ಮಹಾರಾಜ ಟ್ರೋಫಿ | ಮಂಗಳೂರು ಯುನೈಟೆಡ್‌, ಮೈಸೂರು ತಂಡ ಪ್ರಕಟ

  • ಆಗಸ್ಟ್‌ 7ರಿಂದ 26ರವರೆಗೆ ನಡೆಯಲಿರುವ ಪಂದ್ಯಾವಳಿ
  • ಮೈಸೂರು, ಬೆಂಗಳೂರಿನಲ್ಲಿ ನಡೆಯಲಿರುವ ಟಿ20 ಟೂರ್ನಿ

ಅರಮನೆ ನಗರಿ ಮೈಸೂರಿನಲ್ಲಿ ಭಾನುವಾರದಿಂದ ಆರಂಭವಾಗಲಿರುವ ‘ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ’ಯ ಟ್ರೋಫಿಯನ್ನು ನಟ ಸುದೀಪ್‌ ಅನಾವರಣಗೊಳಿಸಿದ್ದಾರೆ. ಇದೇ ವೇಳೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳ ನಾಯಕರ ಹೆಸರನ್ನು ಪ್ರಕಟಿಸಲಾಗಿದೆ. 

ಮಂಗಳೂರು ಯುನೈಟೆಡ್‌ ತಂಡವನ್ನು ಆರ್‌ ಸಮರ್ಥ್‌ ಮುನ್ನಡೆಸಲಿದ್ದು, ಕರುಣ್ ನಾಯರ್, ಮೈಸೂರು ವಾರಿಯರ್ಸ್‌ ಸಾರಥ್ಯ ವಹಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸುತ್ತಿರುವ ‘ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ, ಆಗಸ್ಟ್‌ 7ರಿಂದ 26ರವರೆಗೆ ಮೈಸೂರಿನ ಮಾನಸಗಂಗೋತ್ರಿಯ ‘ಶ್ರೀಕಂಠದತ್ತ  ನರಸಿಂಹರಾಜ ಒಡೆಯರ್‌ ಕ್ರೀಡಾಂಗಣ’ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ಮತ್ತು ಮಂಗಳೂರು ಯುನೈಟೆಡ್‌ ತಂಡಗಳು ಮುಖಾಮುಖಿಯಾಗಲಿವೆ.

ಮಂಗಳೂರು ಯುನೈಟೆಡ್‌ ತಂಡ

ಸಮರ್ಥ್ ಆರ್‌ (ನಾಯಕ), ಅಭಿನವ್‌ ಮನೋಹರ್‌, ವೈಶಾಖ್‌ ವಿಜಯ್‌ ಕುಮಾರ್‌, ಅಮಿತ್‌ ವರ್ಮ, ವೆಂಕಟೇಶ್‌ ಎಂ, ಅನೀಶ್ವರ್‌ ಗೌತಮ್‌, ಸುಜಯ್‌ ಸಾತೇರಿ, ರೋಹಿತ್‌ ಕುಮಾರ್‌, ಮೆಕ್‌ನೈಲ್‌ ನರೊನ್ಹ, ಶರತ್‌ ಎಚ್‌.ಎಸ್‌., ಶಶಿ ಕುಮಾರ್‌ ಕೆ., ನಿಕಿನ್‌ ಜೋಸ್‌, ರಘುವೀರ್‌ ಪವಲೂರ್‌, ಅಮೋಘ ಎಸ್‌., ಚಿನ್ಮಯ್‌ ಎನ್‌ ಎ, ಆದಿತ್ಯ ಸೋಮಣ್ಣ, ಯಶೋವರ್ಧನ್‌ ಪರಾಂತಪ್‌, ಧೀರಜ್‌ ಜೆ ಗೌಡ, ಸ್ಟುವರ್ಟ್‌ ಬಿನ್ನಿ (ಕೋಚ್‌), ಸಿ ರಾಘವೇಂದ್ರ (ಸಹಾಯಕ ಕೋಚ್‌).

ಈ ಸುದ್ದಿ ಓದಿದ್ದೀರಾ  ? : ಕಾಮನ್‌ವೆಲ್ತ್‌ ಗೇಮ್ಸ್‌ | ಸೆಮಿಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

ಮೈಸೂರು ವಾರಿಯರ್ಸ್‌ ತಂಡ

ಕರುಣ್ ನಾಯರ್ (ನಾಯಕ) ಶ್ರೇಯಸ್‌ ಗೋಪಾಲ್, ಪವನ್‌ ದೇಶಪಾಂಡೆ, ವಿದ್ಯಾಧರ ಪಾಟೀಲ, ನಿಹಾಲ್‌ ಉಲ್ಲಾಳ್ ಮತ್ತು ಚಿರಂಜೀವಿ (ವಿಕೆಟ್‌ ಕೀಪರ್‌), ಪ್ರತೀಕ್‌ ಜೈನ್, ಭರತ್‌ ಧೂರಿ, ಶುಭಾಂಗ್‌ ಹೆಗಡೆ, ಲೋಚನ್‌ ಅಪ್ಪಣ್ಣ, ಶಿವರಾಜ್‌, ಮೋನಿಶ್‌ ರೆಡ್ಡಿ, ವರುಣ್‌ ರಾವ್, ರಾಹುಲ್‌ ಪ್ರಸನ್ನ, ನಿತಿನ್ ಬಿಲ್ಲೆ, ಆದಿತ್ಯ ಗೋಯಲ್‌, ಅಭಿಷೇಕ್ ಅಲಾವತ್‌, ನಾಗ ಭರತ್, ಅರುಣ್ ಕೆ ಹಾಗೂ ತುಷಾರ್‌ ಎಚ್‌ ಪಿ ವಿ ಶಶಿಕಾಂತ್‌ (ಮುಖ್ಯ ಕೋಚ್‌)  ಕೆ ಎಲ್ ಅಕ್ಷಯ್ (ಸಹಾಯಕ ಕೋಚ್)

ನಿಮಗೆ ಏನು ಅನ್ನಿಸ್ತು?
0 ವೋಟ್