
- ಇಂಡಿಯಾ ಮಹಾರಾಜಾಸ್ vs ವರ್ಲ್ಡ್ ಜಯಂಟ್ಸ್
- ಸೆಪ್ಟೆಂಬರ್ 16ರಂದು ಈಡನ್ ಗಾರ್ಡನ್ಸ್ನಲ್ಲಿ ವಿಶೇಷ ಪಂದ್ಯ
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ವಿಶೇಷ ಪಂದ್ಯವೊಂದನ್ನು ಆಯೋಜಿಸಲಾಗಿದೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಯು ಸೆಪ್ಟೆಂಬರ್ 17ರಿಂದ ಆರಂಭವಾಗಲಿದೆ. ಇದಕ್ಕೂ ಪೂರ್ವಭಾವಿಯಾಗಿ ಸೆಪ್ಟೆಂಬರ್ 16ರಂದು ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜಯಂಟ್ಸ್ ತಂಡಗಳ ನಡುವೆ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ವಿಶೇಷ ಪಂದ್ಯ ನಡೆಯಲಿದೆ.
ಬಿಸಿಸಿಐ ಅಧ್ಯಕ್ಷ, ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇಂಡಿಯಾ ಮಹಾರಾಜಾಸ್ ತಂಡದ ಸಾರಥ್ಯ ವಹಿಸಲಿದ್ದು, ವರ್ಲ್ಡ್ ಜಯಂಟ್ಸ್ ತಂಡವನ್ನು ಇಯಾನ್ ಮಾರ್ಗನ್ ಮುನ್ನಡೆಸಲಿದ್ದಾರೆ. ಜಾಕ್ ಕಾಲಿಸ್, ಡೇಲ್ ಸ್ಟೇನ್, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಬ್ರೆಟ್ ಲೀ ಹಾಗೂ ಹರ್ಷಲ್ ಗಿಬ್ಸ್ ಸೇರಿದಂತೆ 10 ವಿದೇಶಿ ತಂಡಗಳ ಆಟಗಾರರು ವರ್ಲ್ಡ್ ಜಯಂಟ್ಸ್ ತಂಡದ ಭಾಗವಾಗಲಿದ್ದಾರೆ. ಮತ್ತೊಂದೆಡೆ ಇಂಡಿಯಾ ಮಹಾರಾಜಾಸ್ ತಂಡದಲ್ಲಿ ವೀರೇಂದ್ರ ಸೆಹ್ವಾಗ್, ಮುಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಅವರಂತಹ ದಿಗ್ಗಜ ಆಟಗಾರರು ಕಣಕ್ಕಿಳಿಯಲಿದ್ದಾರೆ.
Here are the squads of India Maharajas and World Giants for India's 75th Independence special match. pic.twitter.com/KZOEDabN2h
— CricTracker (@Cricketracker) August 12, 2022
4 ತಂಡ , 15 ಪಂದ್ಯ
ಸೆಪ್ಟೆಂಬರ್ 17ರಿಂದ ಆರಂಭವಾಗಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ನಾಲ್ಕು ತಂಡಗಳು ಪಾಲ್ಗೊಳ್ಳಲಿವೆ. ಆರು ನಗರಗಳಲ್ಲಿ ಒಟ್ಟು 15 ಪಂದ್ಯಗಳು ಆಯೋಜನೆಯಾಗಿದೆ. ಈ ಕುರಿತು ಮಾಹಿತಿ ನೀಡಿದ ಭಾರತದ ಮಾಜಿ ಮುಖ್ಯ ಕೋಚ್ ಮತ್ತು ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್ಸಿ) ಮುಖ್ಯ ಆಯೋಜಕ ರವಿಶಾಸ್ತ್ರಿ, "75ನೇ ಸ್ವಾತಂತ್ರ್ಯೋತ್ಸವ ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ದಿನ. ಇದನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿ ವಿಶೇಷ ಪಂದ್ಯ ಆಯೋಜಿಸಲಾಗುತ್ತಿದೆ," ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ ? : ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನವೇ ಆಘಾತ; ಟೀಮ್ ಇಂಡಿಯಾದ ಪ್ರಮುಖ ಬೌಲರ್ ಔಟ್
ಇಂಡಿಯಾ ಮಹಾರಾಜಾಸ್ ತಂಡ
ಸೌರವ್ ಗಂಗೂಲಿ (ಸನಾಯಕ), ವೀರೇಂದ್ರ ಸೆಹ್ವಾಗ್, ಮುಹಮ್ಮದ್ ಕೈಫ್, ಯೂಸುಫ್ ಪಠಾಣ್, ಎಸ್ ಬದ್ರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಪ್ರಗ್ಯಾನ್ ಓಜಾ, ಅಜಯ್ ಜಡೇಜಾ, ಶರ್ಮಾ ಸಿಂಗ್, ಜೋಗಿಂದರ್.
ವರ್ಲ್ಡ್ ಜಯಂಟ್ಸ್ ತಂಡ
ಇಯಾನ್ ಮಾರ್ಗನ್ (ನಾಯಕ), ಲೆಂಡ್ಲ್ ಸಿಮನ್ಸ್, ಹರ್ಷಲ್ ಗಿಬ್ಸ್, ಜಾಕ್ವೆಸ್ ಕಾಲಿಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಿಯರ್, ನಾಥನ್ ಮೆಕಲಮ್, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇಯ್ನ್, ಹ್ಯಾಮಿಲ್ಟನ್ ಮಸಕಡ್ಜಾ, ಮಶ್ರಫೆ ಮೊರ್ತಝಾ, ಅಸ್ಗರ್ ಅಫ್ಘಾನ್, ಮಿಚೆಲ್ ಜಾನ್ಸನ್, ಕೆವಿನ್ ಒ'ಬ್ರೇನ್, ದಿನೇಶ್ ರಾಮ್ದಿನ್