ಏಷ್ಯಾ ಕಪ್‌ 2023 | 15 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ತೆರಳಲಿದೆಯೆ ಟೀಮ್‌ ಇಂಡಿಯಾ?

  • 2006ರಲ್ಲಿ ಕೊನೆಯದಾಗಿ ಟೀಮ್‌ ಇಂಡಿಯಾ ಪಾಕ್ ಪ್ರವಾಸ‌
  • 2023 ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ಪಾಕಿಸ್ತಾನದಲ್ಲಿ ನಿಗದಿ

ಭಾರತ ಸರ್ಕಾರದ ಅನುಮತಿ ದೊರೆತರೆ, 15 ವರ್ಷದ ಬಳಿಕ ಕ್ರಿಕೆಟ್‌ ಕೂಟದಲ್ಲಿ ಭಾಗವಹಿಸಲು ಟೀಮ್‌ ಇಂಡಿಯಾ, ಪಾಕಿಸ್ತಾನಕ್ಕೆ ಪ್ರಯಾಣ ಬೆಳಸಲಿದೆ.

2023 ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದೆ. ಜುಲೈ- ಆಗಸ್ಟ್‌ ತಿಂಗಳಿನಲ್ಲಿ ಏಕದಿನ ಮಾದರಿಯ ಟೂರ್ನಿ ಆರಂಭವಾಗುವ ಸಾಧ್ಯತೆಯಿದೆ. ಆ ಬಳಿಕ ಏಕದಿನ ವಿಶ್ವಕಪ್‌ ಟೂರ್ನಿ ಭಾರತದಲ್ಲಿ ನಡೆಯಲಿದೆ.

Eedina App

ಪಾಕಿಸ್ತಾನದಲ್ಲಿನ ಆಂತರಿಕ ಬೆಳವಣಿಗೆ ಮತ್ತು ರಾಜಕೀಯ ಬಿಕ್ಕಟ್ಟಿನ ಕಾರಣಗಳಿಂದಾಗಿ, ಕಳೆದ 15 ವರ್ಷಗಳಿಂದ ಭಾರತ ತಂಡ, ನೆರೆ ರಾಷ್ಟ್ರದ ನೆಲದಲ್ಲಿ ಕ್ರಿಕೆಟ್‌ ಆಡಿಲ್ಲ. ಆದರೆ ಇದೀಗ ಏಷ್ಯಾಕಪ್‌ಗೆ ತಂಡವನ್ನು ಕಳುಹಿಸುವುದರ ಕುರಿತು ಬಿಸಿಸಿಐ ಆಸಕ್ತಿ ವಹಿಸಿದೆ.  

ಅಕ್ಟೋಬರ್‌ 18ರಂದು ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ ಮುಂಬೈನಲಿ ನಡೆಯಲಿದೆ. ಇದಕ್ಕೂ ಮುನ್ನುಡಿಯಾಗಿ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಬಿಸಿಸಿಐ ಕಳುಹಿಸಿರುವ ಸೂಚನಾ ಪತ್ರದಲ್ಲಿ ಟೀಮ್‌ ಇಂಡಿಯಾ ಮುಂದಿನ ವರ್ಷ ಭಾಗವಹಿಸಲಿರುವ ಐಸಿಸಿ ಕೂಟಗಳ ವೇಳಾಪಟ್ಟಿಯನ್ನು ಲಗತ್ತಿಸಿದೆ. ಇದರಲ್ಲಿ ಪಾಕಿಸ್ತಾನದಲ್ಲಿರುವ ನಡೆಯಲಿರುವ ಏಷ್ಯಾಕಪ್‌ ಟೂರ್ನಿಯನ್ನೂ ಬಿಸಿಸಿಐ ಉಲ್ಲೇಖಿಸಿದೆ.

AV Eye Hospital ad

ಈ ಸುದ್ದಿ ಓದಿದ್ದೀರಾ ? : ಉದ್ದೀಪನ ಮದ್ದು ಸೇವನೆ | ಒಲಿಂಪಿಕ್ಸ್‌ ಆಟಗಾರ್ತಿ ಕಮಲ್‌ಪ್ರೀತ್‌ ಕೌರ್‌ಗೆ ಮೂರು ವರ್ಷ ನಿಷೇಧ

ಆದರೆ, ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯವಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2006ರಲ್ಲಿ ಕೊನೆಯದಾಗಿ ಟೀಮ್‌ ಇಂಡಿಯಾ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಆ ಬಳಿಕ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಭಾರತ- ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದೆ.

ಯುಎಇಯಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ತಲಾ 1 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.

2021ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ, ಭಾರತ ತಂಡವನ್ನು 10 ವಿಕೆಟ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತ್ತು. ಭಾನುವಾರದಿಂದ ಆಸ್ಟ್ರೇಲಿಯದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ, ಅಕ್ಟೋಬರ್‌ 23ರಂದು ತಮ್ಮ ಮೊದಲ ಕದನದಲ್ಲಿ ರೋಹಿತ್‌ ಬಳಗ ಮತ್ತೊಮ್ಮೆ ಬಾಬರ್‌ ಅಝಮ್‌ ಪಡೆಯ ಸವಾಲನ್ನು ಎದುರಿಸಲಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app