ಭಾರತ-ವೆಸ್ಟ್‌ ಇಂಡೀಸ್‌ ನಡುವೆ ಫ್ಲೋರಿಡಾದಲ್ಲಿ ನಿರ್ಣಾಯಕ ಟಿ20 ಪಂದ್ಯ

  • ಫ್ಲೋರಿಡಾದ ಫೋರ್ಟ್ ಲಾಡೆರ್‌ಹಿಲ್‌ನಲ್ಲಿ ನಡೆಯಲಿರುವ ಪಂದ್ಯ
  • ಪಂದ್ಯ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳಲು ಭಾರತ ತಯಾರಿ

ಭಾರತ-ವೆಸ್ಟ್‌ ಇಂಡೀಸ್‌ ನಡುವಿನ ಟಿ20 ಸರಣಿಯ ನಾಲ್ಕನೇ ಮತ್ತು ನಿರ್ಣಾಯಕ ಪಂದ್ಯ ಶನಿವಾರ ನಡೆಯಲಿದೆ. ಫ್ಲೋರಿಡಾದ ಫೋರ್ಟ್ ಲಾಡೆರ್‌ಹಿಲ್‌ನಲ್ಲಿ ಆಯೋಜನೆಯಾಗಿರುವ ಪಂದ್ಯವನ್ನು ಗೆದ್ದರೆ ಭಾರತ, ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಆದರೆ ವೆಸ್ಟ್‌ ಇಂಡೀಸ್‌ ಭಾರತವನ್ನು ಮಣಿಸಿದರೆ, ಸರಣಿ ಸಮಬಲಗೊಳ್ಳಲಿದ್ದು, ಇದೇ ಮೈದಾನದಲ್ಲಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯ ಫೈನಲ್‌ ಮಹತ್ವ ಪಡೆದುಕೊಳ್ಳಲಿದೆ.

ಆಗಸ್ಟ್‌ 27ರಿಂದ ಯುಎಇನಲ್ಲಿ ಟಿ20 ಏಪ್ಯಾ ಕಪ್‌ ಆರಂಭವಾಗಲಿದ್ದು, ಆ ಬಳಿಕ ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ. ಎರಡು ಪ್ರಮುಖ ಟೂರ್ನಿಗಳಿಗೆ ಭಾರತ ತಂಡದ ಆಯ್ಕೆ ವಿಚಾರದಲ್ಲಿ  ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ಯುವ ಆಟಗಾರರ ಪ್ರದರ್ಶನದ ಮೇಲೆ ಆಯ್ಕೆಗಾರರು ನಿಗಾ ಇಟ್ಟಿದ್ದಾರೆ.

ಶ್ರೇಯಸ್‌ ಅಯ್ಯರ್‌, ಕಳೆದ ಮೂರು ಪಂದ್ಯಗಳಲ್ಲಿ ಕ್ರಮವಾಗಿ  0, 10 ಹಾಗೂ 24 ರನ್‌ಗಳಿಸಿದ್ದಾರೆ. ಅಯ್ಯರ್‌ ವೈಫಲ್ಯ ಮುಂದುವರಿದರೆ ಅವರ ಸ್ಥಾನಕ್ಕೆ  ದೀಪಕ್‌ ಹೂಡಾ ಅವರನ್ನು ಆಯ್ಕೆಗಾರರು ಪರಿಗಣಿಸುವ ಸಾಧ್ಯತೆಯಿದೆ.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ಭಾರತ ಮಹಿಳಾ ಹಾಕಿ ತಂಡದ ಚಿನ್ನದ ಕನಸು ಭಗ್ನ

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಉಭಯ ತಂಡಗಳು 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 15 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದು, ವಿಂಡೀಸ್ 7 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಫಲಿತಾಂಶ ಕಾಣದೆ ಮುಕ್ತಾಯ ಕಂಡಿತ್ತು. ಮೂರನೇ  ಪಂದ್ಯದ ವೇಳೆ ಬೆನ್ನುನೋವಿನಿಂದಾಗಿ ಮೈದಾನದಿಂದ ನಿರ್ಗಮಿಸಿದ್ದ  ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಶನಿವಾರದ ಪಂದ್ಯಕ್ಕೆ ಲಭ್ಯರಾಗುವುದು ಇನ್ನೂ ಖಚಿತವಾಗಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್