ಏಕದಿನ ಸರಣಿ | ನ್ಯೂಜಿಲೆಂಡ್‌ ವಿರುದ್ಧ ಟೀಮ್‌ ಇಂಡಿಯಾ ಕ್ಲೀನ್‌ ಸ್ವೀಪ್‌ ಸಾಧನೆ  

  • ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ ಭಾರತ
  • ನ್ಯೂಜಿಲೆಂಡ್‌ ವಿರುದ್ಧ 90 ರನ್‌ಗಳ ಅಂತರದ ಭರ್ಜರಿ ಜಯ

ತವರಿನಲ್ಲಿ ಟೀಮ್‌ ಇಂಡಿಯಾ ಅಜೇಯ ಪ್ರಯಾಣ ಮುಂದುವರಿದಿದೆ. ಶ್ರೀಲಂಕಾ ಬಳಿಕ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲೂ ಭಾರತ, ಕ್ಲೀನ್‌ ಸ್ವೀಪ್ ಸಾಧನೆ ಮಾಡಿದೆ.

ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ನಡೆದ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ರೋಹಿತ್‌ ಬಳಗ, ಪ್ರವಾಸಿ ಕಿವೀಸ್‌ ಪಡೆಯನ್ನು 90 ರನ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ. ಆ ಮೂಲಕ ಸರಣಿಯನ್ನು 3-0 ಅಂತರದಲ್ಲಿ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಟೀಮ್‌ ಇಂಡಿಯಾ, ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದೆ. ಈ ಹಾದಿಯಲ್ಲಿ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳನ್ನು ಭಾರತ ಹಿಂದಿಕ್ಕಿದೆ.

ಈ ಸುದ್ದಿ ಓದಿದ್ದೀರಾ?: ಮಹಿಳಾ ಐಪಿಎಲ್‌ | ನಾಳೆ ತಂಡಗಳ ಹರಾಜು, ಹಿಂದೆ ಸರಿದ ಮೂರು ಐಪಿಎಲ್‌ ಫ್ರಾಂಚೈಸಿಗಳು

ಹೋಳ್ಕರ್‌ ಮೈದಾನದಲ್ಲಿ ಟಾಸ್‌ ಸೋತರೂ ಬ್ಯಾಟಿಂಗ್‌ ಅವಕಾಶ ಪಡೆದಿದ್ದ ಟೀಮ್‌ ಇಂಡಿಯಾ, ಆರಂಭಿಕರಾದ ನಾಯಕ ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಗಳಿಸಿದ ಶತಕಗಳ ನೆರವಿನಿಂದ 9 ವಿಕೆಟ್‌ ನಷ್ಟದಲ್ಲಿ 385 ರನ್‌ಗಳಿಸಿತ್ತು. ಕಠಿಣ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌, 41.2 ಓವರ್‌ಗಳಲ್ಲಿ 295 ರನ್‌ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಆರಂಭಿಕ ಡೆವೊನ್‌ ಕಾನ್ವೆ 138 ರನ್‌ಗಳಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರಾದರೂ ಉಳಿದ ಯಾವುದೇ ಬ್ಯಾಟರ್‌ಗಳು ಸಾಥ್‌ ನೀಡಲಿಲ್ಲ.

ಭಾರತದ ಪರ ಶಾರ್ದೂಲ್‌ ಠಾಕೂರ್‌ ಮತ್ತು ಕುಲ್ದೀಪ್‌ ಯಾದವ್‌ ತಲಾ 3 ವಿಕೆಟ್‌ ಪಡೆದರೆ, ಯುಜ್ವೇಂದ್ರ ಚಹಾಲ್‌ 2 ವಿಕೆಟ್‌ ಪಡೆದರು.  

ನಿಮಗೆ ಏನು ಅನ್ನಿಸ್ತು?
0 ವೋಟ್
eedina app