ಫಿಫಾ ವಿಶ್ವಕಪ್‌ನಿಂದ ಅಮೆರಿಕವನ್ನು ಹೊರಹಾಕುವಂತೆ ಇರಾನ್ ಒತ್ತಾಯ

Iran urges America to be kicked out of FIFA World Cupʼ
  • 1979ರ ಇಸ್ಲಾಮಿಕ್ ಕ್ರಾಂತಿಯ ಮೊದಲು ಇರಾನ್‌ನ ರಾಷ್ಟ್ರೀಯ ಧ್ವಜವಾಗಿದ್ದ ಸಿಂಹ ಮತ್ತು ಸೂರ್ಯ
  • ಇರಾನ್‌ನ ಹಳೇ ರಾಷ್ಟ್ರೀಯ ಧ್ವಜವನ್ನು ಅಭಿಮಾನಿಗಳು ಮೈದಾನಕ್ಕೆ ತರದಂತೆ ತಡೆದ ಕತಾರ್‌ ಅಧಿಕಾರಿಗಳು  

ಇರಾನ್ ದೇಶದ ಧ್ವಜದಲ್ಲಿ ಬದಲಾವಣೆ ಮಾಡಿದ ಚಿತ್ರವನ್ನು ಶೇರ್‌ ಮಾಡಿದ ಹಿನ್ನೆಲೆಯಲ್ಲಿ, ಫಿಫಾ ವಿಶ್ವಕಪ್‌ನಿಂದ ಅಮೆರಿಕವನ್ನು ಹೊರಹಾಕುವಂತೆ ಇರಾನ್‌ನ ರಾಜ್ಯ ಸಂಯೋಜಿತ ಮಾಧ್ಯಮ ಫಿಫಾಗೆ ಒತ್ತಾಯಿಸಿದೆ.

ಅಮೆರಿಕದ ರಾಷ್ಟ್ರೀಯ ಫುಟ್‌ಬಾಲ್‌ ತಂಡದ ಅಧಿಕೃತ ಟ್ವಿಟ್ಟರ್ ಖಾತೆ, ವಿಶ್ವಕಪ್ ಗ್ರೂಪ್ ಬಿ ಯಲ್ಲಿರುವ ತಂಡಗಳ ಅಂಕಪಟ್ಟಿಯಲ್ಲಿ ಮಾಡಿದ ಪೋಸ್ಟ್‌ನಲ್ಲಿ ಇರಾನ್‌ನ ಮೂರು ಬಣ್ಣಗಳ ಧ್ವಜದಿಂದ ಇಸ್ಲಾಮಿಕ್ ರಿಪಬ್ಲಿಕ್‌ನ 'ಅಲ್ಲಾ' ಚಿಹ್ನೆ ಮತ್ತು 'ತಕ್ಬೀರ್‌'ಗಳನ್ನು ತೆಗೆದುಹಾಕಿದೆ. ಇದು ಇರಾನ್‌ ನಾಗರಿಕರನ್ನು ಕೆರಳಿಸಿದೆ.

Eedina App

ಇರಾನ್‌ನ ಕಟು ಇಸ್ಲಾಂಮಿಕ್ ನಾಯಕತ್ವದ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ.

ಯುನೈಟೆಡ್ ಸ್ಟೇಟ್ಸ್ ಪುರುಷರ ರಾಷ್ಟ್ರೀಯ ಫುಟ್‌ಬಾಲ್ ತಂಡದ (ಯುಎಸ್‌ಎಮ್‌ಎನ್‌ಟಿ) ಖಾತೆಯು ಇರಾನಿನ ಧ್ವಜವನ್ನು  ಹಸಿರು, ಬಿಳಿ ಮತ್ತು ಕೆಂಪು ಬಣ್ಣಗಳು ಮಾತ್ರವೇ ಇರುವ ಸರಳ ಚಿತ್ರವನ್ನು ಹಂಚಿಕೊಂಡಿದೆ. ಆದರೆ ಇದರಲ್ಲಿ ಧ್ವಜದಲ್ಲಿ ಬಹುಮುಖ್ಯ ಭಾಗ ಎನಿಸಿದ ಇಸ್ಲಾಮಿಕ್ ರಿಪಬ್ಲಿಕ್ ಚಿಹ್ನೆ ಇಲ್ಲ. ಇರಾನ್‌ನ ಸರ್ಕಾರಿ ಮಾಧ್ಯಮ ತಸ್ನಿಮ್ ನ್ಯೂಸ್ ಏಜೆನ್ಸಿ, "ಅಮೆರಿಕವು ಫಿಫಾ ನಿಯಮಗಳನ್ನು ಉಲ್ಲಂಘಿಸಿದೆ" ಎಂದು ಆರೋಪಿಸಿದೆ.

AV Eye Hospital ad

ಆದರೆ ಈ ಆರೋಪಗಳನ್ನು ತಳ್ಳಿಹಾಕಿರುವ ಯುಎಸ್‌ಎಮ್‌ಎನ್‌ಟಿ, “ಮೂಲ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಇರಾನ್‌ನಲ್ಲಿ ಮಹಿಳೆಯರಿಗೆ ಬೆಂಬಲ ಸೂಚಿಸುವ ಸಲುವಾಗಿ ಈ ಸೂಚಕವನ್ನು ಮಾಡಲಾಗಿದೆ. ಇದು ಒಮ್ಮೆ ಮಾಡಲಾದ ಪೋಸ್ಟ್‌ ಅಷ್ಟೇ. ಮುಂದೆ ಭವಿಷ್ಯದಲ್ಲಿ ಇದನ್ನು ಮತ್ತೆ ಸರಿಪಡಿಸಲಾಗುವುದು ಎಂದು ಹೇಳಿದೆ.

ಅದರಂತೆಯೇ ಅಮೆರಿಕ ಬಾವುಟವನ್ನು ಸರಿಪಡಿಸಿ ತಡವಾಗಿ ಪೋಸ್ಟ್‌ ಮಾಡಿದೆ. 

"ಫಿಫಾ ನಿಯಮಗಳ ಸೆಕ್ಷನ್ 13ರ ಪ್ರಕಾರ, ದೇಶದ ಘನತೆ ಅಥವಾ ಸಮಗ್ರತೆ ಉಲ್ಲಂಘಿಸುವ ಯಾವುದೇ ವ್ಯಕ್ತಿ, ಅಥವಾ ಜನರ ಗುಂಪನ್ನು ಸೂಕ್ತ ಶಿಸ್ತಿನ ಕ್ರಮದ ಭಾಗವಾಗಿ ಕನಿಷ್ಠ ಹತ್ತು ಪಂದ್ಯಗಳು ಅಥವಾ ನಿರ್ದಿಷ್ಟ ಅವಧಿಗೆ ಅಮಾನತುಗೊಳಿಸಲು ಅನುಮೋದಿಸಲಾಗುತ್ತದೆ," ಎಂದು ಮಾಧ್ಯಮ ಸಂಸ್ಥೆ ಬರೆದುಕೊಂಡಿದೆ.

ಈ ಸುದ್ದಿ ಓದಿದ್ದೀರಾ?ಫಿಫಾ ವಿಶ್ವಕಪ್‌ | ಮೊರಾಕ್ಕೋ ವಿರುದ್ಧ ಸೋತ ಬೆಲ್ಜಿಯಂ; ಕೋಪಗೊಂಡ ಅಭಿಮಾನಿಗಳಿಂದ ಬ್ರಸೆಲ್ಸ್‌ನಲ್ಲಿ ದಾಂಧಲೆ

“ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಧ್ವಜದ ವಿರೂಪಗೊಳಿಸಿದ ಚಿತ್ರವನ್ನು ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ, ಯುಎಸ್‌ ಫುಟ್‌ಬಾಲ್ ತಂಡವು ಫಿಫಾ ನಿಯಮಗಳನ್ನು ಉಲ್ಲಂಘಿಸಿದೆ. ಇದಕ್ಕಾಗಿ ಈ ತಂಡಕ್ಕೆ 10 ಪಂದ್ಯಗಳ ಅಮಾನತು ಸೂಕ್ತ ದಂಡವಾಗಿದೆ. ಅಮೆರಿಕ ತಂಡವನನ್ನು ಫುಟ್ಬಾಲ್‌ ವಿಶ್ವಕಪ್‌ನಿಂದ ಹೊರಹಾಕಬೇಕು” ಎಂದು ಒತ್ತಾಯಿಸಿದೆ.

ದೇಶದಲ್ಲಿ ವ್ಯಾಪಕ ಅಶಾಂತಿ ಮತ್ತು ಉದ್ವಿಗ್ನತೆ ಪರಿಸ್ಥಿತಿ ನಡುವೆಯೂ, ಇರಾನ್‌ ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಅಭಿಯಾನದಲ್ಲಿ ಪಾಲ್ಗೊಂಡಿದೆ. ಇಸ್ಲಾಮಿಕ್ ಗಣರಾಜ್ಯದ ಕೋರಿಕೆಯ ಮೇರೆಗೆ, 1979ರ ಇಸ್ಲಾಮಿಕ್ ಕ್ರಾಂತಿಯ ಮೊದಲು ಇರಾನ್‌ನ ರಾಷ್ಟ್ರೀಯ ಧ್ವಜವಾಗಿದ್ದ 'ಸಿಂಹ ಮತ್ತು ಸೂರ್ಯ'ನ ಚಿತ್ರವಿರುವ ಬಾವುಟವನ್ನು ಇರಾನ್‌ ಅಭಿಮಾನಿಗಳು ಮೈದಾನಕ್ಕೆ ತರುವುದನ್ನು ಕತಾರ್‌ ಅಧಿಕಾರಿಗಳು ನಿಷೇಧಿಸಿದ್ದಾರೆ. ಇರಾನ್‌ ಬಾವುಟದಲ್ಲಿರುವ ಮೂರು ಬಣ್ಣಗಳು ‘ಮಹಿಳೆ, ಜೀವನ, ಸ್ವಾತಂತ್ರ್ಯ’ ಎಂಬ ಸಂದೇಶ ಸಾರುತ್ತವೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app