ಮೋಟೊ ಜಿಪಿ 2023 | ಸೆಪ್ಟೆಂಬರ್‌ನಲ್ಲಿ ನೋಯ್ಡಾದ ಬುದ್ಧ ಸರ್ಕ್ಯೂಟ್‌ನಲ್ಲಿ 'ಗ್ರ್ಯಾಂಡ್ ಪ್ರಿಕ್ಸ್ ಆಫ್ ಭಾರತ್'

  • 2023 ಸೆಪ್ಟೆಂಬರ್‌ 24ರಂದು ಮೋಟೊ ಜಿಪಿ ಪ್ರಧಾನ ಸುತ್ತಿನ ಸ್ಪರ್ಧೆ 
  • ಬುದ್ಧ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ 'ಗ್ರ್ಯಾಂಡ್ ಪ್ರಿಕ್ಸ್ ಆಫ್ ಭಾರತ್'

ಪ್ರತಿಷ್ಠಿತ ಮೋಟೊ ಜಿಪಿ ಚಾಂಪಿಯನ್‌ಷಿಪ್‌ ಮುಂದಿನ ವರ್ಷ ಭಾರತದಲ್ಲಿ ನಡೆಯುವುದು ಖಚಿತವಾಗಿದೆ. ಮೋಟೊ ಜಿಪಿ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಶುಕ್ರವಾರ, 2023ರ ಕ್ಯಾಲೆಂಡರ್‌ ಪ್ರಕಟಿಸಿದ್ದು, ಒಟ್ಟು 21 ದೇಶಗಳಲ್ಲಿ ರೇಸ್‌ ನಡೆಯಲಿದೆ. ಮೊದಲ ಸುತ್ತು ಪೋರ್ಚುಗಲ್‌ನಲ್ಲಿ ನಡೆಯಲಿದ್ದು, 'ಗ್ರ್ಯಾಂಡ್ ಪ್ರಿಕ್ಸ್ ಆಫ್ ಭಾರತ್' ಹೆಸರಿನಲ್ಲಿ ಭಾರತದಲ್ಲಿ 14ನೇ ಸುತ್ತಿನ ರೇಸ್‌ ನಡೆಯಲಿದೆ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಬುದ್ಧ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ 2023, ಸೆಪ್ಟೆಂಬರ್‌ 22 ಮತ್ತು 23ರಂದು ಅರ್ಹತಾ ಸುತ್ತಿನ ಸ್ಪರ್ಧೆಗಳು ನಡೆಯಲಿದ್ದು, ಸೆಪ್ಟೆಂಬರ್‌ 24ರಂದು ಪ್ರಧಾನ ಸುತ್ತಿನ ಸ್ಪರ್ಧೆ ನಡೆಯಲಿದೆ. ಭಾರತದಲ್ಲಿ ಮೋಟಿ ಜಿಪಿ ನಡೆಯಲಿದೆ ಎಂಬುದರ ಕುರಿತಾದ ವಿಶೇಷ ವಿಡಿಯೋವನ್ನು ಮೊಟೊ ಜಿಪಿ ಹಂಚಿಕೊಂಡಿದೆ.

Eedina App

 

AV Eye Hospital ad

ಬುದ್ಧ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ 2011ರಿಂದ 2013ರವರೆಗೆ ಸತತ ಮೂರು ವರ್ಷಗಳ ಕಾಲ ಫಾರ್ಮುಲಾ-1 ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಆಯೋಜಿಸಲಾಗಿತ್ತು. ಆ ಬಳಿಕ ಕಾರು ತಯಾರಿಕಾ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ತೆರಿಗೆ ವಿಚಾರದಲ್ಲಿ ತಕರಾರು ಉಂಟಾದ ಹಿನ್ನಲೆಯಲ್ಲಿ ಫಾರ್ಮುಲಾ-1 ಕ್ಯಾಲೆಂಡರ್‌ನಿಂದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಕೈಬಿಡಲಾಗಿತ್ತು.

ಮೋಟೊ ಜಿಪಿ ಚಾಂಪಿಯನ್‌ಷಿಪ್‌ ಆಯೋಜಕ ಸಂಸ್ಥೆ ಡೋರ್ನಾ ಸ್ಪೋರ್ಟ್ಸ್‌ನ ಮುಖ್ಯಸ್ಥ ಕಾರ್ಲೋಸ್ ಎಜ್ಪೆಲೆಟಾ, ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ಕುರಿತ ತಿಳಿವಳಿಕೆ ಪತ್ರಕ್ಕೆ ಡೋರ್ನಾ ಸ್ಪೋರ್ಟ್ಸ್‌ ಮತ್ತು ಭಾರತದಲ್ಲಿ ಮೋಟೊ ಜಿಪಿ ಪ್ರವರ್ತಕರಾದ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಹಿ ಹಾಕಿದೆ.

ಈ ಸುದ್ದಿ ಓದಿದ್ದೀರಾ ? : 36ನೇ ರಾಷ್ಟ್ರೀಯ ಕ್ರೀಡಾಕೂಟ | ಮೊದಲ ದಿನವೇ ಕೂಟ ದಾಖಲೆ ಬರೆದ ಅಮೊಜ್‌ ಜೇಕಬ್‌, ಮುನಿತಾ ಪ್ರಜಾಪತಿ

ಜಗತ್ತಿನಾದ್ಯಂತ ಇರುವ ಪ್ರಮುಖ ಬೈಕ್‌ ತಯಾರಿಕಾ ಕಂಪನಿಗಳು, ಅತ್ಯಂತ ನುರಿತ ಸವಾರರ ಮೂಲಕ ತಮ್ಮ ಪ್ರತಿಷ್ಠೆಯನ್ನು ಟ್ರ್ಯಾಕ್‌ನಲ್ಲಿ ನಿರೂಪಿಸುವ ಈ ರೋಮಾಂಚನಕಾರಿ ಬೈಕ್‌ಗಳ ಸ್ಪರ್ಧೆ ಭಾರತಕ್ಕೆ ಆಗಮಿಸುತ್ತಿರುವುದು ಅತ್ಯಂತ ಖುಷಿಯ ವಿಚಾರವೇ ಸರಿ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app