ಕತಾರ್ ವಿಶ್ವಕಪ್ | ಐತಿಹಾಸಿಕ ಗೆಲುವಿನ ಸಂಭ್ರಮಕ್ಕೆ ದೇಶಕ್ಕೇ ರಜೆ ಘೋಷಿಸಿದ ಸೌದಿ ದೊರೆ!

King Salman directs that Wednesday be a holiday for all employees, students
  • ಸೌದಿ ಅರೇಬಿಯಾದಲ್ಲಿ ಮುಗಿಲು ಮುಟ್ಟಿದ ಅರ್ಜೆಂಟಿನಾ ವಿರುದ್ಧದ ಐತಿಹಾಸಿಕ ಗೆಲುವು
  • ಬುಧವಾರ ಎಲ್ಲ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ರಜೆ ನೀಡಲು ನಿರ್ದೇಶನ ನೀಡಿದ ದೊರೆ ಸಲ್ಮಾನ್

ಕತಾರ್‌ನ ಲುಸೈಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೆಸ್ಸಿ ಪಡೆಯ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿ, ಐತಿಹಾಸಿಕ ಗೆಲುವು ದಾಖಲಿಸಿರುವ ಸೌದಿ ಅರೇಬಿಯಾದ ಎಲ್ಲೆಡೆ ಈಗ ವಿಶ್ವಕಪ್ ಗೆದ್ದಷ್ಟೇ ಸಂಭ್ರಮವೋ ಸಂಭ್ರಮ.

ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ, ಸೌದಿ ದೊರೆ ಸಲ್ಮಾನ್ ಅವರು ಬುಧವಾರ(ನ.23) ಎಲ್ಲ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ನಿರ್ದೇಶನ ನೀಡಿದ್ದಾರೆ ಎಂದು 'ಸೌದಿ ಗೆಝೆಟ್ ವೆಬ್‌ಸೈಟ್' ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಸೌದಿ ತಂಡವು ಇಂದು ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ವಿರುದ್ಧ 2-1 ಅಂತರದಿಂದ ಐತಿಹಾಸಿಕ ಗೆಲುವು ದಾಖಲಿಸಿತ್ತು.

Image
King Salman orders Wednesday a public holiday in celebration of World Cup victory
ಸೌದಿ ದೊರೆ ಸಲ್ಮಾನ್

 

ಈ ಅದ್ಭುತ ವಿಜಯವನ್ನು ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ದೇಶದ ನಾಗರಿಕರು ಸಂಭ್ರಮಿಸುತ್ತಿರುವ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೆಲ್ಲ ರಾರಾಜಿಸುತ್ತಿದೆ.

ಮೊದಲ ಪಂದ್ಯದಲ್ಲೇ ಫುಟ್‌ಬಾಲ್‌ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ಸೌದಿಯು, ವಿಶ್ವಕಪ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸುವ ಮೂಲಕ ಲಿಯೋನೆಲ್ ಮೆಸ್ಸಿ ತಂಡಕ್ಕೆ ಆಘಾತ ನೀಡಿತ್ತು.

ಪಂದ್ಯ ಆರಂಭವಾಗಿ 10ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ್ದ ಅರ್ಜೆಂಟಿನಾ ನಾಯಕ ಮೆಸ್ಸಿ, ಆರಂಭದಲ್ಲೇ ಮುನ್ನಡೆ ಒದಗಿಸಿಕೊಟ್ಟಿದ್ದರು. ಆದರೆ ಆ ಬಳಿಕ 48ನೇ ನಿಮಿಷದಲ್ಲಿ ಅಲ್‌ ಸೆಹ್ರಿ ಮತ್ತು 53ನೇ ನಿಮಿಷದಲ್ಲಿ ಅಲ್‌ ದೌಸಾರಿ ಗಳಿಸಿ ಗೋಲುಗಳ ಮೂಲಕ ಸೌದಿ ಅರೇಬಿಯಾಕ್ಕೆ ಮುನ್ನಡೆ ಸಾಧಿಸಲು ನೆರವಾಗಿದ್ದರು. ಪಂದ್ಯದ ಪೂರ್ಣ ಅವಧಿ ಮುಗಿಯುತ್ತಿದ್ದಂತೆಯೇ, ಸೌದಿಯು 2-1 ಗೋಲಿನ ಅಂತರದಿಂದ ಗೆಲುವು ದಾಖಲಿಸಿತ್ತು. ಅರ್ಜೆಂಟಿನಾದ ಈ ಅನಿರೀಕ್ಷಿತ ಸೋಲು, ಮೆಸ್ಸಿ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ಆಘಾತ ನೀಡಿದೆ.

 

ನಿಮಗೆ ಏನು ಅನ್ನಿಸ್ತು?
3 ವೋಟ್
Image
av 930X180