ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷ ನರೀಂದರ್ ಬಾತ್ರಾ ರಾಜೀನಾಮೆ ಘೋಷಣೆ

  • ನರೀಂದರ್ ಬಾತ್ರಾ ವಿರುದ್ಧ ಕೇಂದ್ರದ ತನಿಖೆಗೆ ಆದೇಶ
  • ₹35 ಲಕ್ಷ ದುರುಪಯೋಗದ ಆರೋಪ ವಿಚಾರಣೆ

ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಹೆಚ್) ಅಧ್ಯಕ್ಷ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯ ನರೀಂದರ್ ಬಾತ್ರಾ ಅವರು ಸೋಮವಾರ ತಮ್ಮ  ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ, ಬಾತ್ರಾ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಮತ್ತೆ ಆ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು  ಹೇಳಿದ್ದಾರೆ.

ಹಾಕಿ ಇಂಡಿಯಾದ ₹35 ಲಕ್ಷ ದುರುಪಯೋಗದ ಆರೋಪದ ಮೇಲೆ ಬಾತ್ರಾ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಾಥಮಿಕ ವಿಚಾರಣೆ ಪ್ರಾರಂಭಿಸಿದೆ.

"ವಿಚಾರಣೆ ಪ್ರಾಥಮಿಕ ಅಪರಾಧದ ಮೊದಲ ಹೆಜ್ಜೆಯಾಗಿದೆ. ನಾನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್​ (ಐಒಎ) ಅಧ್ಯಕ್ಷನಾಗಿ ಮುಂದಿನ ಅವಧಿಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಈ ಜವಾಬ್ದಾರಿಯನ್ನು ಹೊಸ ಆಲೋಚನೆಗಳೊಂದಿಗೆ ಬರುವವರಿಗೆ ಬಿಟ್ಟುಕೊಡುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಭಾರತೀಯ ಕ್ರೀಡೆಗಳು ಹೆಚ್ಚು ಎತ್ತರಕ್ಕೆ ಏರಲಿವೆ" ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್