ವಿರೋಧಕ್ಕೆ ಮಣಿದು ಚಾಂಪಿಯನ್‌ಷಿಪ್‌ಗೆ ವಿಧಿಸಿದ್ದ ಪ್ರವೇಶ ಶುಲ್ಕ ರದ್ದು

  • ಬೆಂಗಳೂರಿನಲ್ಲಿ ಆಯೋಜಿಸಲಾದ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌
  • ಅಥ್ಲೆಟಿಕ್ಸ್‌ ಕ್ರೀಡಾಕೂಟಕ್ಕೆ ವಿಧಿಸಿದ್ದ ಪ್ರವೇಶ ಶುಲ್ಕ ಕೈಬಿಟ್ಟ ಕೆಎಎ

ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಿಧಿಸಲಾಗಿದ್ದ ಪ್ರವೇಶ ಶುಲ್ಕವನ್ನು  ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ  (ಕೆಎಎ) ಕೊನೆಗೂ ರದ್ದುಗೊಳಿಸಿದೆ.  

ಆಗಸ್ಟ್ 26ರಿಂದ 28ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ಆಯೋಜನೆಯಾಗಿದೆ. ಈ ಕೂಟದಲ್ಲಿ ಭಾಗವಹಿಸುವ 14, 16 ಮತ್ತು 18 ವರ್ಷದೊಳಗಿನ ಜೂನಿಯರ್ ಅಥ್ಲೀಟ್‌ಗಳಿಗೆ ₹200 ಹಾಗೂ 20, 23 ವರ್ಷದೊಳಗಿನ ಹಾಗೂ ಪುರುಷರು ಮತ್ತು ಮಹಿಳಾ ವಿಭಾಗದ ಅಥ್ಲೀಟ್‌ಗಳಿಗೆ ₹600 ಪ್ರವೇಶ ಶುಲ್ಕ ವಿಧಿಸಲಾಗಿತ್ತು. ಆದರೆ ಈ ನಡೆಗೆ ತರಬೇತುದಾರರು, ಪೋಷಕರು, ಕ್ರೀಡಾಭಿಮಾನಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಜಿಲ್ಲಾ ಅಥ್ಲೆಟಿಕ್ಸ್‌ ಅಸೋಸಿಯೇಶನ್‌ಗಳ ಪದಾಧಿಕಾರಿಗಳು ಅಸಮಾಧಾನ, ಬೇಸರ ವ್ಯಕ್ತಪಡಿಸಿದ್ದರು. ಉತ್ತರ ಕರ್ನಾಟಕದ ಕೆಲವು ಘಟಕಗಳು ಕೂಟವನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದವು.

Image

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ಚಿನ್ನದ ಲಕ್ಷ್ಯ ಸಾಧಿಸಿದ ಸೇನ್‌

ಇದೀಗ ವಿರೋಧಕ್ಕೆ ಮಣಿದು ಶುಲ್ಕ ಪಡೆಯದೇ ಇರುವ ನಿರ್ಧಾರವನ್ನು ಕೆಎಎ ಗೌರವ ಕಾರ್ಯದರ್ಶಿ ಎ. ರಾಜವೇಲು ತಿಳಿಸಿದ್ದಾರೆ. ಅದಾಗಿಯೂ, ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ, ಊಟ, ಉಪಾಹಾರ ವ್ಯವಸ್ಥೆ ಮಾಡದಿರುವುದು ಕ್ರೀಡಾಪಟುಗಳಿಗೆ ಹೆಚ್ಚಿನ ಹೊರೆಯಾಗಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್