ಖೋಖೋ ಲೀಗ್‌ ಪಂದ್ಯಾವಳಿ | ಒಡಿಶಾ ತಂಡ ಸೇರಿದ ಕರ್ನಾಟಕದ ಗೌತಮ್‌

  • ಆಟಗಾರರನ್ನು 'ಎ', 'ಬಿ', 'ಸಿ' ಮತ್ತು 'ಡಿ' ಗುಂಪುಗಳಾಗಿ ವಿಂಗಡಣೆ
  • ಅಕ್ಟೋಬರ್‌ 1ರವರೆಗೂ ತಂಡಗಳು ಅಭ್ಯಾಸ ಶಿಬಿರ ನಡೆಸಲಿವೆ

ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್‌ಗೆ ತಂಡಗಳು ಸಿದ್ಧಗೊಂಡಿವೆ. ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ 28 ರಾಜ್ಯಗಳ 240 ಆಟಗಾರರ ಪೈಕಿ 143 ಆಟಗಾರರು 6 ತಂಡಗಳಲ್ಲಿ ಸೇರ್ಪಡೆಗೊಂಡಿದ್ದಾರೆ. ತಂಡಗಳಿಗೆ ಅಕ್ಟೋಬರ್‌ 14ರಿಂದ 3.248ವರೆಗೂ ಪುಣೆಯ ಬಾಳೆವಾಡಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ಆಟಗಾರರನ್ನು 'ಎ', 'ಬಿ', 'ಸಿ' ಮತ್ತು 'ಡಿ' ಗುಂಪುಗಳಾಗಿ ವಿಂಗಡಿಸಲಾಗಿದ್ದು 143 ಆಟಗಾರರ ಪೈಕಿ 77 ಅಗ್ರ ಆಟಗಾರರ ('ಎ' ಗುಂಪು) ಆಯ್ಕೆ ನಡೆಯಿತು. ಈ ಆಟಗಾರರಿಗೆ ತಲಾ ₹5 ಲಕ್ಷ ನೀಡಿ ಆಯ್ಕೆ ಮಾಡಿಕೊಳ್ಳಲಾಯಿತು. ಕರ್ನಾಟಕದ ಡಿಫೆಂಡರ್ ಗೌತಮ್ ಎಂ ಕೆ ಒಡಿಶಾ ಸರ್ಕಾರ ಒಡೆತನದ ಒಡಿಶಾ ಜಗರ್‌ನಾಟ್ಸ್‌ ತಂಡಕ್ಕೆ ಸೇರ್ಪಡೆಗೊಂಡರು.

ಅಕ್ಟೋಬರ್‌ 1ರವರೆಗೂ ತಂಡಗಳು ಅಭ್ಯಾಸ ಶಿಬಿರ ನಡೆಸಲಿವೆ. 21 ದಿನಗಳ ಟೂರ್ನಿಯಲ್ಲಿ ಒಟ್ಟು 34 ಪಂದ್ಯಗಳು ನಡೆಯಲಿವೆ. ನಾಕೌಟ್ ಪಂದ್ಯಗಳು ಪ್ಲೇ-ಆಫ್ ಮಾದರಿಯಲ್ಲಿ ನಡೆಯಲಿವೆ. ಕ್ವಾಲಿ ಫೈಯರ್, ಎಲಿಮಿನೇಟರ್ ಪಂದ್ಯಗಳು ಇರಲಿವೆ. ಲೀಗ್‌ನಲ್ಲಿ ಒಡಿಶಾ ಜೊತೆ ಚೆನ್ನೈ ಕ್ವಿಕ್ ಗನ್, ಗುಜರಾತ್ ಜೈಂಟ್ಸ್, ಮುಂಬೈ ಕಿಲಾಡೀಸ್, ರಾಜಸ್ಥಾನ ವಾರಿಯರ್ ಮತ್ತು ತೆಲುಗು ಯೋಧಾಸ್ ಕೂಡಾ ಸ್ಪರ್ಧಿಸಲಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್