ಹಿಜಾಬ್ ವಿರೋಧಿ ಪ್ರತಿಭಟನೆಗೆ ಬೆಂಬಲ: ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್ ಫುಟ್‌ಬಾಲ್ ತಂಡ

Iran football team
  • ಇಂಗ್ಲೆಂಡ್ ವಿರುದ್ಧ 6-2 ಗೋಲುಗಳಿಂದ ಸೋತ ಇರಾನ್‌
  • ಇರಾನಿನಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಸಿರುವ ಮಹ್ಸಾ ಅಮಿನಿ ಸಾವು

ಹಿಜಾಬ್ ವಿರೋಧಿ ಪ್ರತಿಭಟನೆಗೆ ಬೆಂಬಲ ಸೂಚಿಸುವ ಸಲುವಾಗಿ ಇರಾನ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡವು ವಿಶ್ವಕಪ್ ಪಂದ್ಯದ ಮೊದಲು ತಮ್ಮ ದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದೆ.

ಸೋಮವಾರ ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ವಿಶ್ವಕಪ್ ಪಂದ್ಯವನ್ನಾಡುವ ಮೊದಲು ಈ ನಿರ್ಧಾರ ಮಾಡಿದೆ. ಖಲೀಫಾ ಅಂತಾರಾಷ್ಟ್ರೀಯ ಪುಟ್‌ಬಾಲ್ ಕ್ರೀಡಾಂಗಣದಲ್ಲಿ ಗೀತೆ ಮೊಳಗುತ್ತಿದ್ದಂತೆ ಆರಂಭಿಕ 11 ಆಟಗಾರರು ಮೌನವಾಗಿಯೇ ನಿಂತಿದ್ದರು.

ಸೋಮವಾರದ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 6-2 ಗೋಲುಗಳಿಂದ ಇರಾನ್‌ ಸೋಲನುಭವಿಸಿದೆ. 

ಹಿಜಾಬ್‌ ವಿರೋಧಿ ಆಂದೋಲನ

ಇರಾನ್‌ನಲ್ಲಿ ಮಹ್ಸಾ ಅಮಿನಿ ಎಂಬ ಯುವತಿಯ ಸಾವಿನ ಬಳಿಕ ಹಿಜಾಬ್‌ ವಿರೋಧಿ ಆಂದೋಲನವಾಗಿ ಮಾರ್ಪಟ್ಟಿರುವ ಈ ಪ್ರತಿಭಟನೆಯು ಇನ್ನೂ ನಿಂತಿಲ್ಲ. ಶತಮಾನಗಳಿಂದ ಇಸ್ಲಾಮಿಕ್‌ ಕಾನೂನು ಕಟ್ಟಳೆಗಳಿಂದ ನೊಂದಿರುವ ಇರಾನಿನ ಮಹಿಳೆಯರು, ಈ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದಾರೆ. ಕೇವಲ ಮಹಿಳೆಯರೇ ಅಲ್ಲ, ಬದಲಾಗಿ ಪುರುಷರೂ ಹೋರಾಟವನ್ನು ಬೆಂಬಲಿಸಿ ಬೀದಿಗಿಳಿಯುತ್ತಿದ್ದಾರೆ. ಇದರ ಪರಿಣಾಮವಾಗಿ ಸಾವಿರಾರು ಜನ ಬೀದಿಗಿಳಿದು ಹಿಜಾಬ್‌ಗಳನ್ನು ಸಾರ್ವಜನಿಕವಾಗಿ ಸುಡುವ ಮತ್ತು ತಮ್ಮ ಕೂದಲನ್ನು ಕತ್ತರಿಸಿಕೊಳ್ಳುವಂತಹ ಪ್ರತಿಭಟನೆ ಮಾಡುತ್ತ ಸರ್ಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಇರಾನ್‌ ಹಿಜಾಬ್‌ ಆಂದೋಲನ | ಸಾರ್ವಜನಿಕವಾಗಿ ಹಿಜಾಬ್‌ ತೆಗೆದ ನಟಿಯ ಬಂಧನ

ಅಮಿನಿ ಮೃತಪಟ್ಟ ಮೂರು ವಾರಗಳ ನಂತರ ಮಹ್ಸಾ ಅಮಿನಿ ಸಾವಿನ ಕುರಿತಾಗಿ ಇರಾನ್‌ ಸರ್ಕಾರ ಮಾತನಾಡಿದ್ದು, ಮಹ್ಸಾ ಅಮಿನಿ ಅನಾರೋಗ್ಯ ಕಾರಣದಿಂದಾಗಿ ಸಾವನ್ನಪ್ಪಿದ್ದಾಳೆ ಎಂದು ಅಕ್ಟೋಬರ್‌ 7ರಂದು ತಿಳಿಸಿತ್ತು. ಮಹ್ಸಾ ಅಮಿನಿ ಅವರ ಸಾವು ಅನಾರೋಗ್ಯದಿಂದ ಉಂಟಾಗಿದೆ. ಅವರ ತಲೆ ದೇಹದ ಭಾಗಗಳಿಗೆ ಯಾವುದೇ ಹೊಡೆತ ಬಿದ್ದಿರುವ ಗುರುತುಗಳಿಲ್ಲ ಎಂದು ಸರ್ಕಾರ ಹೇಳಿತ್ತು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app