39 ವರ್ಷಗಳ ಬಳಿಕ ವಿಂಡೀಸ್‌ ನೆಲದಲ್ಲಿ ಇತಿಹಾಸ ಬರೆದ ಭಾರತ

Cricket
  • ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆದ ಅಂತಿಮ ಪಂದ್ಯ
  • 3-0 ಅಂತರದಲ್ಲಿ ಭಾರತದ ಕ್ಲೀನ್‌ಸ್ವೀಪ್‌ ಸಾಧನೆ

ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್‌ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದೆ. ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆದ ಸರಣಿಯ ಅಂತಿಮ ಮತ್ತು ಔಪಚಾರಿಕ ಪಂದ್ಯದಲ್ಲಿ ಶಿಖರ್‌ ಧವನ್‌ ಬಳಗ, ಅತಿಥೇಯರನ್ನು 119 ರನ್‌ ಗಳ ಅಂತರದಲ್ಲಿ ಭರ್ಜರಿಯಾಗಿಯೇ ಮಣಿಸಿದೆ.

39 ವರ್ಷಗಳ ಬಳಿಕ ಕ್ಲೀನ್‌ ಸ್ವೀಪ್‌ ದಾಖಲೆ !

1983ರಿಂದಲೂ ವೆಸ್ಟ್‌ ಇಂಡೀಸ್ ನೆಲದಲ್ಲಿ ದ್ವಿಪಕ್ಷೀಯ ಸರಣಿ ಆಡಲು ಆರಂಭಿಸಿರುವ ಭಾರತ, ಇದೇ ಮೊದಲ ಬಾರಿಗೆ ಅಂದರೆ 39 ವರ್ಷಗಳ ಕ್ಲೀನ್‌ಸ್ವೀಪ್‌ ಸಾಧನೆ ಮಾಡಿದೆ. ಮೂರನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಡಕ್ವರ್ಥ್‌ ಲೂಯಿಸ್‌ ನಿಯಮವನ್ನು ಅಳವಡಿಸಲಾಗಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ, ನಿಗಧಿತ 36 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 225 ರನ್‌ಗಳಿಸಿತ್ತು. ಭಾರತದ ಪರ ಇನ್ನಿಂಗ್ಸ್‌ ಆರಂಭಿಸಿದ್ದ ಶುಭಮನ್ ಗಿಲ್‌ ಕೇವಲ ಎರಡು ರನ್‌ ಅಂತರದಲ್ಲಿ ವೃತ್ತಿ ಜೀವನದ ಚೊಚ್ಚಲ ಏಕದಿನ ಶತಕ ತಪ್ಪಿಸಿಕೊಂಡರು. ನಾಯಕ ಶಿಖರ್‌ ಧವನ್‌ 58 ರನ್‌ ಮತ್ತು ಶ್ರೇಯಸ್‌ ಅಯ್ಯರ್‌ 44 ರನ್‌ ಗಳಿಸಿ ನಿರ್ಗಮಿಸಿದರು.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ಭಾರತಕ್ಕೆ ಪದಕದ ಭರವಸೆ ಮೂಡಿಸಿರುವ ಕ್ರೀಡಾಪಟುಗಳ ಪಟ್ಟಿ

ಸವಾಲಿನ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌, 26 ಓವರ್‌ಗಳಲ್ಲಿ ಕೇವಲ 137 ರನ್‌ ಗಳಿಸುವಷ್ಟರಲ್ಲಿಯೇ ಸರ್ವಪತನ ಕಂಡಿತ್ತು. ವಿಂಡೀಸ್‌ ಪರ ನಾಲ್ವರು ದಾಂಡಿಗರು ಖಾತೆ ತೆರೆಯುವ ಮುನ್ನವೇ ವಿಕೆಟ್‌ ಒಪ್ಪಿಸಿದ್ದರು. ಬ್ರ್ಯಾಂಡನ್‌ ಕಿಂಗ್‌ ಮತ್ತು ನಾಯಕ ನಿಕೋಲಸ್‌ ಪೂರನ್‌ ತಲಾ 42 ರನ್‌ ಗಳಿಸಿದ್ದು ತಂಡದ ಪಾಲಿಗೆ ಅತ್ಯಧಿಕ ಸ್ಕೋರ್‌ ಎನಿಸಿಕೊಂಡಿತು. ಮಳೆ ಸುರಿದ ಕಾರಣ ಬ್ಯಾಟಿಂಗ್‌ ಕಠಿಣವಾಗಿತ್ತು. ನಾಲ್ಕು ಓವರ್‌ಗಳ ನಿಖರ ದಾಳಿ ನಡೆಸಿದ ಸ್ಪಿನ್ನರ್‌ ಯಜುವೇಂದ್ರ ಚಹಾಲ್‌ 4 ವಿಕೆಟ್‌ ಪಡೆದರೆ, ಮುಹಮ್ಮದ್‌ ಸಿರಾಜ್‌ ಮತ್ತು ಶಾರ್ದೂಲ್‌ ಠಾಕೂರ್‌ ತಲಾ ಎರಡು ವಿಕೆಟ್‌ ಪಡೆದು ಮಿಂಚಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್