ಫಿಫಾ ವಿಶ್ವಕಪ್ 2022 | ಮೊದಲ ಪಂದ್ಯದಲ್ಲೇ 'ಫುಟ್‌ಬಾಲ್‌ ದೈತ್ಯ'ರಿಗೆ ಶಾಕ್ ನೀಡಿದ ಸೌದಿ ಅರೇಬಿಯಾ!

Lionel Messi's Argentina Shocked As Saudi Arabia Win 2-1

ಕತಾರ್‌ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಅಚ್ಚರಿ ಎಂಬಂತೆ ಬಲಿಷ್ಠ ಅರ್ಜೆಂಟೀನಾ ತಂಡವನ್ನು ದುರ್ಬಲ ತಂಡ ಸೌದಿ ಅರೇಬಿಯಾವು 2-1 ಗೋಲುಗಳ ಅಂತರದಲ್ಲಿ ಬಗ್ಗುಬಡಿಯುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಕತಾರ್‌ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೆಸ್ಸಿ ಪಡೆಯ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದ ಸೌದಿ ಅರೇಬಿಯಾ, ಮೊದಲ ಪಂದ್ಯದಲ್ಲೇ ಫುಟ್‌ಬಾಲ್‌ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಆ ಮೂಲಕ ಲಿಯೋನೆಲ್ ಮೆಸ್ಸಿ ತಂಡಕ್ಕೆ ಆಘಾತ ನೀಡಿದೆ.

ಪಂದ್ಯ ಆರಂಭವಾಗಿ 10ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ನಾಯಕ ಮೆಸ್ಸಿ, ಅರ್ಜೆಂಟೀನಾಗೆ ಆರಂಭದಲ್ಲೇ ಮುನ್ನಡೆ ಒದಗಿಸಿಕೊಟ್ಟಿದ್ದರು. ಆದರೆ ಆ ಬಳಿಕ 48ನೇ ನಿಮಿಷದಲ್ಲಿ ಅಲ್‌ ಸೆಹ್ರಿ ಮತ್ತು 53ನೇ ನಿಮಿಷದಲ್ಲಿ ಅಲ್‌ ದೌಸಾರಿ ಗಳಿಸಿ ಗೋಲುಗಳ ಮೂಲಕ ಸೌದಿ ಅರೇಬಿಯಾ ಮುನ್ನಡೆ ಸಾಧಿಸಿತು.

ಆರಂಭದಲ್ಲಿ ಅರ್ಜೆಂಟೀನಾ ಮೂರು ಬಾರಿ ಚೆಂಡನ್ನು ಗೋಲು ಬಲೆಯೊಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರೂ ಸಹ, ವಿಡಿಯೋ ಪರಿಶೀಲನೆಯ ಬಳಿಕ ರೆಫ್ರಿ ಗೋಲುಗಳನ್ನು ಅಮಾನ್ಯಗೊಳಿಸಿದ್ದರು. ಈ ಗೆಲುವಿನೊಂದಿಗೆ ಗ್ರೂಪ್‌ 'ಸಿ' ಯಲ್ಲಿ ಸೌದಿ ಅರೇಬಿಯಾ ಮೂರು ಅಂಕ ಗಳಿಸಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್
Image
av 930X180