ಮೊರೆಕ್ಕೊ ತಂಡಕ್ಕೆ ಅಭೂತಪೂರ್ವ ಸ್ವಾಗತ; ಆಟಗಾರರಿಗೆ ದೇಶದ ಅತ್ಯುನ್ನತ ಪ್ರಶಸ್ತಿ

  • ರಬಾತ್‌ನ ಮುಖ್ಯ ಬೀದಿಗಳಲ್ಲಿ ತೆರೆದ ಬಸ್ಸಿನಲ್ಲಿ ಮೆರವಣಿಗೆ
  • ಅರಮನೆಯಲ್ಲಿ ಆಟಗಾರರಿಗೆ ದೇಶದ ಅತ್ಯುನ್ನತ ಗೌರವ 

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶದ ಮೂಲಕ ಎಲ್ಲರ ಗಮನ ಸೆಳೆದಿದ್ದ ಮೊರೆಕ್ಕೊ ಆಟಗಾರರಿಗೆ ತವರಿನಲ್ಲಿ ಅಭೂತಪೂರ್ವ ಸ್ವಾಗತ ದೊರೆತಿದೆ.

ಮೊರೆಕ್ಕೊ ರಾಜಧಾನಿ ರಬಾತ್‌ನ ಮುಖ್ಯ ಬೀದಿಗಳಲ್ಲಿ ತೆರೆದ ಬಸ್ಸಿನಲ್ಲಿ ಮೆರವಣಿಗೆ ಸಾಗಿದ ಆಟಗಾರರನ್ನು, ರಸ್ತೆಯುದ್ದಕ್ಕೂ ಸಾವಿರಾರು ಜನರು ಅಭಿನಂದಿಸಿದರು. ಚಾಂಪಿಯನ್‌ ತಂಡ ಅರ್ಜೆಂಟಿನಾದ ಆಟಗಾರರು ತಂಡದ ಜೆರ್ಸಿಯಲ್ಲಿ ಮರವಣಿಗೆಯ ಭಾಗವಾದರೆ, ಮೊರೆಕ್ಕೊ ಆಟಗಾರರು ಸೂಟ್‌, ಟೈ ಧರಿಸಿ ಮಿಂಚಿದರು. ಕೊನೆಯಲ್ಲಿ ಕುಟುಂಬ ಸಮೇತ ದೊರೆ ಆರನೇ ಮೊಹಮ್ಮದ್‌ ಅವರ ಅರಮನೆಗೆ ಭೇಟಿ ನೀಡಿದ ಆಟಗಾರರಿಗೆ ದೇಶದ ಅತ್ಯುನ್ನತ ಗೌರವ ಪದಕ ನೀಡಿ ಗೌರವಿಸಲಾಯಿತು.  

Eedina App

ಕತಾರ್‌ನಲ್ಲಿ ನಡೆದ 22ನೇ ಆವೃತ್ತಿಯ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಮೊರೆಕ್ಕೊ ತಂಡವು ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಆ ಮೂಲಕ 92 ವರ್ಷಗಳ ಟೂರ್ನಿಯಲ್ಲಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ ಮೊದಲ ಆಫ್ರಿಕನ್‌ ತಂಡ ಎಂಬ ಖ್ಯಾತಿಗೆ ಪಾತ್ರವಾಗಿತ್ತು. 

ಫಿಫಾ ಶ್ರೇಯಾಂಕದಲ್ಲಿ ದ್ವಿತೀಯ ಸ್ಥಾನದಲ್ಲಿರುವ ಬೆಲ್ಜಿಯಂ, ಮಾಜಿ ಚಾಂಪಿಯನ್‌ ಸ್ಪೇನ್‌ ಹಾಗೂ ದಿಗ್ಗಜರನ್ನು ಒಳಗೊಂಡ ಪೋರ್ಚುಗಲ್‌ಗೆ ಸೋಲಿನ ರುಚಿ ತೋರಿಸಿದ್ದ ಮೊರೆಕ್ಕೊ ತಂಡವನ್ನು ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ ಫ್ರಾನ್ಸ್‌ ಮಣಿಸಿತ್ತು. ಆ ಬಳಿಕ  ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ 1–2 ಗೋಲುಗಳ ಅಂತರದಲ್ಲಿ ಕ್ರೊವೇಷಿಯಾಗೆ ಶರಣಾಗಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app