
- ರಾಸ್ ಟೇಲರ್, ಮಿಚೆಲ್ ಜಾನ್ಸನ್ ಬ್ಯಾಟಿಂಗ್ ಅಬ್ಬರ
- ಹೋರಾಟ ಪ್ರದರ್ಶಿಸದೆ ಶರಣಾದ ಭಿಲ್ವಾರಾ ಕಿಂಗ್ಸ್
ʻಲೆಜೆಂಡ್ಸ್ ಲೀಗ್-2022ʼ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗೌತಮ್ ಗಂಭೀರ್ ಸಾರಥ್ಯದ ಇಂಡಿಯಾ ಕ್ಯಾಪಿಟಲ್ಸ್, ಭಿಲ್ವಾರಾ ಕಿಂಗ್ಸ್ ತಂಡವನ್ನು 104 ರನ್ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಕಿಂಗ್ಸ್ ಬಿಗು ಬೌಲಿಂಗ್ ದಾಳಿಗೆ ಆರಂಭದಲ್ಲಿ ಪತರಗುಟ್ಟಿದ್ದ ಕ್ಯಾಪಿಟಲ್ಸ್, 9 ರನ್ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡಿತ್ತು. 24 ರನ್ ತಲುಪುವಷ್ಟರಲ್ಲಿ 4ನೇ ವಿಕೆಟ್ ಕೂಡ ಪತನವಾಗಿತ್ತು. ಆದರೆ ಆ ಬಳಿಕ ಒಂದಾದ ನ್ಯೂಝಿಲ್ಯಾಂಡ್ನ ಮಾಜಿ ನಾಯಕ ರಾಸ್ ಟೇಲರ್ ಅಮೋಘ ಅರ್ಧಶತಕ (82 ರನ್, 41 ಎಸೆತ,4x4, 6x8 ) ಮತ್ತು ಆಸೀಸ್ ಅನುಭವಿ ವೇಗಿ ಮಿಚೆಲ್ ಜಾನ್ಸನ್ 32 ಎಸೆತಗಳಲ್ಲಿ 62 ರನ್ಗಳಿಸಿ ಕ್ಯಾಪಿಟಲ್ಸ್ ತಂಡವು 7 ವಿಕೆಟ್ ನಷ್ಟದಲ್ಲಿ 211 ರನ್ಗಳಿಸಲು ನೆರವಾಗಿದ್ದರು.
ರಾಹುಲ್ ಶರ್ಮಾ 30 ರನ್ ನೀಡಿ 4 ವಿಕೆಟ್ ಪಡೆದರೆ, ಮಾಂಟಿ ಪನೇಸರ್ 3 ಓವರ್ಗಳ ದಾಳಿಯಲ್ಲಿ 13 ರನ್ ನೀಡಿ 3 ವಿಕೆಟ್ ಪಡೆದರು.
𝗖.𝗛.𝗔.𝗠.𝗣.𝗜.𝗢.𝗡.𝗦 🥹 🏆
— India Capitals (@CapitalsIndia) October 5, 2022
We did say 👉 #RukengeNahi ❤️💙#ICvBK #IndiaCapitals #LegendsLeagueCricket #LegendsAssemble #CapitalsUniverse #GMRSports #GMRGroup pic.twitter.com/o8tibCc60c
ಈ ಸುದ್ದಿ ಓದಿದ್ದೀರಾ ? : ಆಸ್ಟ್ರೇಲಿಯಾಗೆ ಪ್ರಯಾಣ ಬೆಳಸಿದ ಟೀಮ್ ಇಂಡಿಯಾ | ಸೂಟ್ನಲ್ಲಿ ಮಿಂಚಿದ ಕೊಹ್ಲಿ, ರೋಹಿತ್
212 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಲು ಬ್ಯಾಟಿಂಗ್ಗೆ ಇಳಿದ ಇರ್ಫಾನ್ ಪಠಾಣ್ ಸಾರಥ್ಯದ ಭಿಲ್ವಾರಾ ಕಿಂಗ್ಸ್, ಯಾವುದೇ ಹಂತದಲ್ಲೂ ಗೆಲುವಿಗಾಗಿ ಹೋರಾಡಲಿಲ್ಲ. 7 ಮಂದಿ ಬ್ಯಾಟರ್ಗಳು ಎರಡಂಕಿಯ ಮೊತ್ತವನ್ನೇ ತಲುಪಲಿಲ್ಲ. 27 ರನ್ಗಳಿಸಿದ ಶೇನ್ ವಾಟ್ಸನ್ ಅವರದ್ದೇ ಟಾಪ್ ಸ್ಕೋರ್. ಜೇಸಲ್ ಕರಿಯಾ 22 ರನ್, ಯೂಸುಫ್ ಪಠಾಣ್ 6 ರನ್, ನಾಯಕ ಇರ್ಫಾನ್ ಕೇವಲ 2 ರನ್ಗಳಿಸಿ ನಿರ್ಗಮಿಸಿದರು. ಅಂತಿಮವಾಗಿ 18.2 ಓವರ್ಗಳಲ್ಲಿ ಕಿಂಗ್ಸ್, 107 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿತು.
ಕ್ಯಾಪಿಟಲ್ಸ್ ಪರ ಪವನ್ ಸುಯಲ್ (2/27), ಪಂಕಜ್ ಸಿಂಗ್ (2/14) ಮತ್ತು ಪ್ರವೀಣ್ ತಾಂಬೆ (2/19) ತಲಾ ಎರಡು ವಿಕೆಟ್ ಪಡೆದರು. ಭಾನುವಾರ ನಡೆದಿದ್ದ ಕ್ವಾಲಿಫೈಯರ್-1 ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ 4 ವಿಕೆಟ್ ಅಂತರದಲ್ಲಿ ಗೆದ್ದು, ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತ್ತು.