ಥಾನಕ್ಕೆ ನೇಮಿಸುವ ಕುರಿತು ಮಾತುಗಳು ಕೇಳಿಬರುತ್ತಿವೆ.
It's official. The first T20I match in Wellington has been abandoned without a ball being bowled 🌧
— ESPNcricinfo (@ESPNcricinfo) November 18, 2022
#NZvIND