- ಬ್ಯೂನಸ್ ಐರಿಸ್ನಲ್ಲಿ ಜಮಾಯಿಸಿದ 50 ಲಕ್ಷ ಮಂದಿ
- ನೂಕುನುಗ್ಗಲಿನಿಂದಾಗಿ ಟ್ರೋಫಿ ಪರೇಡ್ ಅರ್ಧದಲ್ಲೇ ಸ್ಥಗಿತ
36 ವರ್ಷಗಳ ಬಳಿಕ ವಿಶ್ವಕಪ್ ಗೆದ್ದು ತಾಯ್ನಾಡಿಗೆ ಮರಳಿದ್ದ ಅರ್ಜೆಂಟಿನಾ ತಂಡಕ್ಕೆ ಮಂಗಳವಾರ ರಾತ್ರಿ ಅದ್ಧೂರಿ ಸ್ವಾಗತ ದೊರಕಿತ್ತು. ದೋಹಾದಿಂದ ಅರ್ಜೆಂಟಿನಾದ ರಾಜಧಾನಿ ಬ್ಯೂನಸ್ ಐರಿಸ್ನಲ್ಲಿರುವ ಎಝೀಝಾ ವಿಮಾನ ನಿಲ್ದಾಣಕ್ಕೆ ಮೆಸ್ಸಿ ಬಳಗ ಬಂದಿಳಿದಿತ್ತು.
ಆ ಬಳಿಕ ತೆರೆದ ಬಸ್ನಲ್ಲಿ ಆಟಗಾರರು, ಕೋಚ್ ಲಯೊನೆಲ್ ಸ್ಕಲೋನಿ ಹಾಗೂ ಸಹಾಯಕ ಸಿಬ್ಬಂದಿ ಮೆರವಣಿಗೆಯ ಮೂಲಕ ಮುಖ್ಯ ರಸ್ತೆಗಳಲ್ಲಿ ಸಾಗಿದ್ದರು. ಈ ವೇಳೆ ಚಾಂಪಿಯನ್ನರನ್ನು ಸ್ವಾಗತಿಸಲು ಕಿಲೋ ಮೀಟರ್ಗಳಷ್ಟು ದೂರದಲ್ಲಿ ಜನೋಸ್ತೋಮವೇ ನೆರೆದಿತ್ತು. ಆದರೆ ಜನರ ನೂಕುನುಗ್ಗಲಿನಿಂದಾಗಿ ಟ್ರೋಫಿ ಪರೇಡ್ ಅನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಯಿತು.
ವಿಶ್ವಕಪ್ ಟ್ರೋಫಿ ಮತ್ತು ಚಾಂಪಿಯನ್ನರನ್ನು ಕಣ್ತುಂಬಿಕೊಳ್ಳಲು ರಾಜಧಾನಿ ಬ್ಯೂನಸ್ ಐರಿಸ್ನಲ್ಲಿ ಸುಮಾರು ಐವತ್ತು ಲಕ್ಷಕ್ಕೂ ಅಧಿಕ ಮಂದಿ ಜಮಾಯಿಸಿದ್ದರು. ಜನ ಪ್ರವಾಹದ ನಡುವೆಯೇ ತೆರೆದ ಬಸ್ನಲ್ಲಿ ಆಟಗಾರರು ಒಂದಷ್ಟು ದೂರ ಕ್ರಮಿಸಿದರಾದರೂ, ಆ ಬಳಿಕ ಮುಂದೆ ಹೋಗುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಕೈಮೀರಿ ಹೋಗಬಹುದು ಎಂದು ಅಂದಾಜಿಸಿದ ಪೊಲೀಸರು, ಮೆಸ್ಸಿ ಮತ್ತು ಸಂಗಡಿಗರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ʻಏರ್ ಲಿಫ್ಟ್ʼ ಮಾಡಿದ್ದಾರೆ. ರಾಷ್ಟ್ರ ರಾಜಧಾನಿಯ ಸುತ್ತ ವೈಮಾನಿಕ ಮೆರವಣಿಗೆಯ ಬಳಿಕ ಅವರವರ ನಿವಾಸಕ್ಕೆ ಮರಳಿದ್ದಾರೆ.
Lionel Messi and his World Cup champion teammates had to be airlifted by helicopter from their massive victory parade — after jubilant fans started swarming and jumping onto their open-top bus. https://t.co/LQHFL2GF2V pic.twitter.com/ogzOgZ3LsC
— CBS Mornings (@CBSMornings) December 21, 2022
ಪೂರ್ವ ನಿಗದಿತ ದಾರಿಯಲ್ಲಿ ಜನರು ಕಿಕ್ಕಿರಿದು ಸೇರಿದ್ದ ಕಾರಣ, ಮೆರವಣಿಗೆಯು ಸಾಗಬೇಕಾದ ಮಾರ್ಗವನ್ನು ದಿಢೀರ್ ಆಗಿ ಬದಲಿಸಲಾಗಿತ್ತು. ಅದಾಗಿಯೂ ಕೆಲ ಅಭಿಮಾನಿಗಳು ಆಟಗಾರರಿದ್ದ ಬಸ್ನತ್ತ ಜಿಗಿಯಲು ಪ್ರಯತ್ನಿಸಿದ್ದು, ಈ ವೇಳೆ ಹಲವರು ಗಾಯಗೊಂಡಿದ್ದಾರೆ. ಅಭಿಮಾನಿಗಳು ಬಸ್ನತ್ತ ಜಿಗಿಯಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿದೆ.
Lionel Messi evacuated by helicopter after crowds swarm World Cup winners...some fans tried to just onto buss from a low bridge 💀 #ARGFRA @pmcafrica pic.twitter.com/4yeny4Ml3Q
— Peché Africa 🇿🇦 (@pmcafrica) December 21, 2022
Lionel Messi evacuated by helicopter after crowds swarm World Cup winners‼️😳 pic.twitter.com/8hpUjRMF4r
— Daily Loud (@DailyLoud) December 20, 2022